ಎಮ್ ಎಚ್ ಪೂಜಾರಿ ಅವರ ಭಕ್ತಿ ಗೀತೆ ಬಿಡುಗಡೆ

Must Read

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಮರಡಿ ಬೂದಿಹಾಳ ಗ್ರಾಮದ ಆರಾಧ್ಯ ದೈವಾಗಿರುವ ಮಹಾಮಹಿಮ ಶ್ರೀ ಮಾರುತೇಶ್ವರನ ಕುರಿತು “ನಮ್ಮೂರ ಹಿರಿಮೆ ಶ್ರೀ ಮಾರುತೇಶ್ವರನ ಮಹಿಮೆ” ಎಂಬ ಭಕ್ತಿ ಗೀತೆಯನ್ನು ಮರಡಿ ಬೂದಿಹಾಳ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಬಸವನಾಳ, ಮರಡಿ ಬೂದಿಹಾಳ ಹಾಗೂ ಮೂಗನೂರ ಈ ಮೂರು ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡುವುದರ ಮೂಲಕ ಊರಿನ ಸಮಸ್ತ ಗುರುಹಿರಿಯರು ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಸಾಯಂಕಾಲ ಬಿಡುಗಡೆ ಮಾಡಿದರು.

ನಮ್ಮೂರ ಹಿರಿಮೆ ಶ್ರೀ ಮಾರುತೇಶ್ವರನ ಮಹಿಮೆ ಎಂಬ ಭಕ್ತಿ ಗೀತೆಯಲ್ಲಿ ಶ್ರೀ ಮಾರುತೇಶ್ವರ ದೇವರ ಪವಾಡಗಳು, ಭಕ್ತಿ ಭಾವಗಳು ಊರಿನ ಗಣ್ಯ ಮಾನ್ಯರ ಸಹಕಾರ ಪ್ರೋತ್ಸಾಹ ಎಲ್ಲವನ್ನು ಒಳಗೊಂಡಂತೆ ಎಂ ಎಚ್ ಪೂಜಾರಿ,ಶಿಕ್ಷಕರು HPS ಹಿರೇಮಳಗಾವಿ ಹಾಗೂ ಉಪಾಧ್ಯಕ್ಷರು SC/ST ನೌಕರರ ಸಂಘ ಹುನಗುಂದ ಮತ್ತು ನಿರ್ದೇಶಕರು ಶಿಕ್ಷಕರ ಪತ್ತಿನ ಸಹಕಾರಿ ಸಂಘ ಹುನಗುಂದ ಇವರು ಅತ್ಯಂತ ಸೊಗಸಾಗಿ ಸುಂದರವಾಗಿ ಗೀತೆ ರಚಿಸಿ ಹಾಡಿಸಿ ಮರಡಿ ಬೂದಿಹಾಳ, ಮೂಗನೂರ ಹಾಗೂ ಬಸವನಾಳ ಗ್ರಾಮದವರ ಮೆಚ್ಚುಗೆಗೆ ಪಾತ್ರರಾದರು.

ನಮ್ಮೂರ ಹಿರಿಮೆ ಶ್ರೀ ಮಾರುತೇಶ್ವರನ ಮಹಿಮೆ ಎಂಬ ಭಕ್ತಿಗೀತೆಯ ಬಿಡುಗಡೆ ಕಾರ್ಯಕ್ರಮದಲ್ಲಿ
ಶಂಕರಗೌಡ ಗೌಡರ,  ಶಾಂತಗೌಡ ಪಾಟೀಲ್,  ವಿ .ಜಿ .ಗಡೆದ (ನಿವೃತ್ತ Pkps ಬ್ಯಾಂಕ ವ್ಯವಸ್ಥಾಪಕರು )  ಭೀಮಪ್ಪ ಪೂಜಾರಿ,  ಮಹಮ್ಮದಸಾಬ್ ವಾಲಿಕಾರ್, ಬಸವರಾಜ ಗೂರಿಕಾರ,  ರಾಮಣ್ಣ ಹೊರಕೇರಿ, ಅಮಿನಸಾಬ್ ಹೊನ್ಯಾಳ
ಮನೋಹರ ಹಡಪದ, ಗೋಪಾಲ ಹೊರಕೇರಿ, ರಾಜೇಸಾಬ್ ಸುತಗುಂಡರ, ಸಂಗಣ್ಣ ಗೌಡರ, ಹುಸೇನಸಾಬ್ ವಾಲಿಕಾರ
ಬಸವರಾಜ ಮೇಟಿ ಶಿಕ್ಷಕರು  ಮುತ್ತು ವಡ್ಡರ ಶಿಕ್ಷಕರು  ಹನಮಂತ ಮಾದರ ಶಿಕ್ಷಕರು  ಬಸವರಾಜ್ ಪೂಜಾರಿ  ಹನಮಂತ ಪೂಜಾರಿ  ಗೈಬುಸಾಬ್ ಚಪೃರಬಂದ ಹನಮಂತ ತಳವಾರ ಹಾಗೂ ಮರಡಿಬೂದಿಹಾಳ ಮೂಗನೂರ ಮತ್ತು ಬಸವನಾಳ ಗ್ರಾಮದ ಗುರುಹಿರಿಯರು ಯುವಕ ಮಿತ್ರರು ಹಾಜರಿದ್ದರು.

ಪ್ರಾಸ್ತಾವಿಕವಾಗಿ ಎಮ್ ಎಚ್ ಪೂಜಾರಿಯವರು ಮಾತನಾಡಿದರು. ಬಿಡುಗಡೆಯಾದ ಭಕ್ತಿಗೀತೆಯ ಕುರಿತು ಮುತ್ತು ಯ. ವಡ್ಡರ ಶಿಕ್ಷಕರು ಮಾತನಾಡಿದರು. ಬಿ ಆಯ್ ಮೇಟಿಯವರು ಊರಿನ ಗಣ್ಯಮಾನ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Latest News

ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ

ಮಹಾರಾಷ್ಟ್ರ ಮತ್ತು ಭಾರತೀಯ ಚಿತ್ರ ರಂಗಕ್ಕೆ ಕನ್ನಡದ ಕೊಡುಗೆ ಅಪಾರ. ಅಮೀರ್ ಬಾಯಿ ಕರ್ನಾಟಕಿ ಗುರು ದತ್ತ ಶ್ಯಾಮ ಬೆನಗಲ್ ಗಿರೀಶ್ ಕಾರ್ನಾಡ ವಿ ಶಾಂತಾರಾಮ...

More Articles Like This

error: Content is protected !!
Join WhatsApp Group