spot_img
spot_img

ಆನಂದ ಮಾಮನಿಯವರಿಂದ ಶಾಲಾ ಮಕ್ಕಳ ಪಾಲಕರಿಗೆ ಆಹಾರಧಾನ್ಯ ಕಿಟ್ ವಿತರಣೆ

Must Read

- Advertisement -

ಸವದತ್ತಿ – ತಾಲೂಕಾ ಪಂಚಾಯತ ಸವದತ್ತಿ ಅಕ್ಷರದಾಸೋಹದ ವತಿಯಿಂದ ಸ್ಥಳೀಯ ಗುರ್ಲಹೊಸೂರಿನ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ಶಾಲಾ ಮಕ್ಕಳ ಪಾಲಕರಿಗೆ ವಿಧಾನ ಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಪಾಲಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ ವಾಯ್ ತುಬಾಕಿ ಮಾತನಾಡಿ, “ನವಂಬರ 2020 ರಿಂದ ಏಪ್ರಿಲ್ 2021 ರವರೆಗೆ 132 ದಿನಗಳ ಅವಧಿಗೆ ಬಿಸಿಯೂಟದ ಬದಲಾಗಿ ಆಹಾರ ಭದ್ರತಾ ಭತ್ಯೆಯಾಗಿ ಆಹಾರ ಧಾನ್ಯಗಳನ್ನು ಮತ್ತು ಇತರೆ ಪದಾರ್ಥಗಳನ್ನು ಶಾಲಾ ಮಕ್ಕಳ ಪಾಲಕರಿಗೆ ಅಕ್ಕಿ ಗೋಧಿ ಬೇಳೆ ಎಣ್ಣೆ.ಉಪ್ಪು ಇರುವ ಕಿಟ್ಟನ್ನು ವಿತರಿಸಲಾಗುತ್ತಿದೆ” ಎಂದು ಹೇಳಿದರು.

ಈ ಸಂಧರ್ಭದಲ್ಲಿ ತಹಶೀಲ್ದಾರ ಪ್ರಶಾಂತ ಬಿ ಪಾಟೀಲ. ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಆಧಿಕಾರಿ ಯಶ್ವಂತಕುಮಾರ. ಕ್ಷೇತ್ರ ಶಿಕ್ಷಣಾಧಿಕಾರಿ ಎ ಎಮ್ ಕಂಬೋಗಿ.ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಬೆಳವಡಿ. ಎಚ್ ಆರ್ ಪೆಟ್ಲೂರ. ಬಿ ಎನ್ ಹೊಸೂರ. ಗಿರೀಶ ಮುನವಳ್ಳಿ.ಗಣ್ಯರಾದ ಪ್ರವೀಣ ಮುನವಳ್ಳಿ, ಜೆ ಸಿ ಗುಂಡಾರ.ಎಮ್ ಜಿ ದೊಡಮನಿ.ಪಿ ಎಸ್ ಶಿಂದೆ.ಬಿ.ಎನ.ದೊಡ್ಡಲಕ್ಕನ್ನವರ.ವ್ಹಿ ಆರ್ ಗೊರಗುದ್ದಿ. ಮುನವಳ್ಳಿ ವಲಯ ಸಂಪನ್ಮೂಲ ವ್ಯಕ್ತಿಗಳಾದ ಎಪ್ ಜಿ ನವಲಗುಂದಉಪಸ್ಥಿತರಿದ್ದರು.

- Advertisement -
- Advertisement -

Latest News

ಕನ್ನಡದ ರಾಜಾ ಕುಳ್ಳ ಇನ್ನಿಲ್ಲ

ಕನ್ನಡ ಚಿತ್ರರಂಗದ ರಾಜಾಕುಳ್ಳ ಎಂದೇ ಪ್ರಸಿದ್ಧರಾಗಿದ್ದ ಹಾಸ್ಯಚಿತ್ರ ನಟ, ನಿರ್ಮಾಪಕ ದ್ವಾರಕೀಶ ನಿಧನರಾಗಿದ್ದಾರೆ. ಚಿತ್ರರಂಗದ ನಾಯಕ ವಿಷ್ಣುವರ್ಧನ ಅವರ ಆಪ್ತಮಿತ್ರನಾಗಿದ್ದ ದ್ವಾರಕೀಶ ನೂರಾರು ವಿಶಿಷ್ಟ ಚಿತ್ರಗಳಲ್ಲಿ ನಟಿಸಿ,...
- Advertisement -

More Articles Like This

- Advertisement -
close
error: Content is protected !!
Join WhatsApp Group