spot_img
spot_img

ಹಾಸನ ನಗರ ಘಟಕ ಅಧ್ಯಕ್ಷ ರಾಗಿ ದಿಬ್ಬೂರು ರಮೇಶ ಆಯ್ಕೆ

Must Read

spot_img
- Advertisement -

ಕನಾ೯ಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಹಾಸನ ಜಿಲ್ಲಾ ಘಟಕದ ಹಾಸನ ನಗರ ಅಧ್ಯಕ್ಷ ರಾಗಿ ದಿಬ್ಬೂರು ರಮೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಹಾಸನ ಜಿಲ್ಲಾಧ್ಯಕ್ಷರು ಸುಂದರೇಶ್ ಡಿ ಉಡುವೇರೆ ತಿಳಿಸಿದ್ದಾರೆ.

ದಿಬ್ಬೂರು ರಮೇಶ ಅವರು ಅರಸೀಕೆರೆ ತಾಲ್ಲೂಕು, ದಿಬ್ಬೂರು ಗ್ರಾಮದಲ್ಲಿ 1976 ರಲ್ಲಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು, ಕನ್ನಡ ವಿಷಯದಲ್ಲಿ ಎಂಎ ಬಿಎಡ್ ಪದವೀಧರರಾಗಿದ್ದಾರೆ. ಕಳೆದ 15 ವರ್ಷಗಳಿಂದ ಹಾಸನ ನಗರದಲ್ಲಿ ವಾಸಿಸುತ್ತಿರುವ ಇವರು, ಕಲೆ, ಸಾಹಿತ್ಯ ಹಾಗೂ ರಂಗಭೂಮಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಇವರು ರಚಿಸಿರುವ “ಖಡ್ಗ ಸಮಾಧಿ” ಎಂಬ ನಾಟಕವು 2013ರಲ್ಲಿ ಅಲಹಾಬಾದ್ ನಲ್ಲಿ ನಡೆದ ಬಹುಭಾಷಾ ನಾಟಕ ಸ್ಪರ್ಧೆಯಲ್ಲಿ ಉತ್ತಮ ಪ್ರಾದೇಶಿಕ ನಾಟಕ ಎಂಬ ರಾಷ್ಟ್ರೀಯ ಪುರಸ್ಕಾರವನ್ನು ಗಳಿಸಿದೆ. 2022ರಲ್ಲಿ “ಸಾಕಜ್ಜಿ ಮತ್ತು ನಾಯಿ” ಎಂಬ ಕಥಾ ಸಂಕಲನವನ್ನು ಬಿಡುಗಡೆ ಮಾಡಿದ್ದಾರೆ. “ಮನೋಧರ್ಮ ಮತ್ತು ವೈಚಾರಿಕ ಪ್ರಜ್ಞೆ” ” ಆತ್ಮಗತ” “ಇವನಾರವ” ಎಂಬ ಕೃತಿಗಳು ಮುದ್ರಣ ಹಂತದಲ್ಲಿವೆ. ವಚನ ಸಾಹಿತ್ಯದ ಕೃಷಿಯಲ್ಲೂ ತೊಡಗಿಕೊಂಡಿರುವ ದಿಬ್ಬೂರು ರಮೇಶ ರವರು, ಸುಗಮ ಸಂಗೀತ, ವಚನಗಾಯನ, ಲಘು ಸಂಗೀತ, ರಂಗಗೀತೆ, ಜಾನಪದ ಗೀತೆ ಹೀಗೆ ಅನೇಕ ಪ್ರಕಾರಗಳಲ್ಲಿ ಇದುವರೆಗೂ ಸುಮಾರು ಏಳುನೂರು ವೇದಿಕೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ 2022 ರಲ್ಲಿ ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಹಾಗೂ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ.

ಇವರ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸೇವೆಯು ಸಮಾಜಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿ
ಎಂದು ಕನಾ೯ಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ರಾಜ್ಯಾಧಕ್ಷರು ಮಧು ನಾಯಕ ಲಂಬಾಣಿ, ಗೌರವ
ಅಧ್ಯಕ್ಷರು, ಸಾಹಿತಿ ಗೊರೂರು ಅನಂತರಾಜು ಶುಭ ಹಾರೈಸಿದ್ದಾರೆ.

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group