ಮೂಡಲಗಿ – ಭಾರತ ದೇಶದ ಭವಿಷ್ಯ ಯುವ ಶಕ್ತಿಯ ಮೇಲೆ ಅವಲಂಬಿತವಾಗಿದ್ದು, ಸಮಾಜದಲ್ಲಿರುವ ಪ್ರತಿಯೊಬ್ಬ ಕುಟುಂಬದ ಸದಸ್ಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿದಾಗ ಮಾತ್ರ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠ ವಾಗುವದು ಎಂದು ಬೆಳಗಾವಿ ಲೋಕಸಭಾ ಮಾಜಿ ಸದಸ್ಯೆ ಮಂಗಲಾ ಅಂಗಡಿ ಹೇಳಿದರು.
ಅವರು ತಾಲೂಕಿನ ಗುರ್ಲಾಪೂರ ಗ್ರಾಮದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ೨೦೨೩-೨೪ರಲ್ಲಿ ಸಂಸದರ ಅನುದಾನಲ್ಲಿ ಮಂಜೂರಾಗಿದ್ದ ಕಾಮಗಾರಿಗೆ ಗುದ್ದಲಿ ಪೂಜೆ ನೇರವೆರಿಸಿ ಮಾತನಾಡಿದರು.
ಜಿಲ್ಲಾ ಬಿಜೆಪಿ ಮಹಿಳಾ ಮುಖಂಡರಾದ ಶೃದ್ಧಾ ಸಂಕಲ್ಪ ಶೆಟ್ಟರ ಮಾತನಾಡಿ, ಅರಭಾವಿ ಮತಕ್ಷೇತ್ರದ ಜನತೆ ಲೋಕಸಭಾ ಸದಸ್ಯರ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಪ್ರಕಾಶ ಮಾದರ, ಎಸ್.ಎಸ್.ಮುಗಳಖೋಡ, ಬಿ.ಸಿ.ಮುಗಳಖೋಡ, ಆರ್.ಬಿ.ನೇಮಗೌಡರ, ಸದಾಶಿವ ನೇರಲಿ, ಕೆಂಪಣ್ಣಾ ದೇವರಮನಿ, ದುಂಡಪ್ಪ ಮುಗಳಖೋಡ, ಮಲ್ಲಪ್ಪ ನೇಮಗೌಡರ, ಶಿವಬಸು ಇಟ್ನಾಳ, ರಾಮಣ್ಣ ನೇಮಗೌಡರ, ಬಸವರಾಜ ಗಾಡವಿ, ಶ್ರೀಕಾಂತ ಕೌಜಲಗಿ, ಈಶ್ವರ ಮುರಗೋಡ, ಡಾ.ಮಹೇಶ ಹಳ್ಳೂರ, ಮಹಾಲಿಂಗ ಒಂಟಗೋಡಿ, ಆನಂದ ಮೂಡಲಗಿ ಮತ್ತಿತರರು ಉಪಸ್ಥಿತರಿದ್ದರು.