Homeಸುದ್ದಿಗಳುಶರಣ ಮಡಿವಾಳ ಮಾಚಿದೇವರ ಕ್ಯಾಲೆಂಡರ್ ವಿತರಣೆ

ಶರಣ ಮಡಿವಾಳ ಮಾಚಿದೇವರ ಕ್ಯಾಲೆಂಡರ್ ವಿತರಣೆ

ಸಿಂದಗಿ: ಶರಣ ಮಡಿವಾಳ ಮಾಚಿದೇವರ ತತ್ವ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ದಿಗಾಗಿ ಶ್ರಮಿಸಲು ಸಂಘ ಮುಂದಾಗಬೇಕು ಎಂದು ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ನಂಜಪ್ಪನವರು ನುಡಿದರು.

ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಶರಣ ಮಡಿವಾಳ ಮಾಚಿದೇವರ ಕ್ಯಾಲೆಂಡರ್ ಸಮಾಜದ ಜನಾಂಗಕ್ಕೆ ವಿತರಿಸಿ ಅವರು ಮಾತನಾಡಿ, ಪ್ರತಿ ಮಡಿವಾಳ ಸಮಾಜದ ಜನಾಂಗವು ಕೊರೋನಾ ಸಂದರ್ಭದಲ್ಲಿ ನೊಂದು ಕೊಂಡಿದೆ ಸರಕಾರ ಐದು ಸಾವಿರ ರೂಪಾಯಿ ಆರ್ಥಿಕ ನೆರವನ್ನು ನೀಡಲಾಗಿತ್ತು ಆದರೆ ರಾಜ್ಯದ ಕೆಲವು ಜನರಿಗೆ ಆ ಸೌಲಭ್ಯ ದೊರತಿದೆ .ಆದ್ದರಿಂದ ನಮ್ಮ ಸಮಾಜದ ಜನಸಂಖ್ಯೆ ಗುರುತಿಸಲು ಕರ್ನಾಟಕ ರಾಜ್ಯ ಮಡಿವಾಳರ ಸಂಘವು ಮಡಿವಾಳ ಜನಾಂಗದ ಸಮಗ್ರ ಸಮೀಕ್ಷೆ ಮೂಲಕ ಜನ ಸಂಖ್ಯೆ ಗುರುತಿಸಲು ಸಂಘದ ಪದಾಧಿಕಾರಿಗಳು ಪ್ರತಿ ಮಡಿವಾಳ ಜನಾಂಗದವರ ಮನೆ ಸಂಖ್ಯೆ ಪಡಿತರ ಚೀಟಿ ಸಂಖ್ಯೆ ಕುಟುಂಬ ಸದಸ್ಯರ ಹೆಸರು ಅವರ ಸಂಬಂಧ ಅವರ ವಯಸ್ಸು ಶಿಕ್ಷಣ ಮತ್ತು ಉದ್ಯೋಗ ಆಧಾರ ಸಂಖ್ಯೆ ಕುಟುಂಬದಲ್ಲಿ ಅಂಗವಿಕಲತೆ ಇದ್ದರೆ ಮಾಹಿತಿದೊಂದಿಗೆ ಅವರ ಸಂಪೂರ್ಣ ವಿಳಾಸ ದೂರವಾಣಿ ಸಂಪೂರ್ಣ ಮಾಹಿತಿ ಸಂಗ್ರಹಿಸುವದರಿಂದ ನಮ್ಮ ಮಡಿವಾಳ ಜನಸಂಖ್ಯೆ ನಿಕರವಾಗಿ ತಿಳಿಯಲು ಸಹಕಾರಿಯಾಗಿದೆ. ಪ್ರೊ ಅನ್ನಪೂರ್ಣಮ್ಮನವರ ವರದಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು ನಮ್ಮ ಮಡಿವಾಳ ಜನಾಂಗಕ್ಕೆ ಎಸ್ ಸಿ ಜಾತಿಗೆ ಸೇರಿಸಲು ಮಡಿವಾಳ ಜನಾಂಗವು ಸಂಘಟನೆ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದರು.

ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಉಪಾಧ್ಯಕ್ಷರಾದ ಶ್ರೀ ಆರ್ ವ್ಹಿ ರಾಜಣ್ಣ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಆರ್ ಯಲ್ಲಪ್ಪನವರು ಆಗಮಿಸಿದ್ದರು.

ಸಿಂದಗಿ ತಾಲೂಕಾ ಮಡಿವಾಳ ಸಮಾಜದ ಸಂಘದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಆರ್ ವ್ಹಿ ರಾಜಣ್ಣ ಹಾಗೂ ಎಸ್ ಆರ್ ಯಲ್ಲಪ್ಪ ಮಾತನಾಡಿ ರಾಜ್ಯದಲ್ಲಿ ಮಡಿವಾಳರನ್ನು ಸಂಘಟಿಸಲು ಸತತ ಪ್ರಯತ್ನ ನಡೆಯುತ್ತದೆ.

ತಾಲೂಕಿನ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಭಾಗವಹಿಸಿದ್ದು ನಮ್ಮಗೆ ಬಾಹಳ ಸಂತೋಷವಾಗಿದೆ .ಅದೇ ರೀತಿಯಾಗಿ ಹೊಸದಾಗಿ ರಾಜ್ಯದಲ್ಲಿ ಸದಸ್ಯರನ್ನು ಮಾಡಲು ರಾಜ್ಯಾಧ್ಯಕ್ಷರು ಮುಂದಾಗಿದ್ದಾರೆ ಕೆಲವೇ ದಿನಗಳಲ್ಹಿ ತಮಗೆಲ್ಲರಿಗೂ ಸಿಹಿ ಸುದ್ದಿ ಬರಲಿದೆ ಹಾಗೂ ತಮ್ಮೆಲ್ಲರ ಸಹಕಾರ ನಮ್ಮ ರಾಜ್ಯ ಘಟಕದ ಮೇಲೆ ಸದಾ ಇರಲಿ ಎಂದು ಅವರು ವಿನಂತಿಸಿದರು.

ನಾವು ಎಲ್ಲಾ ಜಿಲ್ಲೆ ಹಾಗೂ ತಾಲೂಕಿಗೆ ಬಂದು ನಾವು ನಿಮ್ಮೆಲ್ಲರ ಸೇವಕನಾಗಿ ಸ್ಪಂದಿಸುತ್ತವೆ ಎಂದರು.

ಕಳೆದ ಎರಡು ವರ್ಷವೂ ಮಾಹಾಮಾರಿ ಕೋವಿಡ್ ಇರುವುದರಿಂದ ನಿಮ್ಮನ್ನು ಸಂಪರ್ಕಿಸಲು ಆಗಿಲ್ಲ,ಬರುವ ದಿನಮಾನದಲ್ಲಿ ತಮ್ಮೊಂದಿಗೆ ನಾವೆಲ್ಲರೂ ಬೇರತು ಮಡಿವಾಳ ಸಮಾಜದ ಏಳಿಗೆಗೆ ರಾಜ್ಯದಲ್ಲಿ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ ಎಂದರು.

ಮಡಿವಾಳ ಸಮಾಜದ ಹೋರಾಟಕ್ಕೂ ಪ್ರತಿ ತಾಲೂಕಿನ ಎಲ್ಲ ಪದಾಧಿಕಾರಿಗಳು ಬರಬೇಕಾಗುತ್ತದೆ ತಾವು ನಮ್ಮ ಒಗ್ಗಟ್ಟನು ರಾಜ್ಯದ ನಾಯಕರಿಗೆ ತೋರಿಸುವುದರೊಂದಿಗೆ ನಮ್ಮ ಮಡಿವಾಳ ಸಮಾಜಕ್ಕೆ ಸರಕಾರದ ಸವಲತ್ತುಗಳು ಸಿಗುವಂತೆ ಮಾಡೋಣ ಎಂದರು.

ನಮ್ಮ ಮಡಿವಾಳ ಸಮಾಜ ಸಣ್ಣ ಸಮಾಜ ಇರುವುದರಿಂದ ಕೆಲವು ಊಹಾಪೋಹಗಳು ಬರುವುದು ಸಹಜ ಅಂತಹುಗಳಿಗೆ ಯಾರು ಕಿವಿಗುಡಬಾರದು ಎಂದು ವಿನಂತಿ ಪೂರಕವಾಗಿ ಅವರು ಮಾತನಾಡಿದರು.

ಪಟ್ಟಣದ ಮಡಿವಾಳ ಸಮಾಜದ ಯಮನವ್ವ ಮಡಿವಾಳರ ಹೊನ್ನಳ್ಳಿ ದ್ವಿ ಚಕ್ರದ ಮೇಲೆ ಬಿದ್ದು ಗಾಯ ಮಾಡಿ ಕೊಂಡು ಕೆಲಸ ಇಲ್ಲದೆ ಇರುವದನ್ನು ಗುರುತಿಸಿ ಮಡಿವಾಳ ಸಂಘದ ರಾಜ್ಯಧ್ಯಕ್ಷ ಸಿ ನಂಜಪ್ಪನವರು ಐದು ಸಾವಿರ ರೂಪಾಯಿ ನೀಡಿದರು .ಅವರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳು ದೊರೆಯುವಂತೆ ಪ್ರಯತ್ನ ಮಾಡುತ್ತನೆ ಎಂದರು.

ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಈರಣ್ಣ ಅಗಸರ, ಕಾರ್ಯದರ್ಶಿ ತಿಪ್ಪಣ್ಣ ಅಗಸರ, ಶಂಕರ ಅಗಸರ, ಮಲ್ಲು ಅಗಸರ, ಸುರೇಶ ಮಡಿವಾಳರ, ಶಿವಾನಂದ ಶಹಾಪೂರ, ಶೇಖರ ಅಗಸರ, ಮಲ್ಲು ಅರಳಗುಂಡಗಿ, ಮುತ್ತು ಬ್ಯಾಕೋಡ, ಶರಣು ಅರಳಗುಂಡಗಿ, ಮಡಿವಾಳಪ್ಪ ಮಡಿವಾಳರ, ವಿನಯಕುಮಾರ ಸಗರ ಇದ್ದರು.

ಶಿಕ್ಷಕ ಸಾಹಿತಿ ಬಸವರಾಜ ಅಗಸರ ಸ್ವಾಗತಿಸಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group