ಬೀದರ – ಜಿಲ್ಲೆಯ ಬಸವಕಲ್ಯಾಣದಲ್ಲಿ ಎಂಟು ಎಕರೆ ಭೂಮಿಯನ್ನು ಖರೀದಿಸಿ ಶಿವಾಜಿ ಪಾರ್ಕ್ ಮಾಡಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ಚಿಂತನೆ ವಿರುದ್ಧ ಬಸವಕಲ್ಯಾಣ ಬಸವಣ್ಣನವರ ಅನುಯಾಯಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಬಸವಣ್ಣನವರ ಅನುಭವ ಮಂಟಪ ಕ್ಕೆ ಇನ್ನೂ ಭೂಮಿ ಇರುವುದರಿಂದ ಅನುಭವ ಮಂಟಪ ಕೆಲಸ ನಡೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಶಿವಾಜಿ ಪಾರ್ಕ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ ಶಿವಾಜಿ ಪಾರ್ಕ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಸವಣ್ಣನವರ ಭಕ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ವ್ಯಕ್ತಪಡಿಸಿದ್ದಾರೆ.
‘ನಿಲ್ಲಿಸಿ ನಿಲ್ಲಿಸಿ ಎಂಟು ಎಕರೆ ಶಿವಾಜಿ ಪಾರ್ಕ್ ಬಸವಕಲ್ಯಾಣ ನಲ್ಲಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುವ ಪೋಸ್ಟ್ ವೈರಲ್ ಆಗುತ್ತಿದೆ. ಶಿವಾಜಿ ಪಾರ್ಕ್ ಎಲ್ಲಾದರೂ ಮಾಡಿಕೊಳ್ಳಿ ಬಸವಕಲ್ಯಾಣದಲ್ಲಿ ಮಾತ್ರ ಶಿವಾಜಿ ಪಾರ್ಕ್ ಬೇಡವೇ ಬೇಡ ಎಂದು ಪೋಸ್ಟ್ ಹರಿಯಬಿಡಲಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ