spot_img
spot_img

ಡಾ. ಗೊರೂರು ಅಧ್ಯಯನ ಪೀಠ ಸ್ಥಾಪನೆ ಆಗಬೇಕಿದೆ: ವಾಸಂತಿಮೂರ್ತಿ

Must Read

- Advertisement -

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹಾಸನ ಜಿಲ್ಲಾ ಘಟಕ, ಗಾಂಧೀ ಸ್ಮಾರಕ ನಿಧಿ ಬೆಂಗಳೂರು ಮತ್ತು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕನ್ನಡ ವಿಭಾಗ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ವಿಚಾರ ಗೋಷ್ಠಿಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಡಾ. ಗೊರೂರರ ಸುಪುತ್ರಿ ವಾಸಂತಿಮೂರ್ತಿ, ಕೆನಡಾ ಮಾತನಾಡಿ ಕನ್ನಡ ಸಾಹಿತ್ಯ ಲೋಕಕ್ಕೆ ಕಥೆ, ಪ್ರಬಂಧ ಸಾಹಿತ್ಯ, ಪ್ರವಾಸ ಸಾಹಿತ್ಯ, ಕಾದಂಬರಿ ಕೊಡುಗೆ ನೀಡಿದ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದ ನಮ್ಮ ತಂದೆ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹೆಸರಿನಲ್ಲಿ ಅಧ್ಯಯನ ಪೀಠವನ್ನು ಹಾಸನದ ಹೇಮಗಂಗೋತ್ರಿಯಲ್ಲಿ ಸ್ಥಾಪಿಸಬೇಕೆಂಬ ಆಶಯ ಹೊಂದಿರುವುದಾಗಿ ತಿಳಿಸಿದರು.

ಗೊರೂರು ಕರ್ನಾಟಕದಲ್ಲಿ ಇರುವ ಒಂದು ಸಣ್ಣ ಗ್ರಾಮ. ಇಂತಹ ಹಳ್ಳಿಗಳು ಕರ್ನಾಟಕದಲ್ಲಿ ಸಾವಿರಾರು ಇವೆ. ಆದರೆ ಗೊರೂರಿನ ವಿಶೇಷವೇನೆಂದರೆ ಕರ್ನಾಟಕದಲ್ಲಿ ಅದರ ಹೆಸರನ್ನು ಕೇಳದೆ ಇರುವವರೇ ಇಲ್ಲ. ಗೊರೂರು ಗ್ರಾಮವನ್ನು ಕನ್ನಡಿಗರಿಗೆ ಚಿರಪರಿಚಿತಗೊಳಿಸಿದ ವ್ಯಕ್ತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು. ನಮ್ಮ ಮನೆ ಸ್ವಾತಂತ್ರ್ಯ ಹೋರಾಟದ ಪುಣ್ಯಸ್ಥಳ. ಅದು ತ್ಯಾಗ ಭೂಮಿ. ಆ ಮನೆ ಕನ್ನಡ ಜನತೆಯ ಆಸ್ತಿ. ಇದನ್ನು ಕಾಪಾಡಿ ಉಳಿಸುವುದು ಕನ್ನಡಿಗರ ಕರ್ತವ್ಯ. ಈ ಮನೆಯನ್ನು ನಾನು ಈಗ ತಾನೇ ನೋಡಿ ಬಂದಿದ್ದೇನೆ. ತುಂಬಾ ದುಸ್ಥಿತಿಯಲ್ಲಿದೆ. ಈ ಮನೆಯನ್ನು ಸರ್ಕಾರ ವಶಕ್ಕೆ ತೆಗೆದುಕೊಂಡು ಇದನ್ನು ದುರಸ್ತಿ ಮಾಡಿ ಅದನ್ನು ಕನ್ನಡಿಗರಿಗೆ ಉಳಿಸಿಕೊಡಬೇಕು, ಬೆಂಗಳೂರಿನ ಮುಖ್ಯ ರಸ್ತೆ ಸರ್ಕಲ್‌ಗಳಿಗೆ ಗೊರೂರರ ಹೆಸರನ್ನು ಇಡಬೇಕು, ಗೊರೂರರ ಪ್ರತಿಮೆ ಸ್ಥಾಪಿಸಬೇಕು. ಇದು ಆಗಬೇಕಾಗಿರುವ ಕೆಲಸ. ಇದು ಕನ್ನಡದ ಕೆಲಸ. ಇದನ್ನು ಕಾರ್ಯಸಾಧ್ಯ ಮಾಡಿಕೊಡಬೇಕು ಇದು ಕರ್ನಾಟಕ ಸರ್ಕಾರಕ್ಕೆ ನನ್ನ ಮನವಿ ಎಂದು ಕೋರಿಕೆ ಸಲ್ಲಿಸಿದರು.

- Advertisement -

ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ವಿಚಾರ ಗೋಷ್ಠಿಯಲ್ಲಿ ಗೊರೂರರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಚಲನಚಿತ್ರ ವಿಚಾರವಾಗಿ ಪ್ರೊ.ಕಮಲ ನರಸಿಂಹ ಕಾದಂಬರಿಕಾರರು ತುಮಕೂರು, ಗೊರೂರರ ಕೃತಿಗಳಲ್ಲಿ ಜನಪದ ಸಿದ್ಧಿ ಸಮೃದ್ಧಿ ವಿಷಯವಾಗಿ ಡಾ. ಹಂಪನಹಳ್ಳಿ ತಿಮ್ಮೇಗೌಡರು ನಿವೃತ್ತ ಪ್ರಾಧ್ಯಾಪಕರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಡಾ. ಗೊರೂರರ ಪಾತ್ರ ವಿಷಯವಾಗಿ ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಕಡೆಯಲ್ಲಿ ಡಾ.ಗೊರೂರರು ಒಂದು ಕಡೆ ಹೀಗೆ ಹೇಳುತ್ತಾರೆ. ನನ್ನ ಬಾಳನ್ನು ನಾನು ಹಿಂದಿರುಗಿ ನೋಡಿದಾಗ ನಾನು ಸಾಹಿತಿಗಿಂತ ಜನಸಾಮಾನ್ಯರ ಮನುಷ್ಯ. ರಾಜಕೀಯದಲ್ಲಿ ಗಾಂಧೀಜಿಯವರ ಅದಮ್ಯ ಚಿಂತನ ಶಕ್ತಿ ತ್ಯಾಗ ಆದರ್ಶಗಳಿಂದ ಪ್ರೇರೇಪಿತನಾಗಿ ಈ ಕ್ಷೇತ್ರದಲ್ಲಿ ನನ್ನಿಂದಾದ ಸೇವೆ ಸಲ್ಲಿಸಲು ಹೊರಟವ. ನಮ್ಮ ಭಾರತವನ್ನು ಆಧುನಿಕ ನಾಗರೀಕತೆಯ ಸರ್ವನಾಶದಿಂದ ತಪ್ಪಿಸಬಲ್ಲದು ಅದೊಂದು ಎಂಬುದು ನನ್ನ ನಂಬಿಕೆ.. ಎಂಬುದನ್ನು ಉಲ್ಲೇಖಿಸಿದ ಗೊರೂರು ಅನಂತರಾಜು ನಾವು ಡಾ. ನಿಧನರಾದ ವರ್ಷ ೧೯೯೧ರಲ್ಲೇ ಗೊರೂರು ಸ್ಮರಣ ಸಮಿತಿ ಮಾಡಿಕೊಂಡು ಗೊರೂರರ ಮನೆಯನ್ನು ಸ್ಮಾರಕವಾಗಿ ಉಳಿಸುವ ಪ್ರಯತ್ನ ನಡೆಸಿದ್ದು ಇಲ್ಲಿಯವರೆಗೂ ಕಾರ್ಯಗತವಾಗಿಲ್ಲ ಎಂದರು. ಹಲೋ ಹಾಸನ್ ಸಂಜೆ ದಿನಪತ್ರಿಕೆ ಸಂಪಾದಕರು ರವಿ ನಾಕಲಗೂಡು, ಡಾ, ಶ್ರೀನಿವಾಸ್ ಜಿ.ಎಸ್. ನಿವೃತ್ತ ಪ್ರಾಧ್ಯಾಪಕರು ಬೆಂಗಳೂರು, ಈ.ಕೃಷ್ಣೇಗೌಡರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಸನ ಜಿಲ್ಲಾಧ್ಯಕ್ಷ, ಸುಂದರೇಶ್ ಡಿ.ಉಡುವೇರೆ, ಕ.ರಾ.ಬ.ಸಂಘ ಹಾಸನ ಜಿಲ್ಲಾಧ್ಯಕ್ಷ, ಕನ್ನಡ ವಿಭಾಗದ ಮುಖ್ಯಸ್ಥರು ರಾಮೇಗೌಡ ಬಿ.ಎನ್, ಪ್ರಾಧ್ಯಾಪಕ ಹೆಚ್.ಕೆ.ವೆಂಕಟೇಶ್, ಸಹಾಯಕ ಪ್ರಾಧ್ಯಾಪಕ ರಾಮೇಗೌಡ ಮತ್ತಿತರ ಪ್ರಾಧ್ಯಾಪಕ ವರ್ಗ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಡಾ. ಕೆ.ಜಿ.ಕವಿತಾ ಪ್ರಾಂಶುಪಾಲರು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಧ್ಯಕ್ಷತೆ ವಹಿಸಿ ಮಾತನಾಡಿ ಡಾ. ಗೊರೂರು ಅಧ್ಯಯನ ಪೀಠ ಸ್ಥಾಪನೆಗೆ ತಮ್ಮ ಸಹಕಾರ ನೀಡುವುದಾಗಿ ತಿಳಿಸಿದರು. ಶಿಲ್ಪಶ್ರೀ ಆರ್. ಕಾರ್ಯಕ್ರಮ ನಿರೂಪಿಸಿದರು.

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group