ಬೀದರ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ ಅನ್ನು ಮನೆಮನೆಗೆ ಹಂಚುವ ನೆಪದಲ್ಲಿ ಜನರಿಂದ ಆಧಾರ ಕಾರ್ಡ್ ಮತ್ತಿತರೆ ಕಾರ್ಡ್ ತೆಗೆದುಕೊಂಡು ಜನರ ವೈಯಕ್ತಿಕ ಡಾಟಾ ಕದಿಯಲಾಗುತ್ತಿದೆಯೆಂಬ ದೂರು ಬೀದರನಲ್ಲಿ ಕೇಳಿಬಂದಿದೆ.
ಬೀದರ್ ಜಿಲ್ಲೆ ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು ಮನೆಗೆ ಗ್ಯಾರಂಟಿ ಕಾರ್ಡ್ ತೆಗೆದುಕೊಂಡು ಬಂದಿದ್ದ ಮಹಿಳೆಯೊಬ್ಬರನ್ನು ಕುಟುಂಬದ ಯಜಮಾನರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ಬೀದರ್ ಉತ್ತರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಶಾಸಕ ರಹೀಮ ಖಾನ್ ತಮ್ಮನ್ನು ಕಳಿಸಿದ್ದಾಗಿ ಅವರು ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ ಬಗ್ಗೆ ತಿಳಿಸಿ ಆಮೇಲೆ ಮೊಬೈಲ್ ನಂಬರ್ ಹಾಗು ಆಧಾರ ಕಾರ್ಡ, ಓಟರ್ ಕಾರ್ಡ್ ಸಂದಾಯ ಮಾಡಲು ಹೇಳಿದ್ದಾರೆ. ಇದು ಮುಂದೆ ಆ ಕಾರ್ಡುಗಳ ದುರುಪಯೋಗಕ್ಕೆ ಕಾರಣವಾಗಬಹುದು. ಆ ಬಗ್ಗೆ ಮತದಾರರು ಆ ಮಹಿಳೆಗೆ ಹೇಳಿದಾಗ ತಾವು ಕಾಂಗ್ರೆಸ್ ಪಕ್ಷದ ಪರವಾಗಿ ಬಂದಿದ್ದು ತಮಗೆ ಹೆಚ್ಚೇನೂ ತಿಳಿದಿಲ್ಲ ಎಂದು ಉತ್ತರಿಸಿದ್ದಾರೆ. ಈ ವಿಡಿಯೋ ಈಗ ಜಿಲ್ಲಾದ್ಯಂತ ವೈರಲ್ ಆಗಿದೆ.
ಈ ಬಗ್ಗೆ ಜಿಲ್ಲಾ ಚುನಾವಣೆ ಅಧಿಕಾರಿಗಳು ಯಾವ ರೀತಿ ಕಾನೂನು ಕ್ರಮಕ್ಕೆ ಮುಂದೆ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ