ಗುರ್ಲಾಪುರ – ಸ್ಥಳೀಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟಿಗೆ ಶ್ರೀ ಬಸವೇಶ್ವರ ದೇವಸ್ಥಾನದ ಜಿರ್ಣೋದ್ಧಾರ ಸಲುವಾಗಿ ಪೂಜ್ಯ ಡಾ|| ವಿರೇಂದ್ರ ಹೆಗಡೆಯವರ ಸಂಸ್ಥೆಯಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ವತಿಯಿಂದ ಜಿಲ್ಲಾ ಕಾರ್ಯನಿರ್ದೇಶಕರಾದ ಶ್ರೀಮತಿ ನಾಗರತ್ನಾ ಹೆಗಡೆಯವರು1 ಲಕ್ಷ ರೂ.ಗಳ ಡಿ.ಡಿ.ಯನ್ನು ಗ್ರಾಮದ ಹಿರಿಯರಿಗೆ ಹಾಗೂ ಮಲ್ಲಿಕಾರ್ಜುನ ಟ್ರಸ್ಟ್ ಕಮೀಟಿಗೆ ಸಲ್ಲಿಸಿದರು.
ನಂತರ ಅವರು ಮಾತನಾಡುತ್ತಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಪ್ರತಿ ಗ್ರಾಮದವರು ಪಡೆಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ.ನಾವು ಕಡು ಬಡವ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗು ಅವರಿಗೆ ಸ್ವಯಂ ಉದ್ಯೋಗ ಮಾಡಲು ನಾವು ಸಹಕಾರ ನಿಡುತ್ತೇವೆ ಯಾವುದೇ ಒಂದು ಕಾರ್ಯಮಾಡಿದರೆ ಅದು ಸಾರ್ವಜನಿಕರಿಗೆ ಉಪಯೋಗವಾಗಬೇಕು ಎಂದರು
ಈ ಸಂದರ್ಭದಲ್ಲಿ ಗುರ್ಲಾಪೂರ ಗ್ರಾಮಸ್ಥರು ಮತ್ತು ಶ್ರೀ ಮಲ್ಲಿಕಾರ್ಜುನ ಟ್ರಸ್ಟ್ ಕಮೀಟಿಯ ಸದಸ್ಯರು ಪೂಜ್ಯರಿಗೆ ಧನ್ಯವಾದ ಸಲ್ಲಿಸಿದರು. ಶ್ರೀಮತಿ ನಾಗರತ್ನಾ ಹೆಗಡೆ ಹಾಗೂ ರಾಜ ನಾಯಕ ಸರ್ ಮೂಡಲಗಿ ತಾಲೂಕಾ ಯೋಜನಾ ಅಧಿಕಾರಿ ಇವರಿಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟಿನ ಪರವಾಗಿ ಅಭಿನಂದಿಸಿ ಇದೇ ರೀತಿ ನಿಮ್ಮ ಸಹಾಯ ಸಹಕಾರ ನಮ್ಮ ಗ್ರಾಮದ ಮೇಲೆ ಸದಾ ಇರಬೇಕು ಎಂದು ಯುವ ಧುರೀಣ ಅಶೋಕ ಗಾಣಿಗೇರ ಕೇಳಿಕೊಂಡರು. ಈ ಕೆಲಸಕ್ಕೆ ನಿಮ್ಮ ಸಿಬ್ಬಂದಿಯವರು ನಮಗೆ ಬಹಳ ಸಹಾಯಮಾಡಿದ್ದಾರೆ ಅವರಿಗೂ ಗ್ರಾಮದ ಪರವಾಗಿ ಅಬಿನಂದನೆ ತಿಳಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಆರ್.ಬಿ. ನೇಮಗೌಡ್ರ, ಶಿವಾನಂದ ಹಿರೇಮಠ, ರುದ್ರಯ ಹಿರೇಮಠ, ಡಿ.ಎಮ್. ಮುಗಳಖೋಡ, ವಿ.ಬಿ.ಮುಗಳಖೋಡ, ಎಮ್.ಎಸ್.ಹಂಚಿನಾಳ, ಕೆ.ಆರ್.ದೇವರಮನಿ, ಪಿ.ಸಿ.ಸುಳ್ಳನ್ನವರ, ಕೆ.ಬಿ.ಕಂಬಾರ, ಪಿ.ಎಮ್.ಹಿರೇಮಠ, ಮಹಾದೇವ ಮರಾಠೆ, ಆಯ್.ವಾಯ್.ಮುಗಳಖೋಡ, ಬಸವರಾಜ ಜಕಾತಿ ಮಲ್ಲೇಶ ಮುಗಳಖೋಡ,ಈರಯ್ಯಾ ಜಡಿ, ಜಯಪ್ರಕಾಶ ಗಾಣಿಗೇರ, ಸತೀಶ ಮರಾಠೆ,ರಾಮಯ್ಯಾ ಪೂಜೇರಿ, ಎಮ್.ಬಿ.ಜಕಾತಿ, ಶೈಲಾ ಹಿರೇಮಠ, ಸಂಗೀತಾ ಬಂಗೆನ್ನವರ ಹಾಗು ಗ್ರಾಮಸ್ಥರು ಮತ್ತು ಶ್ರೀ ಮಲ್ಲೀಕಾರ್ಜುನ ದೇವಸ್ಥಾನ ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.