- Advertisement -
ಸಿರೋಹಿ (ರಾಜಸ್ಥಾನ) – ಕುಡಿಯಲು ನೀರು ಸಿಗದೇ ಭೀಕರ ಬಾಯಾರಿಕೆಯಿಂದ ೫ ವರ್ಷದ ಬಾಲೆಯೊಬ್ಬಳು ಮೃತಪಟ್ಟ ಹೃದಯವಿದ್ರಾವಕ ಘಟನೆ ಪಶ್ಚಿಮ ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ಘಟಿಸಿದೆ.
ಜಲೋರ್ ಜಿಲ್ಲೆಯ ಹಳ್ಳಿಯೊಂದರ ನಿವಾಸಿಯಾಗಿರುವ ೬೦ ವರ್ಷದ ಮಹಿಳೆಯೊಬ್ಬಳು ತನ್ನ ೫ ವರ್ಷದ ಮೊಮ್ಮಗಳೊಂದಿಗೆ ಬೇರೊಂದು ಊರಿನಿಂದ ಮರಳುವಾಗ ದೂರದ ದಾರಿ ಬಿಟ್ಟು ಸಮೀಪದ ಬೆಟ್ಟ ಗುಡ್ಡ ಹಾಗೂ ಮರುಭೂಮಿಯ ದಾರಿ ಹಿಡೊದಿದ್ದರು. ಆದರೆ ಅವರು ತಮ್ಮೊಂದಿಗೆ ನೀರು ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ.
ಸುಡು ಬಿಸಿಲು ಹಾಗೂ ಬಾಯಾರಿಕೆಯಿಂದ ಬಳಲಿದ ಬಾಲಕಿಗೆ ಸರಿಯಾದ ಸಮಯಕ್ಕೆ ನೀರು ಸಿಗಲಿಲ್ಲವಾದ ಕಾರಣ ಅಸು ನೀಗಿದಳೆಂಬುದಾಗಿ ವರದಿಯಾಗಿದೆ.
- Advertisement -
ಪೊಲೀಸರು ಮಹಿಳೆಯನ್ನು ರಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.