spot_img
spot_img

ನಮ್ಮ ಪ್ರೀತಿಯ ‘ಅಪ್ಪು’ ಇನ್ನಿಲ್ಲ; ಚಿತ್ರರಂಗಕ್ಕೆ ಬರಸಿಡಿಲು

Must Read

- Advertisement -

ಬೆಂಗಳೂರು – ಕನ್ನಡ ಚಿತ್ರ ರಸಿಕರ, ಅಭಿಮಾನಿಗಳ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಕೇವಲ 46 ವರ್ಷ ವಯಸ್ಸಿನ ಪುಟಿಯುವ ಚೆಂಡಿನಂತಿದ್ದ ಪುನೀತ್ ಜಿಮ್ ಮಾಡುವಾಗಲೇ ತೀವ್ರ ಹೃದಯಾಘಾತಕ್ಕೆ ಬಲಿಯಾಗಿದ್ದು ನಿಜಕ್ಕೂ ಆಘಾತಕಾರಿ. ಈ ಮೂಲಕ ಸ್ಯಾಂಡಲ್ ವುಡ್ ನ ದೊಡ್ಮನೆಯ ಕೊಂಡಿಯೊಂದು ಕಳಚಿದಂತಾಗಿದೆ.

ಕನ್ನಡ ವರನಟ ರಾಜಕುಮಾರ ಅವರ ಮೂರನೆಯ ಪುತ್ರರಾಗಿದ್ದ ಪುನೀತ್ ಚಿಕ್ಕವರಿದ್ದಾಗಲೇ ಲೋಹಿತ ಎಂಬ ಹೆಸರಿನಿಂದ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದರು.

- Advertisement -

ಬಾಲನಟನಾಗಿ ವಸಂತ ಗೀತ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಹಿನ್ನೆಲೆ ಗಾಯಕನಾಗಿಯೂ ಅಪಾರ ಮೆಚ್ಚುಗೆ ಗಳಿಸಿದ್ದರು.

ಪುನೀತ್ ಜನನ 17 ಮಾರ್ಚ್,1975 . ತಂದೆ ಡಾ. ರಾಜಕುಮಾರ್ ಗರಡಿಯಲ್ಲಿ ಬೆಳೆದು ಅನೇಕ ಚಿತ್ರಗಳಲ್ಲಿ ನಟಿಸಿ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಗಳಿಸಿದ್ದರು.

- Advertisement -

ಪುನೀತ್ 26 ಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ನಾಯಕನಾಗಿ ಪುನೀತ್ ರವರ ಮೊದಲ ಪ್ರಮುಖ ಪಾತ್ರದಲ್ಲಿ 2002 ರಲ್ಲಿ ಅಪ್ಪು ಚಿತ್ರದಲ್ಲಿ ಅಭಿನಯಿಸಿದರು.

  • ಅಭಿ (2003),
  • ಆಕಾಶ್ (2005),
  • ಅರಸು (2007),
  • ಮಿಲನ (2007),
  • ಜಾಕೀ (2010),
  • ಹುಡುಗರು (2011),
  • ಅಣ್ಣಾ ಬಾಂಡ್ (2012)
  • ಪವರ್ (2014)

ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಟಿವಿ ಶೋ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಅಪ್ಪು ಅಪಾರ ಜನಮನ್ನಣೆ ಗಳಿಸಿದರು.

ಸದಾ ಹಸನ್ಮುಖಿಯಾಗಿ ಕನ್ನಡ ಚಲನಚಿತ್ರ ರಂಗದ ಪ್ರೀತಿಯ ಅಪ್ಪು ಆಗಿದ್ದ ಪುನೀತ್ ರಾಜಕುಮಾರ ಚಿಕ್ಕ ವಯಸ್ಸಿನಲ್ಲಿಯೇ ನಿಧನ ಹೊಂದಿದ್ದು ಚಿತ್ರರಂಗದ ಪ್ರಮುಖ ಆಸ್ತಿಯೊಂದನ್ನು ಕಳೆದುಕೊಂಡಂತಾಗಿದೆ. ತಮ್ಮ ಆಕರ್ಷಕ ನಟನೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಎಲ್ಲರ ಪ್ರೀತಿಯ ಅಪ್ಪು ಸಾವಿನ ನಂತರವೂ ತಮ್ಮ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಅಭಿಮಾನಿಗಳೆ ದೇವರು, ಅವರಿದ್ದರೇ ನಾವು ಎಂಬ ಡಾ. ರಾಜ್ ಅವರ ಧ್ಯೇಯ ವಾಕ್ಯದಂತೆಯೇ ನಡೆದ ಪುನೀತ್ ಅವರನ್ನು ಕನ್ನಡದ ಮನಸುಗಳು ಎಂದೂ ಮರೆಯಲಾರವು.

ಟೈಮ್ಸ್ ಆಫ್ ಕರ್ನಾಟಕ ಬಳಗದ ಹೃತ್ಪೂರ್ವಕ ಶೃದ್ಧಾಂಜಲಿ.

ಮತ್ತೆ ಹುಟ್ಟಿ ಬಾ ಅಪ್ಪು…🥺

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group