ಡಿ ಕೆ ಸಿದ್ದರಾಮ ವರ್ಸಸ್ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಹಾಯುದ್ಧ
ಬೀದರ – ಕಳೆದ ಚುನಾವಣೆಯಲ್ಲಿ ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆಯವರು ಬಡವರಿಗೆ ಮನೆ ನೀಡುವುದಾಗಿ ಜನರನ್ನು ಮನೆಗೆ ಕರೆಸಿ ರೂ.೧.೮೦ ಲಕ್ಷದ ಸುಳ್ಳು ಮನೆ ಪತ್ರ ನೀಡಿ ವಂಚನೆ ಮಾಡಿದ್ದಾರೆ ಎಂಬುದಾಗಿ ಬಿಜೆಪಿ ನಾಯಕ ಡಿಕೆ ಸಿದ್ಧರಾಮ ಗಂಭೀರ ಆರೋಪ ಮಾಡಿದ್ದಾರೆ.
ಇದರಿಂದ ಗಡಿ ಜಿಲ್ಲೆ ಬೀದರ್ ನಲ್ಲಿ ಮತ್ತೆ ಬಿಜೆಪಿ ಪಕ್ಷದ ನಾಯಕ ಡಿ ಕೆ ಸಿದ್ದರಾಮ ಮತ್ತು ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಡುವೆ ವಸತಿ ಹಗರಣದ ಯುದ್ಧ ಪ್ರಾರಂಭವಾಗಿದ್ದು ಶುಕ್ರವಾರ ಭಾಲ್ಕಿ ಪಟ್ಟಣದಲ್ಲಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಯಾರ್ಲಿ ಹಮ್ಮಿಕೊಳ್ಳಲಾಗಿದೆ.
ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತು ಅವರ ಧರ್ಮ ಪತ್ನಿ ಇಬ್ಬರೂ ವಸತಿ ಮನೆಗಳನ್ನು ಬಡವರಿಗೆ ಕೊಡದೆ ಶ್ರೀಮಂತ ವರ್ಗದವರಿಗೆ ಮನೆ ಹಂಚಿಕೆ ಮಾಡಿದ್ದಾರೆ ಎಂದು ಖಂಡ್ರೆ ಮತ್ತು ಅವರ ಪತ್ನಿಯ ವಿರುದ್ಧ ಭಾಲ್ಕಿ ಪಟ್ಟಣದಲ್ಲಿ ಡಿ ಕೆ ಸಿದ್ದರಾಮ ಮತ್ತು ಪ್ರಕಾಶ್ ಖಂಡ್ರೆ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಡಿ ಕೆ ಸಿದ್ದರಾಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಈಶ್ವರ ಖಂಡ್ರೆ ಅವರ ವಿರುದ್ಧ ಬ್ಯಾನರ್ ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.
ಬಡವರಿಗೆ ಮೋಸ ಮಾಡಿರುವ ಈಶ್ವರ ಖಂಡ್ರೆಗೆ ಧಿಕ್ಕಾರ ಧಿಕ್ಕಾರ:
ಬಡವರ ಮನೆ ಕಸಿದುಕೊಂಡ ಈಶ್ವರ ಖಂಡ್ರೆಗೆ ಧಿಕ್ಕಾರ ಧಿಕ್ಕಾರ
Vote politics ಮಾಡುತ್ತಿರುವ ಈಶ್ವರ ಖಂಡ್ರೆಗೆ ಧಿಕ್ಕಾರ ಧಿಕ್ಕಾರ ಎಂದು ಬ್ಯಾನರ್ ಮಾಡಿ ಫೇಸ್ ಬುಕ್ ನಲ್ಲಿ ಬಿಡುಗಡೆ ಮಾಡಿದ ಬಿಜೆಪಿ ನಾಯಕರು.
ಮುಂಬರುವ ವಿಧಾನ ಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕರು ಭಾಲ್ಕಿ ಕ್ಷೇತ್ರದಲ್ಲಿ ಈ ಸಲ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಸೋಲಿಸಲು ರಣತಂತ್ರ ಹೆಣೆದಿದ್ದು, ಡಿ ಕೆ ಸಿದ್ದರಾಮ ಮತ್ತು ಪ್ರಕಾಶ್ ಖಂಡ್ರೆ ಇಬ್ಬರೂ ಬಿಜೆಪಿ ಟಿಕೆಟ್ ಆಕಾಂಕ್ಷೆ ಹೊಂದಿದ್ದು ಇಬ್ಬರಲ್ಲಿ ಯಾರೊಬ್ಬರಿಗೆ ಟಿಕೆಟ್ ಸಿಕ್ಕಿದರೆ ಇಬ್ಬರು ಒಟ್ಟಿಗೆ ಸೇರಿ ಈಶ್ವರ ಖಂಡ್ರೆಯವರನ್ನು ಸೋಲಿಸಲು ಅವರ ವಿರುದ್ಧ ಭಾಲ್ಕಿ ಪಟ್ಟಣದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆನ್ನಲಾಗಿದೆ.
ಇದನ್ನೆಲ್ಲ ನೋಡಿದರೆ ಮುಂಬರುವ ಚುನಾವಣೆಯಲ್ಲಿ ಉಭಯ ಪಕ್ಷಗಳ ನಾಯಕರಲ್ಲಿ ಹಣಾಹಣಿ ಮುಗಿಲು ಮುಟ್ಟಲಿದ್ದು ಮತದಾರರು ಕೂಡ ಯಾರಿಗೆ ಮತ ಹಾಕಬೇಕೆಂಬ ಬಗ್ಗೆ ಗೊಂದಲಕ್ಕೆ ಬೀಳುವುದು ಖಚಿತ ಎಂಬ ವಾತಾವರಣ ಇದೆ. ಇಂಥ ಪರಿಸ್ಥತಿಯಲ್ಲಿಯೇ ಭಾಲ್ಕಿ ಕ್ಷೇತ್ರ ಮತದಾರರು ಚುನಾವಣೆಯಲ್ಲಿ ಯಾರ ಕೊರಳಿಗೆ ವಿಜಯದ ಹೂವಿನ ಹಾರ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ