spot_img
spot_img

ಮುಗಳಖೋಡದಲ್ಲಿ ಬಿಜೆಪಿ ಶಾಸಕರ ಗಹನ ಚರ್ಚೆ

Must Read

ಬಾಲಚಂದ್ರ ಜಾರಕಿಹೊಳಿ, ಶ್ರೀಮಂತ ಪಾಟೀಲ್, ದುರ್ಯೋಧನ ಐಹೊಳೆ, ರಾಜೀವ್ ಸೇರಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ

ಮುಗಳಖೊಡ (ತಾ.ರಾಯಬಾಗ)-                ಮುಗಳಖೋಡದಲ್ಲಿಂದು ಜರುಗಿದ ರಾಜ್ಯ ಮಟ್ಟದ ಮಾಳಿ/ ಮಾಲಗಾರ  ಸಮಾವೇಶದಲ್ಲಿ ಬಿಜೆಪಿ ಶಾಸಕರು ಒಂದೆಡೆ ಸೇರಿ ಚರ್ಚೆ ನಡೆಸಿದರು.

ಮುಗಳಖೋಡ ಪಟ್ಟಣದಲ್ಲಿ ನಡೆದ ಮಾಲಗಾರ ಸಮಾಜದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅರಭಾವಿ ಶಾಸಕ‌ ಬಾಲಚಂದ್ರ ಜಾರಕಿಹೊಳಿ, ಕುಡಚಿ ಶಾಸಕ ಪಿ.ರಾಜೀವ್, ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರು ವೇದಿಕೆಯ ಪಕ್ಕದಲ್ಲಿ ಸಭೆ ಸೇರಿ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.

ಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಶಾಸಕರನ್ನು ಆರಿಸಿ ತರಬೇಕೆಂದು ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ. ಹೀಗಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಬೇಕಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿ ಪಕ್ಷದ ಸಂಘಟನೆಯನ್ನು ಬಲವರ್ಧನೆ ಮಾಡಬೇಕಿದೆ. ವಿರೋಧಿ ಅಭ್ಯರ್ಥಿಗಳು ಯಾರೇ ಕಣಕ್ಕಿಳಿದರೂ ಅವರನ್ನು ಸಮರ್ಥವಾಗಿ ಎದುರಿಸಿ ವರಿಷ್ಟರು ನೀಡಿರುವ ಟಾಸ್ಕ್ ನ್ನು ಸ್ವೀಕರಿಸಿ ನಮ್ಮ ಶಕ್ತಿ ಯನ್ನು ಪ್ರದರ್ಶಿಸಬೇಕಾಗಿದೆ.

ಬರುವ ಎಪ್ರಿಲ್/ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವೇ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಅಂತಾ ಶಾಸಕರು ಚರ್ಚಿಸುತ್ತಿದ್ದರೆಂದು ಹೇಳಲಾಗುತ್ತಿದೆ.

ಕೋವಿಡ್ ೪ ನೇ ಅಲೆಯ ಬಗ್ಗೆ  ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗಿದೆ. ಕೋವಿಡ್ ಚುನಾವಣೆಯ ಮೇಲೆ ಪರಿಣಾಮ ಬೀರಬಹುದೇ? ಸಂಪುಟ ವಿಸ್ತರಣೆ ನಡೆದರೆ ಜಿಲ್ಲೆಯಿಂದ ಯಾರು ಸಚಿವರಾಗಬಹುದು? ಎಂಬಿತ್ಯಾದಿ ಚರ್ಚೆಗಳು ಸಭೆಯಲ್ಲಿ ನಡೆದವು ಎಂದು ತಿಳಿದುಬಂದಿದೆ.

ಸರ್ಕಾರದ ಮೀಸಲಾತಿ ಸಂಬಂಧ ಕೆಲ ಸಮಾಜಗಳು ಈಗಾಗಲೇ ಹೋರಾಟಗಳನ್ನು ಮಾಡುತ್ತಿವೆ. ಎಲ್ಲ ಸಮಾಜಗಳಿಗೂ ನಾವು ಬೆಂಬಲವನ್ನು ನೀಡಿದ್ದೇವೆ. ಅವರ ನ್ಯಾಯಯುತ  ಬೇಡಿಕೆಗಳ ಬಗ್ಗೆ ನಮ್ಮ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.  ಜೊತೆಗೆ ಮಾಳಿ ಸಮಾಜದವರು ಸಹ ತಮ್ಮ ಹಕ್ಕುಗಳಿಗಾಗಿ ಮುಖ್ಯಮಂತ್ರಿಗಳಿಗೆ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಸಮಾವೇಶವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಪ್ರತ್ಯೇಕ ನಿಗಮ ಮಾಡುವಂತೆಯೂ ಆಗ್ರಹಿಸಿದ್ದಾರೆ. ನಾವು ಕೂಡ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸಮಾಜದ ಬೆನ್ನಿಗೆ ನಿಲ್ಲೋಣವೆಂದು ಶಾಸಕರು ಹೇಳುತ್ತಿದ್ದರೆಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಅಕ್ಕ-ಪಕ್ಕದ ಬಿಜೆಪಿ ಶಾಸಕರು ಸೇರಿ ಗಹನವಾಗಿ ಚರ್ಚೆ ನಡೆಸಿರುವುದು ಪಕ್ಷಕ್ಕೆ ಅನುಕೂಲಕರವಾಗುವುದರ ಜತೆಗೆ ಕಾರ್ಯಕರ್ತರ ಸಂತಸಕ್ಕೆ ಕಾರಣವಾಗಿದೆ.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಶಾಸಕರೊಂದಿಗೆ ಮಾತನಾಡುತ್ತಿರುವ ಪೋಟೋ ಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

- Advertisement -
- Advertisement -

Latest News

ಕೌಜಲಗಿ ಹೊಸ ತಾಲೂಕು ರಚನೆಗೆ ಸಂಪೂರ್ಣ ಬೆಂಬಲ- ಶಾಸಕ ಬಾಲಚಂದ್ರ ಜಾರಕಿಹೊಳಿ

ಎಲ್ಲರೂ ಸೇರಿ ಒಗ್ಗಟ್ಟಾಗಿ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಲು ಪ್ರಯತ್ನಿಸೋಣ ಕೌಜಲಗಿ(ತಾ.ಗೋಕಾಕ): ಕೌಜಲಗಿ ಹೊಸ ತಾಲೂಕು ರಚನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಅರಭಾವಿ ಶಾಸಕ, ಕೆಎಮ್‍ಎಫ್...
- Advertisement -

More Articles Like This

- Advertisement -
close
error: Content is protected !!