ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದ ಅರ್ಜಿ ದಿನಾಂಕ ವಿಸ್ತರಣೆ

Must Read

ಬೆಳಗಾವಿ ಜಿಲ್ಲಾ ಘಟಕ ಮಹಾಸಭೆಯು ಸುಭಾಷ ನಗರ, ಎಸ್.ಪಿ.ಆಫೀಸ್ ಹಿಂದೆ ನೂತನವಾಗಿ ನಿರ್ಮಿಸಿರುವ ‘ವೀರಶೈವ ಲಿಂಗಾಯತ ಮಹಿಳಾ ವಸತಿ ಗೃಹ, ಕ್ಷೇಮಾಭಿವೃದ್ಧಿ ಸಂಘ, ಬೆಳಗಾವಿ’ ಇವರಿಂದ ಬಡ ವಿದ್ಯಾರ್ಥಿನಿಯರಿಗೆ ವಸತಿ ನಿಲಯಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವೀರಶೈವ ಲಿಂಗಾಯತ ಸಮಾಜದ ಪಿಯುಸಿ, ಪದವಿ, ಇಂಜಿನಿಯರಿಂಗ್, ಎಂಬಿಬಿಎಸ್, ಡಿಪ್ಲೋಮಾ ಕೋರ್ಸುಗಳಲ್ಲಿ ಅಧ್ಯಯನ ಮಾಡುತ್ತಿರುವ ಬಡ ವಿದ್ಯಾರ್ಥಿನಿಯರು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿಯನ್ನು ದಿನಾಂಕ 5.7.2025ರ ವರೆಗೆ ವಿಸ್ತರಿಸಲಾಗಿದೆ.

ಅರ್ಜಿ ಕಳುಹಿಸುವ ವಿಳಾಸ: “ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಲಿಂಗಾಯತ ಭವನ, ಶಿವಬಸವ ನಗರ ಬೆಳಗಾವಿ, ತಾ.ಜಿ.ಬೆಳಗಾವಿ” ಇವರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಕಾಲೇಜಿನ ಪ್ರವೇಶ ಪಡೆದ ರಸೀದಿ, ಬಿಪಿಎಲ್ ಕಾರ್ಡ್, ಆಧಾರ ಕಾರ್ಡ, ರಹವಾಸಿಯ ದೃಢೀಕೃತ ಪ್ರಮಾಣಪತ್ರವನ್ನು ಲಗತ್ತಿಸಿರಬೇಕು. ಹೆಚ್ಚಿನ ಮಾಹಿತಿಗೆ ಬೆಳಗಾವಿ ಜಿಲ್ಲಾ ಘಟಕ ಮಹಾಸಭೆಯ ಕಚೇರಿಯ ದೂರವಾಣಿ ಸಂಖ್ಯೆ: 0831 2475145 ಅಥವಾ ಪ್ರವೀಣ ತವಕರಿ: 6366316671 ಇವರನ್ನು ಸಂಪರ್ಕಿಸಬೇಕೆಂದು ಬೆಳಗಾವಿ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಹಾಗೂ ವಸತಿ ನಿಲಯದ ಕಾರ್ಯದರ್ಶಿಗಳಾದ ಡಾ.ಪ್ರೀತಿ ದೊಡವಾಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಸಂಘಗಳಿಂದ ರೈತರ ಹೋರಾಟಕ್ಕೆ ಬೆಂಬಲ ಘೋಷಣೆ

ಹಳ್ಳೂರ- ಗ್ರಾಮದ ಶ್ರೀ ಬಸವೇಶ್ವರ ವೃತ್ತದಲ್ಲಿ ಹಳ್ಳೂರ, ಹಾಗೂ ಶಿವಾಪೂರ ಗ್ರಾಮದ ಸಹಕಾರಿ ಸಂಘ ಹಾಗೂ ಬ್ಯಾಂಕುಗಳ ಸಿಬ್ಬಂದಿಗಳು ಸ್ವಯಂ ಪ್ರೇರಿತವಾಗಿ ಒಂದು ದಿನ ಸಹಕಾರಿ,...

More Articles Like This

error: Content is protected !!
Join WhatsApp Group