spot_img
spot_img

ಉಲ್ಟಾ ಧ್ವಜ ಹಾರಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Must Read

- Advertisement -

ಸಿಂದಗಿ: ಆ.೧೫ರಂದು ಪಟ್ಟಣದ ಪುರಸಭೆಯ ಮೇಲೆ ತಲೆ ಕೆಳಗಾಗಿ ತ್ರಿವರ್ಣ ಧ್ವಜ ಹಾರಿದ ಹಿನ್ನೆಲೆ ಕೃತ್ಯ ಎಸಗಿದ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ತಾಲೂಕು ದಂಡಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ಪುರಸಭೆಯ ಮೇಲೆ ತಲೆ ಕೆಳಗಾಗಿ ತ್ರಿವರ್ಣ ಧ್ವಜ ಹಾರಿದ್ದು ಇಡೀ ದೇಶಕ್ಕೆ ಅವಮಾನ ಮಾಡಿದ ಸಂಗತಿ ಈ ಕುರಿತು ಸ್ಪಷ್ಟನೆ ಕೇಳಿದ ಸಾರ್ವಜನಿಕರಿಗೆ ಅಧಿಕಾರಿಗಳು ಯಾರೋ ಕಿಡಿಗೇಡಿಗಳು ಮಾಡಿದ್ದಾರೆ ಎಂದು ಉಡಾಫೆ ಉತ್ತರ ನೀಡಿ ಕೈ ತೊಳೆದುಕೊಂಡಿದ್ದಾರೆ. ಈ ಹಿನ್ನೆಲೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಪಟ್ಟಣದ ನೈರ್ಮಲ್ಯದ ಕುರಿತು ಪುರಸಭೆಗೆ ಕಾಳಜಿಯಿಲ್ಲ ಹಗರಣ ಮಾಡುವುದೇ ಖಯಾಲಿಯಾಗಿದೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೇ ಹೋದರೆ ಬಿಜೆಪಿ ಕಾರ್ಯಕರ್ತರು ಪುರಸಭೆಗೆ ನುಗ್ಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಸ್.ಟಿ.ಮೋರ್ಚಾ ಅಧ್ಯಕ್ಷ ಪ್ರಶಾಂತ ಕದ್ದರಕಿ ಮಾತನಾಡಿ, ಪುರಸಭೆಯ ಮೇಲೆ ಉಲ್ಟಾ ಧ್ವಜ ಹಾರಿದ್ದನ್ನು ಗಂಭೀರವಾಗಿ ಪರಿಗಣಿಸದೇ ಉಡಾಫೆ ಉತ್ತರ ನೀಡಿದ್ದು ಖಂಡನೀಯ ಮತ್ತು ಪುರಸಭೆ ವತಿಯಿಂದ ನಗರದ ಸ್ವಚ್ಚತೆ ನಡೆಯುತ್ತಿಲ್ಲ, ಏಕಾಏಕಿ ಕೈ ಬರಹ ಉತಾರಿ ನಿಲ್ಲಿಸಿ ಸಾರ್ವಜನಿಕರನ್ನು ಪೇಚಿಗೆ ಸಿಲುಕಿಸಿದ್ದಾರೆ ಅಲ್ಲದೇ ಇಲ್ಲಿನ ಅಧಿಕಾರಿಗಳು ಕೆಲ ಸದಸ್ಯರ ಮಾತನ್ನು ಮಾತ್ರ ಕೇಳುತ್ತಾರೆ ಮತ್ತು ಅಪೂರ್ಣಗೊಂಡ ಲೇ ಔಟ್‌ಗಳಿಗೆ ಪರವಾನಿಗೆ ನೀಡಿದ್ದಾರೆ. ಯಾವುದೇ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದೇ ಇರುವುದನ್ನು ಹಲವು ಬಾರಿ ಮೇಲಾಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

- Advertisement -

ಸಾಯಬಣ್ಣ ದೇವರಮನಿ ಮಾತನಾಡಿ, ಪುರಸಭೆ ಆಡಳಿತದಲ್ಲಿ ದ್ವೇಷ ರಾಜಕಾರಣ ಸೇರಿದ್ದು. ಬಿಜೆಪಿ ಸರ್ಕಾರದಲ್ಲಿ ೭೫೦ ಮನೆಗಳು ಮಂಜೂರು ಆಗಿತ್ತು ಆದರೆ ಸರ್ಕಾರ ಬದಲಾದ ನಂತರ ನೂತನ ಶಾಸಕರು ರದ್ದುಗೊಳಿಸಿದ್ದಾರೆೆ. ಹೊರ ಜಿಲ್ಲೆಯ ಜನರಿಗೆ ಮನೆ ಹಂಚಿಕೆಯಾಗುತ್ತಿವೆ ಈ ದ್ವೇಷ ರಾಜಕಾರಣದಿಂದ ಬಡವರ ಜೀವನಕ್ಕೆ ಹೊಡೆತ ಬಿದ್ದಿದೆ. ಇನ್ನೂ ಸಿಂದಗಿ ಪುರಸಭೆ ಆಡಳಿತದಲ್ಲಿ ನಡೆಯುವ ಭ್ರಷ್ಟಾಚಾರದಲ್ಲಿ ಇಂಡಿ ಉಪ ವಿಭಾಗ ಅಧಿಕಾರಿಗಳ ಹಸ್ತಕ್ಷೇಪವಿದೆ. ಈ ಅಧಿಕಾರಿಗಳು ಪುರಸಭೆಯಲ್ಲಿ ಕಾರ್ಯ ನಿರ್ವಹಿಸದೇ ಪ್ರವಾಸಿ ಮಂದಿರದಲ್ಲಿ ಕುಳಿತು ಬಿಲ್ ಪಾಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಮಂಡಲ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾವಳಸಂಗ, ವಿಠ್ಠಲ ನಾಯ್ಕೋಡಿ, ಅನುಸೂಯಾ ಪgಗೊಂಡ, ಯಲ್ಲೂ ಇಂಗಳಗಿ, ಖಾಜೂ ಬಂಕಲಗಿ, ಶ್ರೀಶೈಲ ಚಳ್ಳಗಿ, ಅಶೋಕ ನಾರಾಯಣಪೂರ, ಅಲೋಕ ರೂಡಗಿ, ನೀಲಮ್ಮ ಯಡ್ರಾಮಿ, ಸಿದ್ರಾಮ ಅನಗೊಂಡ, ವಿನಾಯಕ ದೇವರಮನಿ ಮತ್ತಿತರರಿದ್ದರು.

- Advertisement -
- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group