spot_img
spot_img

ಧರ್ಮಟ್ಟಿ – ಮಲೇರಿಯಾ ವಿರೋಧಿ ದಿನ ಆಚರಣೆ

Must Read

ಮೂಡಲಗಿ: ‘ಪರಿಸರವನ್ನು ಎಷ್ಟು ಸ್ವಚ್ಚವಾಗಿ ಇಟ್ಟು ಕೊಳ್ಳುತ್ತವೇಯೋ ಅಷ್ಟು ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಕಸ ಕಡ್ಡಿ ಚರಂಡಿ ನೀರು, ನಮ್ಮ ಮುತ್ತಲಿನ ವಾತಾವರಣ ಮಲಿನವಾದಷ್ಟು ನಾವು ರೋಗದ ಗೂಡಾಗುತ್ತೇವೆ ಎಂದು ಮುಸಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಪನ್ಮೂಲ ವ್ಯಕ್ತಿ ಆರೋಗ್ಯ ನಿರೀಕ್ಷಣಾಧಿಕಾರಿ ರಾಮಚಂದ್ರ ಸಣ್ಣಕ್ಕಿ ಹೇಳಿದರು,

ತಾಲೂಕಿನ ಮುಸಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಇಂದು ಗುರುವಾರ ಆಯೋಜಿಸಲಾಗಿದ್ಧ ಮಲೇರಿಯಾ ವಿರೋಧಿ ಮಾಸಾಚರಣೆ ನಿಮಿತ್ತ ಧರ್ಮಟ್ಟಿ ಗ್ರಾಮದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು,

ವಿದ್ಯಾರ್ಥಿಗಳು ಸಾಮಾಜಿಕ ಪರಿಸರದ ಕಾಳಜಿ ವಹಿಸಿ ಮನೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿ ಇಟ್ಟುಕೊಳ್ಳಲು ಪಾಲಕರಿಗೆ ಹಾಗೂ ತಮ್ಮ ಮನೆಯ ಹತ್ತಿರ ಇರುವ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು ಎಂದರು.

ಧರ್ಮಟ್ಟಿ ವಿದ್ಯಾಲಯದ ಸಂಘ ಕಾಲೇಜು ಪ್ರಾಚಾರ್ಯ ಎಸ್ ಎಸ್ ಚಿಪ್ಪಲಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎನ್ ಕುಂಬಾರ, ಟಿ ಹನಕುಪ್ಪಿ, ಆಶಾ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ಆರೋಗ್ಯ ನಿರೀಕ್ಷಣಾಧಿಕಾರಿ ಡಿ ಕೆ ಪತ್ತಾರ ಸ್ವಾಗತಿಸಿದರು, ಸಿದ್ದಾರ್ಥ ಹೊಸಮನಿ ವಂದಿಸಿದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!