ದೆಹಲಿಯಲ್ಲಿ ಬಿಜೆಪಿ ಮಹಾಗೆಲುವು : ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

0
98

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ಹೆಣೆದ ತಂತ್ರಗಾರಿಕೆಗಳೇ ದೆಹಲಿಯಲ್ಲಿ ನಮ್ಮ ಪಕ್ಷಕ್ಕೆ ಅಧಿಕಾರ ಸಿಗಲು ಕಾರಣವಾಗಿವೆ. ಜೊತೆಗೆ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳು ಈ
ಐತಿಹಾಸಿಕ ಗೆಲುವಿಗೆ ಕಾರಣವಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ದೆಹಲಿಯಲ್ಲಿ ಚುನಾವಣಾ ಫಲಿತಾಂಶ ಹೊರಬಂದು ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು,  ಕಳೆದ ಎರಡು ಅವಧಿಯಿಂದ ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಾರ್ಟಿಯ ದುರಾಡಳಿತಕ್ಕೆ ಬೇಸತ್ತು ಅಲ್ಲಿನ ಮತದಾರರು ಆಡಳಿತಾರೂಢ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ೨೫ ವರ್ಷ ಬಳಿಕ ನಮ್ಮ ಪಕ್ಷವು ದೆಹಲಿಯಲ್ಲಿ ಆಡಳಿತ ನಡೆಸಲು ಅಲ್ಲಿನ ಮತದಾರರು ಆಶೀರ್ವಾದ ಮಾಡಿದ್ದಾರೆ. ಅದಕ್ಕಾಗಿ ಸಮಸ್ತ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದರು.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ತರಲು ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಾಗೂ ದೆಹಲಿ ಮಟ್ಟದ ಎಲ್ಲ ನಾಯಕರುಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪ್ರಯಾಗರಾಜ್ ನಲ್ಲಿ ಜಾರಕಿಹೊಳಿ ಹವಾ

ಈ ಮಧ್ಯೆ ಪ್ರಯಾಗರಾಜ್ ನ ತ್ರಿವೇಣಿ ಸಂಗಮದಲ್ಲಿ ಪವಿತ್ರಸ್ನಾನಕ್ಕೆ ತೆರಳಿದ್ದ ಬಿಜೆಪಿ ಕಾರ್ಯಕರ್ತರು ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಹೆಸರು ಉದ್ಘರಿಸುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.

ಗೋಕಾಕ ಸಾಹುಕಾರ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಸಹೋದರರು ಏಕಕಾಲದಲಿಯೇ ಶಾಸಕರಾಗಿದ್ದರೆ, ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಸಂಸದರಾಗಿ ಚುನಾಯಿತರಾಗಿದ್ದಾರೆ.

ಜಾರಕಿಹೊಳಿ ಹೆಸರು ಹೇಳಿದ್ರೆ ಸಾಕು. ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸುವಂತಹ ಕ್ರೇಜ್ ಇದೆ. ಅದು ಯಾವುದೇ ಸರ್ಕಾರ ಇರಲಿ. ಅಲ್ಲಿ ಗೋಕಾಕ ಸಾಹುಕಾರರು ಇಲ್ಲದ ಸಂಪುಟವೇ ಅಸ್ತಿತ್ವಕ್ಕೆ ಬರಲ್ಲ. ಅದು ಯಾವ ಪಕ್ಷವೇ ಆಡಳಿತ ನಡೆಸಲಿ. ಗೋಕಾಕ್ ಸಾಹುಕಾರರ ಖದರ್ ಇದ್ದೇ ಇರುತ್ತೆ.

೧೪೪ ವರ್ಷಕ್ಕೊಮ್ಮೆ ಉತ್ತರ ಪ್ರದೇಶದ ಪ್ರಹಾಗರಾಜ್ದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಮತ್ತೊಮ್ಮೆ ಸಾಹುಕಾರ್ ಅವರ ಹೆಸರು ಸದ್ದು ಮಾಡಿದೆ.
ಮಹಾ ಕುಂಭ ಮೇಳಕ್ಕೆ ದಿನಾಲು ಲಕ್ಷಾಂತರ ಭಕ್ತರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಸ್ನಾನ ಮಾಡುತ್ತಿದ್ದಾರೆ. ದೇಶ – ವಿದೇಶಗಳಿಂದ ಜನರು
ಪ್ರಹಾಗರಾಜಕ್ಕೆ ಬರುತ್ತಿದ್ದಾರೆ.

ಶನಿವಾರದಂದು ಅರಭಾವಿ ಕ್ಷೇತ್ರದ ಜನರು ಆಗಮಿಸಿ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಹರ ಹರ ಮಹಾದೇವನ ಜತೆಗೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಜೈಕಾರ ಹಾಕುವ ಮೂಲಕ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿ ಅಭಿಮಾನ ಮೆರೆದಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಅವರಿಗೆ ದೇವರು ಸುಖ, ಶಾಂತಿ, ನೆಮ್ಮದಿ, ಆಯುರಾರೋಗ್ಯ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಇತ್ತೀಚೆಗೆ ಅಷ್ಟೇ ಸಚಿವ ಸತೀಶ ಜಾರಕಿಹೊಳಿ ಅವರು ಸಿಎಂ ಆಗಲೆಂದು ಕಾಂಗ್ರೆಸ್ ಕಾರ್ಯಕರ್ತರು ಹರಕೆ ಹೊತ್ತುಕೊಂಡು ಬಂದು ನದಿಯಲ್ಲಿ ಸ್ನಾನ ಮಾಡಿ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟಿನಲ್ಲಿ ಜಾರಕಿಹೊಳಿ ಸಹೋದರರ ಹವಾ ಅಂತರ್ ರಾಜ್ಯಮಟ್ಟದಲ್ಲಿಯೂ ಬೀಸುತ್ತಿರುವುದು ಕಾರ್ಯಕರ್ತರ ಸಂಭ್ರಮಕ್ಕೆ ಸಾಕ್ಷಿಯಾಗಿದೆ.

ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರ ಜೊತೆ ಸಾಹುಕಾರ ಅವರ ಕಾರ್ಯಕರ್ತರಾದ ಮುತ್ತಪ್ಪ ಕುಳ್ಳುರ್, ರಾಜು ಕಸ್ತೂರಿ, ಪಾಂಡು ದೊಡಮನಿ, ಅಶೋಕ ಹಸರಂಗಿ, ಬಾಳಪ್ಪ ಕಾಪಸಿ ಸೇರಿದಂತೆ ಹಲವರು ಐತಿಹಾಸಿಕ ಗಂಗಾ- ಯಮುನಾ- ಸರಸ್ವತಿ ತ್ರಿ ವೇಣಿ ಸಂಗಮ ನದಿಯಲ್ಲಿ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.