ಬೀದರ – ಯಾವುದೇ ಪ್ರತಿಭಟನೆಗೆ ಇಳಿಯಬಾರದು ಎಂಬ ರಾಜ್ಯ ಸರ್ಕಾರದ ಆದೇಶವಿದ್ದರೂ ಬೀದಿಗಿಳಿದ ಮುಸ್ಲಿಮರು ಅಶೋಕ ಚಕ್ರವೇ ಇರದ ರಾಷ್ಟ್ರಧ್ವಜ ಪ್ರದರ್ಶನ ಮಾಡಿ ಧ್ವಜಕ್ಕೆ ಅಪಮಾನ ಮಾಡಿದ ಘಟನೆ ನಡೆಯಿತು.
ಮಹಮ್ಮದ್ ಪೈಗಂಬರ್ ವಿರುದ್ಧ ಬಿಜೆಪಿ ವಕ್ತಾರೆ ಹೇಳಿದ್ದಾರೆನ್ನಲಾದ ಹೇಳಿಕೆ ಖಂಡಿಸಿ ಬೀದರ್ ನಗರದ ಓಲ್ಡ್ ಸಿಟಿಯ ಗವಾನ್ ಚೌಕ್ ನಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದರು.
ರಾಷ್ಟ್ರ ಧ್ವಜ ಹಿಡಿದು ಪ್ರತಿಭಟನೆಗೆ ಮುಂದಾದ ಮುಸ್ಲಿಂ ಸಮುದಾಯದವರು ತಮ್ಮ ಕೈಯಲ್ಲಿರುವ ಧ್ವಜದಲ್ಲಿ ಅಶೋಕ ಚಕ್ರವೇ ಇಲ್ಲದಿರುವುದನ್ನು ಗಮನಿಸಿದ್ದರೋ ಇಲ್ಲವೋ ಗೊತ್ತಾಗಿಲ್ಲ.
ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸರು, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಸ್ಥಳಕ್ಕೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ಭೇಟಿ ನೀಡಿ, ಯಾವುದೇ ಪ್ರತಿಭಟನೆಗೆ ಇಳಿಯದಂತೆ ರಾಜ್ಯ ಸರ್ಕಾರದ ಆದೇಶ ಇರುವುದಾಗಿ ಪ್ರತಿಭಟನಟಕಾರರ ಮನವೊಲಿಸಿದರು. ಇಷ್ಟೆಲ್ಲ ಆದರೂ ರಾಷ್ಟ್ರಧ್ವಜದಲ್ಲಿ ಆಶೋಕ ಚಕ್ರ ಕಾಣೆಯಾಗಿರುವುದರ ಬಗ್ಗೆ ಯಾರೊಬ್ಬರೂ ಗಮನಕ್ಕೆ ತಂದುಕೊಳ್ಳದಿರುವುದು ವಿಪರ್ಯಾಸವೆನ್ನಿಸಿತು.
ರಾಜ್ಯ ಸರ್ಕಾರದ ಆದೇಶ ಇರದು ಯಾರು ಪ್ರತಿಭಟನೆ ಮಾಡಬಾರದು ಎಂದು ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ