ಬೆಟಗೇರಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ತಮ್ಮ 2021-22ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯ ಸುಮಾರು 18.90 ಲಕ್ಷ ರೂ.ಗಳ ವೆಚ್ಚದಲ್ಲಿ ನೀಡಿರುವ ನೂತನ ಅಂಬ್ಯುಲೆನ್ಸ್ ವಾಹನಗಳ ಸಮರ್ಪಣೆ, ಚಾಲನೆ ನೀಡುವ ಕಾರ್ಯಕ್ರಮವನ್ನು ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಜುಲೈ ೧೭ ರಂದು ಮುಂಜಾನೆ ೧೦ ಗಂಟೆಗೆ, ಗೋಕಾಕ ಮತಕ್ಷೇತ್ರ ವ್ಯಾಪ್ತಿಯ ಅಕ್ಕತಂಗೇರಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಧ್ಯಾಹ್ನ ೩ ಗಂಟೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ನೆರವೇರಿಸಲಿದ್ದಾರೆ.
ಸ್ಥಳೀಯ ಹಾಗು ಸುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸ್ಥಳೀಯರು ಈ ವೇಳೆ ಉಪಸ್ಥಿತರಿರುವರೆಂದು ಸ್ಥಳೀಯ ಕಾರ್ಯಕ್ರಮ ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.