spot_img
spot_img

ಸಿಂದಗಿಯ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ – ಶಾಸಕ ಅಶೋಕ ಮನಗೂಳಿ

Must Read

- Advertisement -

ಸಿಂದಗಿ- ಸಿಂದಗಿ ಪಟ್ಟಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಆ ನಿಟ್ಟಿನಲ್ಲಿ ಸಿಂದಗಿಯ ಪ್ರಮುಖ ರಸ್ತೆಗಳನ್ನು ಅಭಿವೃದ್ದಿ ಪಡಿಸಿ ಸಿಂದಗಿ ನಗರವನ್ನು ಅತ್ಯಂತ ಸುಂದರ ನಗರವನ್ನಾಗಿ ತಾಲೂಕಿನ ಸರ್ವಾಂಗಿಣ ಅಭಿವೃದ್ಧಿ ಮಾಡುವ ಗುರಿ ನನ್ನದಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ ವೃತ್ತದ ಬಳಿ ಮಂಗಳವಾರ ಲೋಕಪಯೋಗಿ ಇಲಾಖೆ , ಉಪ ವಿಭಾಗ ಸಿಂದಗಿಯ 2023-24ನೇ ಸಾಲಿನ ಲೆಕ್ಕ ಶಿರ್ಷಿಕೆ-3054-04-337-1-10-200 ಜಿಲ್ಲಾ ಮುಖ್ಯ ರಸ್ತೆ ನಿರ್ವಹಣೆ ಯೋಜನೆಯಡಿ ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆ ಯೋಜನೆ ಅಡಿಯಲ್ಲಿ ಸಿಂದಗಿ ಪಟ್ಟಣದ ವ್ಯಾಪ್ತಿಯ ಜೇವರ್ಗಿ-ಚಿಕ್ಕೋಡಿ ರಸ್ತೆ ಹಾಗೂ ಆಲಮೇಲ -ಸಿಂದಗಿ ರಸ್ತೆ( ಮಹಾತ್ಮಾ ಗಾಮಧಿ ವೃತ್ತದಿಂದ) ರಾಷ್ಟ್ರೀಯ ಹೆದ್ದಾರಿ -50ರ , ಚಿಕ್ಕಸಿಂದಗಿ ವರ್ತುಲ ರಸ್ತೆಯವರೆಗೆ ಬಾಕಿ ಉಳಿದಿರುವ ರಸ್ತೆಗೆ ಮೀಡಿಯನ್ ಅಳವಡಿಸುವ ಕಾಮಗಾರಿಗೆ ಅಂದಾಜು 1.25 ಕೋಟಿ ಅನುದಾನದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಜಿಲ್ಲಾ ಮುಖ್ಯ ರಸ್ತೆ ನಿರ್ವಹಣೆ ಅಡಿಯಲ್ಲಿ ಸದರಿ ಅಂಬೇಡ್ಕರ್ ವೃತ್ತದಿಂದ ಸಂಗೊಳ್ಳಿ ರಾಯಣ ವೃತ್ತದರವರೆಗೆ 730 ಮೀಟರ್‍ನ ಉದ್ದ ಮತ್ತು ಅಂಬೇಡ್ಕರ್ ವೃತದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ 350.00 ಮೀಟರ್ ಉದ್ದದ ರಸ್ತೆಗೆ ಹಾಗೂ ಕಿತ್ತೂರ ರಾಣಿ ಚನ್ನಮ್ಮ ವೃತ್ತದಿಂದ ಚಿಕ್ಕಸಿಂದಗಿ ಬೈಪಾಸವರೆಗೆ 100 ಮೀಟರ್ ಉದ್ದದ ರಸ್ತೆಗೆ ಮಧ್ಯದಲ್ಲಿ ಮೀಡಿಯನ್ ಅಳವಡಿಸುವದು. ನಗರ ಅಭಿವೃದ್ದಿಯಾಗಲು ಮೊದಲು ರಸ್ತೆಗಳು ಉತ್ತಮವಾಗಿರಬೇಕು. ಮುಂಬರುವ ದಿನಗಳಲ್ಲಿ ಸಿಂದಗಿಗೆ ಕೂಡುವ ಎಲ್ಲ ರಸ್ತೆಗಳನ್ನು ಹಾಗೂ ಪಟ್ಟಣದ ಮುಖ್ಯ ರಸ್ತೆಗಳನ್ನು ಅಭಿವೃದ್ದಿ ಪಡಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.

ಪ್ರಸ್ತುತ ನಿರ್ಮಾಣಗೊಳ್ಳಲಿರುವ ರಸ್ತೆಗೆ ಮೀಡಿಯನ್ ನಿರ್ಮಾಣವಾದ ಬಳಿಕ ಅಲ್ಲಿ ಸುಂದರವಾದ ಗಿಡ ಗಳನ್ನು ನೆಡುವ ಕಾರ್ಯ ಆರಂಭಗೊಳ್ಳಲಿದೆ ಎಂದರು.

- Advertisement -

ತಾಲೂಕಿನ ಗಬಸಾವಳಗಿ ಗ್ರಾಮದಿಂದ ಗೊರಗುಂಡಗಿ ಗ್ರಾಮಕ್ಕೆ ಹೋಗುವ ರಸ್ತೆ ಸುಧಾರಣೆಗೆ 4.5 ಕೋಟಿ, ಪಟ್ಟಣದ ಚಿಕ್ಕಸಿಂದಗಿ ಬೈಪಾಸ್ ನಿಂದ ಬಸವೇಶ್ವರ ವೃತ್ತ, ಡಾ. ಅಂಬೇಡ್ಕರ ವೃತ್ತ, ಮೋರಟಗಿ ನಾಕಾದವರೆಗೆ ಹೊಸ ವಿದ್ಯುತ್ ಕಂಬ ಅಳವಡಿಕೆಗೆ ರೂ 5 ಕೋಟಿ ವೆಚ್ಚದ ಕಾಮಗಾರಿ ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ ಇದು ನನ್ನ 14 ತಿಂಗಳ ಸಾಧನೆಯಾಗಿದ್ದು ಇನ್ನೂ 38 ತಿಂಗಳ ಅವಧಿಯಲ್ಲಿ ನಮ್ಮ ಸರಕಾರದಿಂದ ಹೊಸ ಹೊಸ ಯೋಜನೆಗಳಿಗೆ ಸಾಕಷ್ಟು ಅನುದಾನ ತರುವುದಾಗಿದ್ದು ಅದಕ್ಕೆ ತಾಲೂಕಿನ ಮತದಾರರ ಪ್ರಭುಗಳ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡ ಗೊಲ್ಲಾಳಪ್ಪಗೌಡ ಮಾಗಣಗೇರಿ ಅವರು ಮಾತನಾಡಿ, ಸಿಂದಗಿ ಪಟ್ಟಣದ ಅಭಿವರದ್ದಿಗೆ ಸದಾ ಕಂಕಣ ಬದ್ದರಾಗಿರುವ ಶಾಸಕ ಅಶೋಕ ಮನಗೂಳಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಪಟ್ಟಣದಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.

ಈ ವೇಳೆ ಲೋಕಪಯೋಗಿ ಇಲಾಖೆಯ ಅಧಿಕಾರಿ ಅರುಣಕುಮಾರ ವಡಗೇರಿ, ಪುರಸಭೆಯ ನಾಮ ನಿರ್ದೇಶಿತ ಸದಸ್ಯರಾದ ಚನ್ನಪ್ಪ ಗೊಣಿ, ಸದಾನಂದ ಕುಂಬಾರ, ಸಿದ್ದು ಮಲ್ಲೇದ, ಸಾಯಬಣ್ಣ ಪುರದಾಳ, ಅಬ್ದುಲರಹೀಮ ದುದನಿ, ಮಾಜಿ ಸದಸ್ಯ ಮಂಜುನಾಥ ಬಿಜಾಪೂರ, ಶಾಂತಪ್ಪ ರಾಣಾಗೋಳ, ಲಕ್ಷ್ಮೀಕಾಂತ ಸೂಡಿ, ಜಾಂಗೀರ ಸಿಂದಗಿಕರ, ಕಾಂತನಗೌಡ ಸುರಗಿಹಳ್ಳಿ, ನೂರಅಹ್ಮದ ಅತ್ತಾರ, ಪ್ರವೀಣ ಆಲಹಳ್ಳಿ, ಖಾದರ ಬಂಕಲಗಿ, ರಜತ ತಾಂಬೆ ಸೇರಿದಂತೆ ಇತರರು ಉಪಸ್ಥಿತರಿದ್ದರು

- Advertisement -
- Advertisement -

Latest News

ತತ್ವಬೋಧನೆಗೆ ಮಠಗಳು ಸಿದ್ಧವಾಗಬೇಕು – ಬಿಇಓ ಯಡ್ರಾಮಿ

ಸಿಂದಗಿ: ಆರ್ಥಿಕ ಸಬಲತೆಯ ಮಠಗಳಾಗದೇ ತತ್ವಭೋಧನೆಗೆ ಮಠಗಳು ಸಿದ್ಧವಾಗಬೇಕು. ಶಾಲೆಗಳಲ್ಲಿ ಶಿಸ್ತು ಮತ್ತು ಶಿಕ್ಷಣ ಕಲಿಯಬಹುದು ಮಠಗಳಿಂದ ಆಧ್ಯಾತ್ಮಿಕತೆ ಮತ್ತು ಸಂಸ್ಕಾರ ಸಿಗುವುದು ಅಲ್ಲದೆ ವಿದೇಶಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group