spot_img
spot_img

ಸಿದ್ದರಾಮಯ್ಯ ಕಾರ್ ಮೇಲೆ ಮೊಟ್ಟೆ ಎಸೆದವರ ಬಂಧಿಸಲು ಆಗ್ರಹ

Must Read

spot_img

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಬೀದರ್ ವತಿಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕಾರಿನ ಮೇಲೆ ಮಡಿಕೇರಿಯಲ್ಲಿ ಮೊಟ್ಟೆ ಎಸೆದು ಅವಮಾನ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಬ್ರಹತ್ ಪ್ರತಿಭಟನೆ ನಡೆಸಿದರು.

ಬೀದರ್ ಅಂಬೇಡ್ಕರ್ ವ್ರತ್ತದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಯಾರ್ಲಿ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಕಾರಿನ ಮೇಲೆ ಮೊಟ್ಟೆ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾತನಾಡಿದ ಕಿಡಿಗೇಡಿಗಳನ್ನು ಈ ಕೂಡಲೇ ಬಂಧಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಭದ್ರತೆ ಲೋಪ ಹೊಣೆ ಹೊತ್ತ ಮುಖ್ಯಮಂತ್ರಿಗಳು ಕೂಡಲೆ ರಾಜಿನಾಮೆ ಕೊಡಬೇಕು. ಆಡಳಿತ ಪಕ್ಷದವರೆ ಪ್ರತಿಭಟನೆಗೆ ಇಳಿಸುವುದು ಪ್ರಜಾಪ್ರಭುತ್ವದಲ್ಲಿ ಭಾರತೀಯ ಸಂವಿಧಾನಕ್ಕೆ  ಮಾಡಿದ ಅವಮಾನ ಭಾರತೀಯ ಸಂವಿಧಾನದಲ್ಲಿ ಮೂಲಭೂತ ಹಕ್ಕಿನಲ್ಲಿ ತಮ್ಮ ವಿಚಾರ ವ್ಯಕ್ತಪಡಿಸುವ ಹಕ್ಕಿದೆ ಅದನ್ನು ಈ ಸರಕಾರ ಮೊಟಕುಗೊಳಿಸಿ ಮೂಲಭೂತ ಹಕ್ಕು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಈ ದೇಶದಲ್ಲಿ ಆಳುವ ಸರಕಾರವೆ ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಜಗಳವಾಡಿಸುವ ನೀತಿಗೆ ಖಂಡಿಸುತ್ತೇವೆ.  ಸಿದ್ದರಾಮಯ್ಯನವರಿಗೆ  z ಸೆಕ್ಯುರಿಟಿ ಒದಗಿಸಿ ಪ್ರಜಾ ಪ್ರಭುತ್ವದಲ್ಲಿ  ವಿರೋಧ ಪಕ್ಷದ ನಾಯಕರಿಗೆ ಸೂಕ್ತವಾದ ರಕ್ಷಣೆ ಸಿಗುವಂತಾಗಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದರು.

ಈ ಸಮಯದಲ್ಲಿ  ಅಮೃತರಾವ ಚಿಮಕೊಡ್.  ಜಾನ್ ವೆಸ್ಲಿ. ಅಶೊಕ ಮಾಳಗೆ.  ತುಕಾರಾಮ್ ಚಿಮಕೊಡೆ. ಸಂಜಯ ಜಾಗಿರದಾರ್. ಮಲ್ಲು ಬಿರಾದಾರ ಹಾಗೂ ಇತರರು  ಉಪಸ್ಥಿತರಿದ್ದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!