ಕಲ್ಲೋಳಿ ಪಟ್ಟಣದಲ್ಲಿ ೪೧ನೇ ನವರಾತ್ರಿ ಉತ್ಸವ ಆಯೋಜನೆ
ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ೪೧ನೇ ವರ್ಷದ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿ ಪುರಾಣ ಮತ್ತು ಪ್ರವಚನ ಅ. ೩ರಿಂದ ನ.೧೨ರ ವರೆಗೆ ಒಂಬತ್ತು ದಿನಗಳ ಕಾಲ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಜರುಗಲಿದೆ ಎಂದು ನವರಾತ್ರಿ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ ರಾವಸಾಹೇಬ ಬೆಳಕೂಡ ತಿಳಿಸಿದರು .
ಬುಧವಾರದಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ, ಶಾಸಕ ಬಾಬಾಸಾಹೇಬ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅರಿಹಂತ ಉದ್ಯೋಗ ಸಮೂಹದ ಅಧ್ಯಕ್ಷ ಅಭಿನಂದನ ಪಾಟೀಲ, ಡಾ. ಮಹಾಂತೇಶ ಕಡಾಡಿ ಮತ್ತು ಪಟ್ಟಣದ ಗುರುಹಿರಿಯರು ಸಮಾರಂಭದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವವರು. ಸಮಾರಂಭದ ಘಟಸ್ಥಾಪನಾ ಕಾರ್ಯಕ್ರಮದಲ್ಲಿ ಬಂಡೆಗಣಿಯ ಬಸವ ಗೋಪಾಲ ನೀಲ ಮಾಣಿಕ್ಯ ಮಠದ ದಾಸೋಹ ರತ್ನ ಅನ್ನದಾನೇಶ್ವರ ಶ್ರೀಗಳು, ಹೊಳೆ ಬಬಲಾದಿಯ ಸಿದ್ದರಾಮೇಶ್ವರ ಶ್ರೀಗಳು, ಅರಕೇರಿ ಅಮೋಘಸಿದ್ಧ ಪೀಠದ ಅವದೂತ ಶ್ರೀಗಳು, ಹುಲಜಂತಿ-ಮಹಾರಾಷ್ಟ್ರ ಸುಕ್ಷೇತ್ರ ಭೂಕೈಲಾಸದ ಮಾಳಿಂಗರಾಯ ಶ್ರೀಗಳು ಆಗಮಿಸುವವರು ಎಂದರು.
ಅ.೪ರಂದು ಗದಗ-ವಿಜಯಪೂರ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಮಹಾಸ್ವಾಮೀಜಿಗಳು ಪ್ರವಚನ ನೀಡುವರು, ಅ.೫ರಂದು ಬೆಳವಿ ಚರಂತೇಶ್ವರ ವೀರಕ್ತಮಠದ ಶರಣಬಸವ ಶ್ರೀಗಳು, ಅ.೬ ರಂದು ಅಂಕಲಗಿ-ಕುಂದರಗಿ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಅಮರಸಿದ್ದೇಶ್ವರ ಶ್ರೀಗಳು, ಅ.೭ರಂದು ಕಕಮರಿ ರಾಯಲಿಂಗೇಶ್ವರ ಸಂಸ್ಥಾನ ಮಠದ ಅಭಿನವ ಗುರುಲಿಂಗ ಜಂಗಮ ಶ್ರೀಗಳು, ಅ.೮ರಂದು ಶೇಗುಣಸಿ ವಿರಕ್ತಮಠದ ಮಹಾಂತ ಪ್ರಭು ಶ್ರೀಗಳು, ಅ.೯ ರಂದು ಹಿರೇಕೆರೂರ-ಹಾವೇರಿ ಎಮ್.ಎ. ತತ್ವಜ್ಞಾನ ಭೀಮಾವಧೂತ ಮಠದ ನಾಗೇಶ್ವರ ಶ್ರೀಗಳು, ಅ.೧೦ ರಂದು ಪರಮಾನಂದವಾಡಿ ಗುರುದೇವ ಬ್ರಹ್ಮಾನಂದ ಆಶ್ರಮದ ಅಭಿನವ ಬ್ರಹ್ಮಾನಂದ ಶ್ರೀಗಳು, ಅ.೧೧ ರಂದು ಬೆಳಗಾವಿ ವೀರಕ್ತಮಠ ಹಂದಿಗುAದದ ಶಿವಾನಂದ ಶ್ರೀಗಳು ಆಗಮಿಸುವರು ಎಂದು ಮಾಹಿತಿ ನೀಡಿದರು
ಭಗವಂತ ಪತ್ತಾರ ಮಾತನಾಡಿ, ಅ.೩ರಂದು ಬೆಳಿಗ್ಗೆ ದೇವಿ ಅಭಿಷೇಕ ಹಾಗೂ ಯಜ್ಞ , ಹೋಮ, ಹವನ, ಗಣಹೋಮ ಕಾರ್ಯಕ್ರಮ ವೇ.ಮೂ ಮೃತ್ಯುಂಜಯ ಹಿರೇಮಠ ಅವರಿಂದ ಜರುಗುವುದು. ಸಾಯಂಕಾಲ ೪ ನೂತನ ದೇವಿಯ ಮೂರ್ತಿ ಭವ್ಯ ಮೆರವಣಿಗೆಯು ಕುಂಭ ಮೇಳ, ಮುತೈದೆಯರಿಂದ ಆರತಿ ಸೇವೆ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ದೇವಿಯ ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು. ಸಂಜೆ ೬ಕ್ಕೆ ಗರ್ಭ ಗುಡಿಯಲ್ಲಿ ಘಟಸ್ಥಾಪನೆ ನಂತರ ಉದ್ಘಾಟನಾ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ಪ್ರತಿ ದಿನ ಸಂಜೆ ೭ಕ್ಕೆ ಕಲ್ಲೋಳಿಯ ಸಕಲ ಭಜನಾ ಮಂಡಳಿಗಳು ಭಾಗವಹಿಸುವವು, ಅ.೭ ರಂದು ಗಂಗಾರತಿ ಕಾರ್ಯಕ್ರಮ ಜರುಗುವುದು, ಅ.೧೧ ರಂದು ನವದುರ್ಗಿಯರ ಉಡಿ ತುಂಬುವುದು ಮತ್ತು ಅಂದು ಸಾಯಂಕಾಲ ದೇವಿಯ ಮೂರ್ತಿ ಮೆರವಣಿಗೆ ಹಾಗೂ ಮಹಾಪ್ರಸಾದ ಜರುಗುವುದು. ಅ.೧೨ ರಂದು ವಿಜಯ ದಶಮಿಯಂದು ಕಲ್ಲೋಳಿ ಹನುಮಂತ ದೇವರ ಹಾಗೂ ಮಹಾಲಕ್ಷ್ಮಿ ದೇವಿಯ ಪಲ್ಲಕ್ಕಿಗಳು ಭವ್ಯ ಮೆರವಣಿಗೆಯೊಂದಿಗೆ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಮುರಿಯುವ ಕಾರ್ಯಕ್ರಮ ಜರುಗುವುದು ಎಂದರು.
ಈ ಸಮಯದಲ್ಲಿ ಬಸವರಾಜ ಕಡಾಡಿ, ಶೀತಲ ಅಥಣಿ, ಉಮೇಶ ಪಾಟೀಲ, ಸಿದ್ದಪ್ಪ ಮುಗಳಿ, ಈರಪ್ಪ ಬಿ.ಪಾಟೀಲ, ಕುಮಾರ ರಾಚನ್ನವರ, ಶಿವಕುಮಾರ ಸವಸುದ್ದಿ, ಸಚೀನ ಕಡಾಡಿ, ಹಣಮಂತ ನಾಯಕ್, ಭೀಮರಾಯ ಕಡಾಡಿ, ಸಿದ್ದು ಮಾಯನ್ನವರ, ಭೀಮಪ್ಪ ಮಾಯನ್ನವರ, ಬಾಳಪ್ಪ ಮಾಯನ್ನವರ, ಹಣಮಂತ ಮಾಯನ್ನವರ ಮತ್ತಿತರರು ಇದ್ದರು.