ಶಿಕ್ಷಕ ಎಂ ಎಚ್ ಪೂಜಾರಿಯವರ ಭಕ್ತಿಗೀತೆ ಬಿಡುಗಡೆ

Must Read

ಬಾಗಲಕೋಟ : ಜಿಲ್ಲೆಯ ಹುನಗುಂದ ತಾಲೂಕಿನ ಮರಡಿ ಬೂದಿಹಾಳ ಗ್ರಾಮದ ಆರಾಧ್ಯ ದೈವಾಗಿರುವ ಮಹಾಮಹಿಮ ಶ್ರೀ ಮಾರುತೇಶ್ವರನ ಕುರಿತು ” ಭಕ್ತರ ಉಸಿರು ಶ್ರೀ ಮಾರುತೇಶ್ವರ ದೇವರು ” ಎಂಬ ಭಕ್ತಿ ಗೀತೆಯನ್ನು ಅತ್ಯಂತ ಸರಳವಾಗಿ ಗುರುಹಿರಿಯರ ಸಮ್ಮುಖದಲ್ಲಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡುವುದರ ಮೂಲಕ ಊರಿನ ಸಮಸ್ತ ಗುರುಹಿರಿಯರು ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳಗಿನ ಜಾವ ಬಿಡುಗಡೆ ಮಾಡಿದರು.

ಭಕ್ತರ ಉಸಿರು ಶ್ರೀ ಮಾರುತೇಶ್ವರ ದೇವರು ಎಂಬ ಭಕ್ತಿ ಗೀತೆಯಲ್ಲಿ ಶ್ರೀ ಮಾರುತೇಶ್ವರ ದೇವರ ಪವಾಡಗಳು, ಭಕ್ತಿ ಭಾವಗಳು ಊರಿನ ಗಣ್ಯ ಮಾನ್ಯರ ಸಹಕಾರ ಪ್ರೋತ್ಸಾಹ ಎಲ್ಲವನ್ನು ಒಳಗೊಂಡಂತೆ ಎಂ ಎಚ್ ಪೂಜಾರಿ,ಶಿಕ್ಷಕರು HPS ಹಿರೇಮಳಗಾವಿ ಹಾಗೂ ಉಪಾಧ್ಯಕ್ಷರು SC/ST ನೌಕರರ ಸಂಘ ಹುನಗುಂದ ಮತ್ತು ನಿರ್ದೇಶಕರು ಶಿಕ್ಷಕರ ಪತ್ತಿನ ಸಹಕಾರಿ ಸಂಘ ಹುನಗುಂದ ಇವರು ಅತ್ಯಂತ ಸೊಗಸಾಗಿ ಸುಂದರವಾಗಿ ಗೀತೆ ರಚಿಸಿ ಹಾಡಿಸಿ ಮರಡಿ ಬೂದಿಹಾಳ, ಮೂಗನೂರು ಹಾಗೂ ಬಸವನಾಳ ಗ್ರಾಮದವರ ಮೆಚ್ಚುಗೆಗೆ ಪಾತ್ರರಾದರು.

ಭಕ್ತರ ಉಸಿರು ಶ್ರೀ ಮಾರುತೇಶ್ವರ ದೇವರು ಎಂಬ ಭಕ್ತಿಗೀತೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಸಮಸ್ತ ಊರಿನ ಗಣ್ಯ ರಾದ ಶಂಕರಗೌಡ ಗೌಡರ, ಮಲ್ಲನಗೌಡ ಗೌಡರ, ಯಮನಪ್ಪ ಗುರಿಕಾರ, ಮಹಮದ್ ಸಾಬ್ ವಾಲಿಕಾರ್, ರಾಮಣ್ಣ ಒರಕೇರಿ, ಭೀಮಪ್ಪ ಪೂಜಾರಿ, ಅಶೋಕ್ ಅಂಗಡಿ, ಶಿವಲಿಂಗಪ್ಪ ಬೂದಿಹಾಳ, ದುರಗಪ್ಪ ಮಾದರ, ಬಂಗಾರಿಗೌಡ ಪಾಟೀಲ್,ಹನುಮಂತ ಬೈಲಕೋರ, ಚಂದ್ರು ಪೂಜಾರಿ, ಕಾಂತಪ್ಪ ಬೇನಾಳ, ಮಹಾಂತೇಶ ನಾಗರಾಳ ಈ ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಗೀತೆಗೆ ಸಹಾಯ ಸಹಕಾರ ನೀಡಿದವರು ಡಾ. ಗೋಪಾಲ ಎಂ ಒರಕೇರಿ. ಶಿಕ್ಷಕ ಮುತ್ತು ವಡ್ಡರ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group