spot_img
spot_img

ಕಾರ್ಯನಿರತ ಪತ್ರಕರ್ತ ಪದಾಧಿಕಾರಿಗಳಿಗೆ ಆತ್ಮೀಯ ಸನ್ಮಾನ

Must Read

ಸಿಂದಗಿ: ಪಟ್ಟಣದ ಉದಯಕಾಲ ಪತ್ರಿಕಾ ಕಾಯಾಲಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಪದಾದಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತ ಪಂಡಿತ ಯಂಪೂರೆ ಮಾತನಾಡಿ, ಸೋಲು ಗೆಲವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣ ಪ್ರತಿಯೊಬ್ಬರಲ್ಲಿ ಬಂದಾಗ ಮಾತ್ರ ದ್ವೇಷವನ್ನು ಅಳಿಸಲು ಸಾಧ್ಯ. ಸ್ಪರ್ಧಾ ಕಣದಲ್ಲಿ ಮಾತ್ರ ಎದುರಾಳಿ ಆಯ್ಕೆಯಾದ ನಂತರ ಸದಸ್ಯರಲ್ಲಿ ಜಾತಿಯ ಲೇಪ ಬಿತ್ತದೆ ಎಲ್ಲರು ಒಂದೇ ಎನ್ನುವ ಭಾವನೆ ತಾಳಬೇಕು ಮತ್ತು ಎಲ್ಲರು ಒಕ್ಕಟ್ಟಿನಿಂದ ಪ್ರದರ್ಶನ ನೀಡುವ ಮೂಲಕ ಅಭಿವೃದ್ಧಿಪಥದತ್ತ ದಾಪುಗಾಲು ಹಾಕಬೇಕು ಎಂದು ಸಲಹೆ ನೀಡಿದರು.

ನೂತನ ಅಧ್ಯಕ್ಷ ಅನಂದ ಶಾಬಾದಿ ಮಾತನಾಡಿ, ಚುನಾವಣೆಯಲ್ಲಿ ಮಾತ್ರ ನಾವೆಲ್ಲ ಸ್ಪರ್ಧಿಗಳು ಅಯ್ಕೆಯಾದ ಬಳಿಕ ಎಲ್ಲರು ಒಂದೇ ಕಾರಣ ಆಡಳಿತಕ್ಕೆ ಸಹಕಾರ ನೀಡಿ ಎಂದರು.

ಉಪಾಧ್ಯಕ್ಷ ಮಲ್ಲಿಕಾರ್ಜುನ ಅಲ್ಲಾಪುರ ಮಾತನಾಡಿ, ಅಧಿಕಾರದ ಅಪೇಕ್ಷೆ ಪಟ್ಟವನಲ್ಲ ಸಂದರ್ಭ ಹಾಗೆ ಮಾಡಿದೆ ಚುನಾವಣೆಯಲ್ಲಿ ಸೋಲು ಗೆಲುವುಗಳನ್ನು ಲೆಕ್ಕಿಸದೇ ಎಲ್ಲರು ಕಾರ್ಯೋನ್ಮುಖ ರಾಗೋಣ ಎಂದು ತಿಳಿಸಿದರು.

ಖಜಾಂಚಿ ವಿಜಯಕುಮಾರ ಪತ್ತಾರ, ಪ್ರಧಾನ ಕಾರ್ಯದರ್ಶಿ ಭೀಮರಾಯ ಕೆಂಬಾವಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಲೀಮ್ ಪಟೇಲ ಮರ್ತೂರ, ಗಪೂರ ಮುಜಾವರ, ಆರೀಫ್ ಅಂತರಗಂಗಿ, ಇಸ್ಮಾಯಿಲ್ ಶೇಖ, ತೌಸೀಪ ನಾಟೀಕಾರ, ಮಹಿಬೂಬ ಮುಲ್ಲಾ ಇದ್ದರು.

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!