ಘಟಪ್ರಭಾ: ತಲೆಯ ಮೆಲೋಂದು ಸ್ವಂತ ಸೂರಿಲ್ಲದಿದ್ದರೂ ತಾವು ನಂಬಿದ ದೇವರು ನೆರಳಲ್ಲಿರಬೇಕೆಂದು ಬಯಸಿ ಹಲವಾರು ಗುಡಿ-ಗುಂಡಾರಗಳನ್ನು ಕಟ್ಟುವ ಮೂಲಕ ಗ್ರಾಮಾಂತರ ಪ್ರದೇಶದ ಜನರು ದೇವರ ಬಗೆಗಿನ ಭಕ್ತಿ ಮತ್ತು ನಂಬಿಕೆಯನ್ನು ಎಷ್ಟು ಹೊಗಳಿದರೂ ಸಾಲದು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ಶನಿವಾರ ನ-02 ರಂದು ಗೋಕಾಕ ತಾಲೂಕಿನ ಬಸಳಿಗುಂದಿ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮುಂದುವರೆದ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಅವರು ಮಾತನಾಡಿದರು.
ಸರಕಾರದ ಅನುದಾನ ಜನರ ಕಲ್ಯಾಣ ಕಾರ್ಯಗಳಿಗೆ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಗ್ರಾಮದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮದುವೆ ಸಮಾರಂಭ ಈ ರೀತಿಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅದರಲ್ಲೂ ಬಡ ಕುಟುಂಬದ ಜನರಿಗೆ ಅನುಕೂಲವಾಗುವಂತೆ ಈ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತದೆ ಗ್ರಾಮದ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಮುಖರಾದ ಸಿದ್ದಪ್ಪ ವಾಲಿಕಾರ, ವಿಠ್ಠಲ ಮಡೆಪ್ಪನ್ನವರ, ಹಾಲಪ್ಪ ವಾಲಿಕಾರ, ಬಾಗಪ್ಪ ಬಿ.ಪಾಟೀಲ, ಸಿದ್ದಪ್ಪ ಹಳಬರ, ಸಿದ್ದಪ್ಪ ಕುಸ್ತಿ, ಸುರೇಶ ವಾಲಿಕಾರ, ಲಕ್ಷö್ಮಣ ಕಬಾಡಗಿ, ತುಕಾರಾಮ ಪಾಟೀಲ, ಸಿದ್ದಪ್ಪ ಕುರಬನ್ನವರ, ಗೋಪಾಲ ವಾಲಿಕಾರ, ಯಮನಪ್ಪ ಬಿಲಕುಂದಿ, ಭರಮಪ್ಪ ವ್ಯಾಪಾರಿ, ಕರೆಪ್ಪ ಮಡೆಪ್ಪನ್ನವರ, ಮುತ್ತೆಪ್ಪ ಕಲ್ಲೋಳಿ, ಬಸಪ್ಪ ಮುನ್ನೋಳಿ ಅಡಿವೆಪ್ಪ ಬಿಲಕುಂದಿ, ಲಗಮಣ್ಣ ಕುಳ್ಳೂರ, ದಶರಥ ಪಾಟೀಲ ಸೇರಿದಂತೆ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.