ಬೀದರ – ನಗರದ ಕರ್ನಾಟಕ ಕಾಲೇಜಿನ ಬಳಿ ಬಸ್ ನಿಲ್ದಾಣದಲ್ಲಿ ಮೃತ ದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಹೈದ್ರಾಬಾದ್ ಮೂಲದ ಸೈಲಾನಿ ಚೋಟುಮಿಯ್ಯಾ(45) ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆ ಹೈದ್ರಾಬಾದ್ ನಿಂದ ಬೀದರ್ ನ ಸಂಬಂಧಿಕರ ಮನೆಗೆ ಬಂದಿದ್ದ. ಈಗ ಮೃತವಾಗಿ ಪತ್ತೆಯಾಗಿದ್ದು ಸಾವಿನ ಕಾರಣ ತಿಳಿದು ಬಂದಿಲ್ಲ
ಸ್ಥಳಕ್ಕೆ ಪಿಎಸ್ ಐ ಉಷಾಬಾಯಿ, ಎಎಸ್ ಐ ಇಬ್ರಾಹಿಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ