ಮೂಡಲಗಿ: ತಾಲೂಕಿನ ನಾಗನೂರ ಗ್ರಾಮದ ಶಿವಪ್ಪ ಪ್ಯಾಟಿ ಎಂಬುವರ ಮಗ ಶ್ರೀಧರ ಶಿವಪ್ಪ ಪ್ಯಾಟಿ (19) ಸಿಲಿಂಡರ ಸ್ಪೋಟಗೊಂಡು ಸಾವನಪ್ಪಿರುವ ದುರ್ಘಟನೆ ಶುಕ್ರವಾರ ಸಂಭವಿಸಿದೆ.
ಮೂಡಲಗಿಯಲ್ಲಿ ಕಾಲೇಜಿನ BSC ನಸಿ೯ಂಗ ವ್ಯಾಸಂಗ ಮಾಡುತ್ತಿದ್ದ ಶ್ರೀಧರ ತಂದೆ ತಾಯಿಗಳು ಊರಿಗೆ ಹೋಗಿರುವ ಸಂದರ್ಭದಲ್ಲಿ ಶುಕ್ರವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದು ಚಹಾ ಮಾಡಲು ಸಿಲಿಂಡರ ಹೊತ್ತಿಸಿದ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆಯೆನ್ನಲಾಗಿದೆ.
ಅನಿಲ ಸೋರಿಕೆಯಿಂದ ಬೆಂಕಿ ತಗುಲಿ ಆಸ್ಪತ್ರೆಗೆ ಸಾಗಿಸುವ ಮಾಗ೯ ಮಧ್ಯೆ ಶ್ರೀಧರ ಸಾವನ್ನಪ್ಪಿದ್ದಾನೆ ಎಂದು ಸಾವ೯ಜನಿಕರಿಂದ ತಿಳಿದು ಬಂದಿದೆ.
ಗ್ಯಾಸ ಕಂಪನಿಯವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ನಂತರ ಇದು ಗ್ಯಾಸ ಸಿಲಿಂಡರದಿಂದ ಆಗಿದೆಯೋ ಇಲ್ಲವೊ ಎಂದು ಗೊತ್ತಾಬೇಕಾಗಿದೆ. ಮೃತ ವಿದ್ಯಾರ್ಥಿಯ ತಂದೆ ಶಿವಪ್ಪ ಪ್ಯಾಟಿ ನಾಗನೂರ ಸರಕಾರಿ ಶಾಲೆಯ ಶಿಕ್ಷಕರಾಗಿದ್ದು ಘಟನೆಯ ದಿನ ತಂದೆ ತಾಯಿಗಳು ರಾಮದುಗ೯ ತಾಲೂಕಿನ ಶಿವಪೇಟೆ ಗ್ರಾಮಕ್ಕೆ ಹಬ್ಬಕ್ಕೆ ಎಂದು ಹೋಗಿದ್ದರೆನ್ನಲಾಗಿದೆ. ಶಿವಪ್ಪ ಪ್ಯಾಟಿ ಇವರಿಗೆ ಮೂರು ಜನ ಗಂಡು ಮಕ್ಕಳು ಪ್ರಥಮ ಪ್ರುತ್ರನೆ ಶ್ರೀಧರ ಸ್ಥಳಕ್ಕೆ ಮೂಡಲಗಿ ಪೋಲಿಸ ಅಧಿಕಾರಿಗಳು ಭೇಟಿಯಿತ್ತು ಘಟನಾ ಸ್ಥಳವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.