ಸಾಲ ಮಾಡಿದ ಮೇಲೆ ತೀರಿಸದೆ ಮುಕ್ತಿ ಸಿಗುವುದಿಲ್ಲ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಪ್ರಜಾಪ್ರಭುತ್ವದಲ್ಲಿ ಮಹಾತ್ಮರೆಲ್ಲಿ? ಪ್ರಜೆಗಳಲ್ಲಿ ಅಡಗಿರುವ‌ ಆತ್ಮಶಕ್ತಿಯನ್ನು ಹೆಚ್ಚಿಸುವವರೆ ಮಹಾತ್ಮರು. ಆತ್ಮಶಕ್ತಿಗೂ ದೇಹಶಕ್ತಿಗೂ ವ್ಯತ್ಯಾಸ ವಿದೆ. ಆತ್ಮಶಕ್ತಿಗೆ ಆಧ್ಯಾತ್ಮದ ಶಿಕ್ಷಣದಿಂದ, ಯೋಗದಿಂದ ಬೆಳೆಸಬೇಕು.

ದೇಹಶಕ್ತಿಗೆ ಆರೋಗ್ಯಕರ ಆಹಾರವನ್ನು ನೀಡಬೇಕು. ಸರ್ಕಾರ ಪ್ರಜೆಗಳಿಗೆ ದೇಹಶಕ್ತಿ ನೀಡುವ ಉದ್ದೇಶದಿಂದ ಉಚಿತ ಆಹಾರ ಪದಾರ್ಥಗಳ ಜೊತೆಗೆ ಊಟದ ವ್ಯವಸ್ಥೆ ಮಾಡಿತು. ಇದರಿಂದಾಗಿ ದೇಹವನ್ನು ಬೆಳೆಸಿಕೊಂಡವರು ತಮ್ಮನ್ನು ತಾವರಿಯಲಾಗದೆ ಸೋಮಾರಿಗಳಾಗಿ ಬೆಳೆದರು. ಸೋ,ಮಾರಿಯ ದರ್ಶನ ಪಡೆದರು.

ಅದನ್ನು ತಡೆಯಲು ಸರ್ಕಾರ ವಿದೇಶದೆಡೆಗೆ ನಡೆದರು.ವಿದೇಶದಿಂದ ಹೊಸ ಮಾರಿಯನ್ನು ಕರೆದರು. ಈಗಿದು ಇಡೀ ವಿಶ್ವದೆಲ್ಲೆಡೆ ಹರಡುತ್ತಿದೆ. ಜೀವ ಉಳಿಸಿಕೊಳ್ಳಲು ಮಾನವಪ್ರಯತ್ನ ನಡೆದಿದೆ. ಇವರಿಗೆ ಸಹಕಾರ ನೀಡಲು ಬಂದ ಆಧ್ಯಾತ್ಮ ಚಿಂತಕರಿಗೆ ಇದರ ಮೂಲವೇ ಅಜ್ಞಾನದ ಜೀವನ ಯಾತ್ರೆ ಎಂದು ಅರ್ಥ ಆದರೂ, ಶಿಕ್ಷಣದ ಮೂಲಕ ಸಾತ್ವಿಕತೆ ಬೆಳೆಸೋ ಅಧಿಕಾರ ಇಲ್ಲವೆ? ಇಡೀ ದೇಶವೇ ರೋಗದಿಂದ ನರಳುವಾಗ ಅದೇ ಎಲ್ಲಾ ಕಡೆಯಿರೋವಾಗ ನಾವು ಮಾತ್ರ ಬೇರೆಯೆ? ಧಾರ್ಮಿಕ ಕ್ಷೇತ್ರದವರನ್ನೂ ಬಿಡದೆ ತನ್ನ ರೌದ್ರ ರೂಪ ತೋರಿಸಿದ ಮಾರಿಯನ್ನು ಹಣದಿಂದ ಶಾಂತಗೊಳಿಸಲು ಸಾಧ್ಯವೆ? ವ್ಯವಹಾರದಿಂದ ಪ್ರಾರಂಭವಾಗಿರುವ ರೋಗಕ್ಕೆ ಮದ್ದು ಧಾರ್ಮಿಕತೆಯಿಂದಲೆ ತಿಳಿದು ಶಾಂತಗೊಳಿಸಲು ಧಾರ್ಮಿಕ ಕ್ಷೇತ್ರವೂ ಹಲವಾರು ದೇವತಾರಾಧನೆಯಲ್ಲಿದೆ.

- Advertisement -

ಆದರೆ ಇದನ್ನು ಅರ್ಥ ಮಾಡಿ ಕೊಳ್ಳಲು ಪ್ರಜೆಗಳಿಗೆ ಜ್ಞಾನ ಬೇಕಿದೆ. ಜನರ ಬಾವನೆಗಳಿಗೆ ತಕ್ಕಂತೆ ಪ್ರಕೃತಿ ಬದಲಾಗುತ್ತದೆ. ಪ್ರಕೃತಿ ವಿರುದ್ದ ನಡೆದು ವೈಜ್ಞಾನಿಕ ಚಿಂತನೆಯಲ್ಲಿಯೇ ಕಾಲಕಳೆಯುತ್ತಿದ್ದರೆ ರೋಗಕ್ಕೆ ಮದ್ದು ಬಂದರೂ ತಾತ್ಕಾಲಿಕ ಪರಿಹಾರವೆನ್ನಬಹುದಷ್ಟೆ.

“Prevention is better than cure” ಸಕಾರಾತ್ಮಕ ಚಿಂತನೆ ಒಳ್ಳೆಯದು. ಹಾಗಂತ ರೋಗವೂ ಒಳ್ಳೆಯದೆ? ರೋಗ ಬಂದರೂ ತಮ್ಮ ಕೆಟ್ಟ ಕರ್ಮಕ್ಕೆ ತಡೆಯಾಗಿಲ್ಲವೆಂದರೆ ಇದರಿಂದ ಪ್ರಯೋಜನವಿಲ್ಲ.ನಮ್ಮ ದೇಶದ ರಾಜಕೀಯ ಸ್ಥಿತಿ ಹದಗೆಟ್ಟಿರೋದು ಶಿಕ್ಷಣದಿಂದ. ಇದನ್ನು ತಮ್ಮ ಸ್ವಾರ್ಥ ದ ರಾಜಕೀಯಕ್ಕೆ ಬಳಸಿಕೊಂಡವರು ಮಧ್ಯವರ್ತಿಗಳು.

ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಾದ ಬದಲಾವಣೆಗಳಲ್ಲಿ ಶಿಕ್ಷಣಕ್ಷೇತ್ರಕ್ಕೆ ಹೆಚ್ಚು ಗಮನಕೊಡಲಾಗದೆ, ವಿದೇಶಿಗಳ ಶಾಲಾ ಕಾಲೇಜ್ಗಳು ನಡೆದವು. ಸ್ವದೇಶಿಗಳು ಅವರನ್ನು ಅನುಸರಿಸಿದವು,ಈಗ ಖಾಸಗಿ ಶಾಲೆಗಳೇ ದೇಶದ ತುಂಬಾ ಹರಡಿಕೊಂಡು ಮನಸ್ಸಿಗೆ ಬಂದ ಹಾಗೆ ಪಠ್ಯ ಪುಸ್ತಕಗಳನ್ನು ಅಳವಡಿಸಿಕೊಂಡು, ಮಕ್ಕಳ, ಹಾಗು ಪೋಷಕರ ಸಮಯ ಹಾಗು ಹಣವನ್ನು ಬಳಸಿಕೊಂಡು ವಿಶೇಷವಾದ ವಿಚಾರಗಳನ್ನು ಮಕ್ಕಳಿಗೆ ನೇರವಾಗಿ ತಲೆಗೆ ತುಂಬುದ ಕೆಲಸದಲ್ಲಿಮುಂದಾದರು.

ಬಹಳ ಬೇಗ ಬುದ್ದಿವಂತರಾದರೆ ಉತ್ತಮವೆಂಬ ಭ್ರಮೆಯಲ್ಲಿ ಪೋಷಕರೂ ಸಹಕರಿಸಿದರು ಮಕ್ಕಳ ಮುಗ್ದತೆಯನ್ನು ಹಾಳು ಮಾಡಿ ಪ್ರಭುದ್ದತೆಯ ವಿಷದ ವಿಷಯಗಳನ್ನು ತಲೆಗೆ ತುಂಬಿ ತಮ್ಮ ತಮ್ಮಸ್ವಾರ್ಥ ದ ಭೌತಿಕಾಸಕ್ತಿ ಪೋಷಕರಾದವರೆ ಬೆಳೆಸಿದರೆ ಮಕ್ಕಳ ಆಂತರಿಕ ಶಕ್ತಿ ಕುಸಿದು ಕೇವಲ ಭೌತಿಕಾಸಕ್ತಿ ಹೆಚ್ಚಿಸಿಕೊಂಡು ಪೋಷಕರನ್ನೇ  ಶೋಷಣೆಮಾಡೋ ಮಟ್ಟಿಗೆ ಬೆಳೆಯುತ್ತಾರೆ.

ಆದರೆ, ಅದೇ ಈಗ ತಿರುಗಿ ನಿಂತು ಪ್ರಶ್ನೆ ಮಾಡುತ್ತಿದೆ.ಸಾಮಾನ್ಯಜ್ಞಾನದ ಕೊರತೆ ಜನರಲ್ಲಿ ಮನೆ ಮಾಡಿದೆ. ಸರ್ಕಾರ ಎಂದರೆ ಜನರ ಜೀವ ಉಳಿಸುವ ದೇವರು. ಹಣ ನೀಡುವ ಬ್ಯಾಂಕ್?ಸಾಲ ಮನ್ನಾ ಮಾಡುವ ರಾಜಕೀಯದಿಂದ ಜನರ ಸಾಲ ಮನ್ನಾ ಆಗಿದೆಯೆ? ಮೇಲಿನ ದೇವರಲ್ಲಿ ಬೆಳೆದು ನಿಂತಿರುವ ಸಾಲದ ಪಟ್ಟಿ ಭೂಮಿ ಮೇಲೆ ಕಾಣಲು ಸಾಧ್ಯವಿಲ್ಲದ ಕಾರಣ ಎಲ್ಲಾ ಬೇಡೋದಕ್ಕೆ ಹುಟ್ಟಿದ್ದೇವೆಂದು ಹಿಂದೆ ನಿಂತರು.

ಈ ವಿಚಾರಗಳನ್ನು ಹಿಂದಿನ ಮಹಾತ್ಮರೆ ತಿಳಿಸಿದ್ದಾರೆ. ಆದರೆ, ಋಣವೆ ಬೇರೆ, ಸಾಲವೆ ಬೇರೆ ಎಂದು ಧಾರ್ಮಿಕ ಕ್ಷೇತ್ರ ರಾಜಕೀಯ ಕ್ಷೇತ್ರ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸಹಕರಿಸುತ್ತಾ ಇಷ್ಟು ದೂರ ಬಂದು ನಿಂತ ಸಾಮಾನ್ಯ ಪ್ರಜೆಯೊಳಗಿದ್ದ ಅದ್ಬುತವಾದ ಜ್ಞಾನದೇವತೆ ಕಾಣದಾದರೆ, ಸಮಾಜದಲ್ಲಿ ಹುಡುಕಬಹುದೆ?

ಜ್ಞಾನದೇಗುಲಗಳು ವ್ಯವಹಾರಕೇಂದ್ರವಾಗಿದ್ದರೆ ಲಕ್ಮಿ ಗೆ ಬೆಲೆ ಹೆಚ್ಚು. ಇದು ಧಾರ್ಮಿಕ ಕ್ಷೇತ್ರದ ದೇವಾಲಯವನ್ನು ಆವರಿಸಿರುವಾಗ ಇದನ್ನು ಸರಿಪಡಿಸಲು ಯಾರಿಗೆ ಸಾಧ್ಯ? ಪ್ರಜೆಗಳ ಸಹಕಾರವಿಲ್ಲದೆ ಯಾವುದೂ ಬೆಳೆದಿಲ್ಲ. ಹೀಗಾಗಿ ಅಜ್ಞಾನದ ಸಹಕಾರವನ್ನು ಜ್ಞಾನದಿಂದ ಸರಿಪಡಿಸಲುಶಿಕ್ಷಣದಲ್ಲಿ ಜ್ಞಾನಬೇಕಿದೆ.

ವಿಶೇಷಜ್ಞಾನದ ವಿಜ್ಞಾನ ಜಗತ್ತು  ಹೊರಜಗತ್ತನ್ನು ತೋರಿಸಿದೆ, ಈಗ ನಮ್ಮೊಳಗೇ ಅಡಗಿರುವ ಒಳಜಗತ್ತನ್ನು ನಾವೇ ಕಂಡುಕೊಳ್ಳಲು ಸಾಮಾನ್ಯಜ್ಞಾನದೆಡೆಗೆ ಬಂದರೆ ಉತ್ತಮ.

ಇನ್ನೂ ಆಳ ಆಗಿರುವ ಆಧ್ಯಾತ್ಮ ಜಗತ್ತನ್ನು ಈಗ ಕಾಣಲು ಕಷ್ಟವೆ. ಮಕ್ಕಳನ್ನು ನಡೆಸಬಹುದೇನೋ? ನಡೆಯಲು ಬಿಟ್ಟರೆ ಸಾಕು. ಹಾಗೆಯೇ ಸ್ತ್ರೀ ಯ ಜ್ಞಾನವನ್ನು ಬೆಳೆಯಲು ಬಿಟ್ಟರೆ ಮನೆಯೊಳಗಿದ್ದೇ ಜ್ಞಾನದಿಂದಸಂಸಾರವನ್ನು ಆಳಬಹುದು.

ಗೃಹಮಂತ್ರಿ ಸ್ಥಾನ ಗೃಹಿಣಿಯರಿಗಷ್ಟೇ ಸುಸೂತ್ರವಾಗಿ ನಡೆಸಲು ಸಾಧ್ಯ. ಆದರೆ ಸ್ತ್ರೀ ಗೆ ಸ್ತ್ರೀ ಶತ್ರುವಾದರೆ ಅಧರ್ಮದ ಫಲ ಅವಳೇ ಅನುಭವಿಸಬೇಕು. ಮಹಾತ್ಮರು ಭೂಮಿಯ ಮೇಲಿದ್ದರೂ ಕಾಣದ ಕುರುಡುತನ ಅಜ್ಞಾನದ ಶಿಕ್ಷಣದಲ್ಲಿದೆ. ಭಾರತೀಯ ಶಿಕ್ಷಣದಲ್ಲಿ ಸ್ತ್ರೀ ಯ ಜ್ಞಾನವಿದೆ,ಆದರೆ ಇದನ್ನು ಪುರುಷಪ್ರಧಾನಮಾಡಿಕೊಂಡು ಸ್ತ್ರೀ ಯನ್ನು ಹಿಂದುಳಿಸಿದರು. ವಿದೇಶಿ ಶಿಕ್ಷಣದಲ್ಲಿ ಪುರುಷರ ವಿಜ್ಞಾನವಿದೆ.

ಅದರಲ್ಲಿಯೂ ಪುರುಷರೆ ಮುಂದೆ ನಡೆದು ಸ್ತ್ರೀ ಯನ್ನು ಆಳಿದರು. ಆದರೆ ಸತ್ಯ ಒಂದೇ ಜ್ಞಾನದೇವತೆಯೇ ಸ್ತ್ರೀ ಆಗಿರುವಾಗ ,ಮಾನವ ಎಷ್ಟೇ
ರಾಜಕೀಯ ನಡೆಸಿದರೂ ಅದು ತಲುಪುವುದು ಸ್ತ್ರೀ ಶಕ್ತಿಗೆ. ಭೂಮಿಯನ್ನು ಆಳೋದಾದರೆ ಧರ್ಮದಲ್ಲಿ ನಡೆ ಸತ್ಯಕ್ಕೆ ಬೆಲೆಕೊಟ್ಟು ದುಡಿ. ದುಡಿಯದೆ, ನಡೆಯದೆ ಆಳಿ ಅಳಿಸಿದರೆ ಸ್ತ್ರೀ ನಾರಿ ಹೋಗಿ ಮಾರಿ ಆಗುವುದಿಲ್ಲವೆ?

ಜೀವ ಕೊಟ್ಟ ಮೇಲೆ ಜ್ಞಾನವನ್ನು ‌ಕೊಟ್ಟಿರುತ್ತಾಳೆ.ಅದನ್ನು ಸರಿಯಾಗಿ ಬಳಸದಿದ್ದರೆ ತಪ್ಪು ಯಾರದ್ದು? ನಷ್ಟ ಯಾರಿಗೆ? ಹಣದಿಂದ ರೋಗ ಹೋಗಬಹುದು. ಹಣ ಹೊರಗಿರುತ್ತದೆ ರೋಗವೂ ಹೊರಗಿರುತ್ತದೆ. ಆದರೆ ಜೀವಕ್ಕೆ ಬೇಕಾದ ಜ್ಞಾನವಿಲ್ಲವಾದರೆ, ಮತ್ತೆ ಒಳಗೆ ರೋಗ ಸೇರುತ್ತದೆ. ಈ ಸಾಮಾನ್ಯಜ್ಞಾನ ಎಲ್ಲರಿಗೂ ಅರ್ಥ ವಾದರೆ ಸಾಕು.

ಧಾರ್ಮಿಕ ಕ್ಷೇತ್ರದ ಮಠಗಳ ರಾಜಕೀಯಕ್ಕೂ, ರಾಜಕೀಯಕ್ಷೇತ್ರದ ರಾಜಕಾರಣಿಗಳ ರಾಜಕೀಯಕ್ಕೂ ವ್ಯತ್ಯಾಸವಿಷ್ಟೆ. ಮಠಗಳಲ್ಲಿ ಜೀವನಪರ್ಯಂತ ಅಧಿಕಾರದಲ್ಲಿರುತ್ತಾರೆ. ಇಲ್ಲಿ ಬದಲಾಗುತ್ತಿರುತ್ತಾರೆ. ಬದಲಾವಣೆ ಜಗದ ನಿಯಮ. ಪ್ರಜಾಪ್ರಭುತ್ವದ ದೇಶದಲ್ಲಿ ಎರಡೂ ಕ್ಷೇತ್ರವೂ ಪ್ರಜೆಗಳ ಸಹಕಾರವಿಲ್ಲದೆ ನಡೆಯುವುದಿಲ್ಲ. ಭ್ರಷ್ಟಾಚಾರ, ಶಿಷ್ಟಾಚಾರಕ್ಕೆ ಪ್ರಜೆಗಳ ಸಹಕಾರವೆ ಕಾರಣ.

ಮಠಗಳಲ್ಲಿ ತತ್ವದ ಬಗ್ಗೆ ಗೊಂದಲವಿದ್ದರೆ, ರಾಜಕಾರಣಿಗಳಲ್ಲಿ ತಂತ್ರವೆ ಮುಖ್ಯ. ಇಬ್ಬರ ಜಗಳದಲ್ಲಿ ದೇಶ ಬಡವಾಯ್ತು. ದೇಶದ ಆಸ್ತಿ ಇವರಿಬ್ಬರಲ್ಲಿದ್ದರೂ ಕೇಳೋಹಾಗಿಲ್ಲ. ಬಡವನ ಹಣ ದವಡೆಗೆ ಮೂಲ. ಆದರೆ ಬಡವನ ಜ್ಞಾನ ದೇಶದ ಮೂಲ.ಎಚ್ಚರವಾದರೆ ಉತ್ತಮ. ವಾಸ್ತವ ಸತ್ಯಕ್ಕೆ ನಾವೇ ಸಾಕ್ಷಿ. ಪುರಾಣಸತ್ಯ,ಭವಿಷ್ಯದ ಸತ್ಯ ತಿಳಿದು ತಿಳಿಸೋ ಮಧ್ಯೆ ವಾಸ್ತವ ಸತ್ಯ ಅರ್ಥ ಆದರೆ ಆಧ್ಯಾತ್ಮ ಸತ್ಯವಾಗುತ್ತದೆ.

ಆದಿ ಆತ್ಮ, ನಮ್ಮನ್ನು ನಾವೇ ಆಳಿಕೊಳ್ಳಲು ಸತ್ಯವೇ ದೇವರಾಗಬೇಕು. ಇಲ್ಲಿ ಯಾರಿಗೂ ಯಾರೂ ದೊಡ್ಡವರಲ್ಲ ಸಣ್ಣವರಲ್ಲ.ಆದರೆ ಸಾಲ ಮಾಡಿದ ಮೇಲೆ ತೀರಿಸದೆ ಮುಕ್ತಿಯಿಲ್ಲ.ಭೂಮಿ ಸಾಲ ತೀರಿಸಲು ಹಿಂದಿನ ಆಧ್ಯಾತ್ಮ ಸಾಧಕರು ಆಹಾರ,ನೀರು,ಗಾಳಿಯನ್ನೂ ಬಿಟ್ಟು ವರ್ಷಗಟ್ಟಲೆ ತಪಸ್ಸು ಮಾಡಿ ಮೋಕ್ಷ ಗಳಿಸಿದರು ಎಂದರೆ ಪಂಚಭೂತಗಳಿಂದಾದ ಶರೀರದೊಳಗಿನ ಶಕ್ತಿಯ ಋಣ ತೀರಿಸಲು ಎಲ್ಲಾ ಬಿಟ್ಟು ನಡೆಯಬೇಕೆಂಬುದಾಗಿದೆ.

ಈಗ ಕಲಿಮಾನವನಿಗೆ ಭೂಮಿ ಆಳೋದಕ್ಕೆ ಹೆಣ್ಣು, ಹೊನ್ನು ಮಣ್ಣಿಗಾಗಿ ಹೋರಾಟ,ಹಾರಾಟ,ಮಾರಾಟದಲ್ಲಿಯೇ ಕಾಲಹರಣಮಾಡಿ ತನ್ನ ಆತ್ಮವಂಚನೆಯಲ್ಲಿಯೇ ಜೀವನ ನಡೆಸಿಕೊಂಡು ನಾನೇ ದೇವರೆಂದರೆ ಸತ್ಯವೆ? ಇದನ್ನು ತಿಳಿಯಲು ಸಾಮಾನ್ಯಜ್ಞಾನದ ಅಗತ್ಯವಿದೆ.

ಮಕ್ಕಳಿಗೆ ಸಾಮಾನ್ಯಜ್ಞಾನ ನೀಡಿಬೆಳೆಸಿ ಸ್ವತಂತ್ರ ಜ್ಞಾನದ ಕಡೆ ನಡೆಸುವುದು ಉತ್ತಮ.ಅತಿಯಾಗಿ ಹಿಂದೂ ಹೋಗದೆ, ಮುಂದೆ ನಡೆಯದೆ ಮಧ್ಯದಲ್ಲಿರುವ ವಾಸ್ತವ ಸತ್ಯ ಅರ್ಥ ಮಾಡಿಕೊಳ್ಳಲು ನಾವು ನಾವಾಗಿರಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನೋದಯವಾಗುತ್ತದೆ.

ಭಾರತದಲ್ಲಿರುವ ಮಹಾತ್ಮರುಗಳು ಕಣ್ಣಿಗೆ ಕಾಣೋದಿಲ್ಲವಾದರೂ ದೇಶದ ಧರ್ಮ ರಕ್ಷಣೆ ಅವರಿಂದಲೇ ಆಗುತ್ತಿದೆ. ಮಕ್ಕಳ ಒಳಗಿರುವ ಮಹಾತ್ಮರನ್ನು ಗುರುತಿಸಿ ಬೆಳೆಸೋ ಕೆಲಸ ಶಿಕ್ಷಣದಲ್ಲಿ ಹೆಚ್ಚಾಗಬೇಕಿದೆ. ಆಗಲೇ ಆತ್ಮನಿರ್ಭರ ಭಾರತವಾಗುತ್ತದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!