ಸಿಂದಗಿ: ಕಳೆದ ಉಪಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಸರಕಾರದ ಹತ್ತು ಹಲವಾರು ಯೋಜನೆಗಳನ್ನು ನಿಮ್ಮ ಮನೆ ಬಾಗಿಲಿಗೆ ತಂದು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಕ್ಷೇತ್ರದ ಅಭಿವೃದ್ದಿ ನನ್ನ ಸಂಕಲ್ಪವಾಗಿದೆ ಸರಕಾರದ ಯೋಜನೆಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದಲ್ಲಿ 2021-22 ನೇ ಸಾಲಿನ 5054- ಯೋಜನೆಯಡಿಯಲ್ಲಿ 41 ಲಕ್ಷ ರೂ ಅನುದಾನದ ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ರವಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮತದಾರರು ನನ್ನ ಮೇಲೆ ಅಪಾರವಾದ ವಿಶ್ವಾಸವನ್ನಿಟ್ಟು ಮೂವತ್ತು ಸಾವಿರಕಿಂತ ಅಧಿಕ ಮತಗಳಿಂದ ಆಯ್ಕೆಮಾಡಿ ಕ್ಷೇತ್ರ ಅಭಿವೃದ್ಧಿ ಪಡಿಸಲು ಅವಕಾಶ ನೀಡಿದ್ದೀರಿ ಅಧಿಕಾರದ ಅವಧಿ ಕಡಿಮೆ ಇದ್ದರೂ ಕೂಡ ಪಟ್ಟಣ ಸೇರಿದಂತೆ ಗ್ರಾಮೀಣ ಬಾಗಕ್ಕೂ ಒತ್ತು ನೀಡಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಸಾರ್ವಜನಿಕರು ತಂಟೆ ತಕರಾರು ಮಾಡದೆ ಗುತ್ತಿಗೆದಾರೊಂದಿಗೆ ಸಹಕಾರದಿಂದ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಹೇಳಿದರು.
ಭಂಟನೂರ: ಗ್ರಾಮದಲ್ಲಿ ರವಿವಾರ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ 2021-22 ನೇ ಸಾಲಿನ ಲೆಕ್ಕ ಶೀರ್ಷಿಕೆ 5054-04-337-0-01-422 (ಎಸ್,ಸಿ,ಪಿ) ಯೋಜನೆ ಅಡಿಯಲ್ಲಿ 28ಲಕ್ಷ ರೂ ವೆಚ್ಚದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಭೂಮಿಪೂಜೆ ನೆರವೇರಿಸಿದರು.
ನಾಗಾವಿ (ಬಿಕೆ) :2021-22 ನೇ ಸಾಲಿನ 5054- ಯೋಜನೆಯಡಿಯಲ್ಲಿ 41 ಲಕ್ಷ ರೂ ಅನುದಾನದ ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ನೆ ನೀಡಿದರು.
ಕಕ್ಕಳಮೇಲಿ : ಗ್ರಾಮದಲ್ಲಿ ರವಿವಾರ 2021-22 ನೇ ಸಾಲಿನ 5054- ಯೋಜನೆಯಡಿಯಲ್ಲಿ 24 ಲಕ್ಷ ರೂ ಅನುದಾನದ ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವುರ್, ಗ್ರಾ. ಪಂ. ಅಧ್ಯಕ್ಷ ಅಮೋಘಸಿದ್ಧ ವಡೆಯರ್, ಮಾಜಿ ತಾ. ಪಂ. ಸದಸ್ಯ ಮಡಿವಾಳಪ್ಪ ಬೋನಾಳ, ಮಾಜಿ ಗ್ರಾ. ಪಂ. ಅಧ್ಯಕ್ಷ ಬಸಲಿಂಗಪ್ಪ ಬೋನಾಳ, ಗುತ್ತಿಗೆದಾರ ಎನ್. ಎ. ಬಿರಾದಾರ್, ಶ್ರೀಮಂತ ಮಳಗಿ, ನಿಂಗಣ್ಣ ಅಗಸರ್, ನೂರಮಹ್ಮದ ಕಣ್ಣಿ, ಶಿವು ಪದ್ಮ, ಕನ್ನಯ್ಯ ಕೇರಿಗೊಂಡ, ಶ್ರೀಮಂತ ಮರಾಠೆ, ಸಂತೋಷ ಕೆರಿಗೊಂಡ ಸೇರಿದಂತೆ ಹಲವರಿದ್ದರು.