ಸಿಂದಗಿ: ವಿಶ್ವ ಹಿಂದೂ ಪರಿಷತ್ ಸಿಂದಗಿ ವತಿಯಿಂದ ಪಟ್ಟಣದ ಮಾಂಗಲ್ಯ ಭವನದಲ್ಲಿ ದೀಪ ಲಕ್ಷ್ಮಿ ಕಾರ್ಯಕ್ರಮ ಜರುಗಿತು.
ದೀಪ ಲಕ್ಷ್ಮಿ ಕಾರ್ಯಕ್ರಮದಲ್ಲಿ ೫೦೦ ಕ್ಕಿಂತ ಹೆಚ್ಚು ಮಾತೆಯರು ಭಾಗವಹಿಸಿದರು ಈ ಪೂಜೆ ಕಾರ್ಯಕ್ರಮದ ನೇತೃತ್ವವನ್ನು ಮಾಡಬಾಳದ ಸಂಗಮನಾಥ ಗುರುಗಳು ವಹಿಸಿ ಸೇರಿದ್ದ ಎಲ್ಲಾ ಮಾತೆಯರಿಂದ ಪೂಜೆ ಮಾಡಿಸಿದರು.
ಈ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ವಿಶ್ವ ಹಿಂದೂ ಪರಿಷತ್ತಿನ ಕ್ಷತ್ರಿಯ ಧರ್ಮಾಚಾರಿ ಪ್ರಮುಖ ಬಸವರಾಜ ಜೀ ಆಗಮಿಸಿ ಮಾತನಾಡುತ್ತ, ಇವತ್ತು ಭಾರತ ದೇಶ ಜಗತ್ತಿನಲ್ಲಿಯೇ ಶಕ್ತಿಶಾಲಿ ದೇಶವಾಗಿ ಬೆಳೆಯುತ್ತಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ನಮ್ಮ ಧರ್ಮ ಉಳಿಯಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಿ ಧರ್ಮ ರಕ್ಷಣೆ ಮಾಡೋಣ ಇವತ್ತು ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್ ಗೆ ಒಳಗಾಗುವದನ್ನು ತಡೆಯೋಣ ಮತಾಂತರಕ್ಕೆ ಒಳಗಾಗೋದನ್ನು ತಡೆಯೋಣ ಅಲ್ಲದೆ ಪ್ರತಿ ವರ್ಷ ೬೦ ಸಾವಿರ ಕ್ಕಿಂತ ಹೆಚ್ಚು ಹಿಂದೂ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದು ಇಡೀ ಹಿಂದೂ ಸಮಾಜಕ್ಕೆ ಅವಮಾನ ಇದನ್ನರಿತು ನಮ್ಮ ನಮ್ಮ ಮನೆಯಲ್ಲಿಯೇ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕು ಹಾಗೆ ತಂದೆ ತಾಯಿಯರು ನಿಮ್ಮ ನಿಮ್ಮ ಮಕ್ಕಳ ಬಗ್ಗೆ ಗಮನ ಹರಿಸಿ ಮೋಸದ ಮತಾಂತರ ಲವ್ ಜಿಹಾದ್ ತಡೆಯಲು ನೀವೆಲ್ಲ ಸಿದ್ದರಾಗಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಂದಗಿ ಪಟ್ಟಣದ ಖ್ಯಾತ ವೈದ್ಯರಾದ ಶ್ರೀಮತಿ ಶಾರದಾ ನಾಡಗೌಡರು, ನಮ್ಮೆಲ್ಲರ ಅಕ್ಕ ತಂಗಿಯರು ತಾಯಂದಿರು ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುವದರಿಂದ ನಮ್ಮ ಸಂಸ್ಕಾರ ಸಂಸ್ಕೃತಿ ಉಳಿಯುವುದು ಖಂಡಿತ ಇಂತಹ ಕಾರ್ಯಕ್ರಮಗಳನ್ನು ವಿಶ್ವ ಹಿಂದೂ ಪರಿಷತ್ ವತಿಯಿಂದ ಹಮ್ಮಿಕೊಂಡಿರುವುದು ಬಹಳ ಸಂತೋಷ ಹಾಗೆ ಮೇಲಿಂದ ಮೇಲೆ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಹೆಚ್ಚು ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ಉತ್ತರ ಪ್ರಾಂತ ಮಹಿಳಾ ಪ್ರಮುಖರಾದ ಮಾಯಕ್ಕಾ ಚೌದ್ರಿ ಅವರು ಮಾತನಾಡಿ, ನೀವೆಲ್ಲ ವಾರಕ್ಕೊಮ್ಮೆ ಮಾತೆಯರೆಲ್ಲ ಸೇರಿ ಕಡ್ಡಾಯವಾಗಿ ಸತ್ಸಂಗ ನಡೆಸಬೇಕು ಹಾಗೆ ತಾಲೂಕಿನಲ್ಲಿ ವಿಶ್ವ ಹಿಂದೂ ಪರಿಷತ್ ನಿಂದ ಹೆಚ್ಚು ಹೆಚ್ಚು ಸೇವಾ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನುಡಿದ ಪೂಜ್ಯರಾದ ಬೋರಗಿಯ ಮಹಾಲಿಂಗೇಶ್ವರ ಮಹಾ ಸ್ವಾಮಿಗಳು ಮಾತನಾಡಿ, ಇಂತಹ ಧರ್ಮದ ಕಾರ್ಯದಲ್ಲಿ ಇಷ್ಟು ಸಂಖ್ಯೆಯ ತಾಯಂದಿರು ಭಾಗವಹಿಸಿದ್ದನ್ನು ಕಂಡು ಸಂತೋಷವಾಯಿತು ಸಿಂದಗಿ ತಾಲೂಕಿನಲ್ಲಿ ವಿಶ್ವ ಹಿಂದೂ ಪರಿಷತ್ ಒಳ್ಳೆ ಒಳ್ಳೆಯ ಕಾರ್ಯ ಮಾಡುತ್ತಿದೆ ಹಾಗೆ ನಮ್ಮ ಮುಂದಿನ ಪೀಳಿಗೆಗಳಿಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರೇರಣೆ ಬರುವಂತಹ ಶಕ್ತಿ ಆ ದೇವರು ಕೊಡಲಿ ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಇನ್ನೊರ್ವ ಪೂಜ್ಯರಾದ ಆಲಮೇಲದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ಇಂತಹ ದೊಡ್ಡ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಮಾಡಿದ್ದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ತಾಯಂದಿರು ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುವದರಿಂದ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿ ಉಳಿಯಲು ಸಾಧ್ಯ ಪಾಶ್ಚಾತ್ಯ ಸಂಸ್ಕೃತಿಯನ್ನು ಬಹಿಷ್ಕರಿಸಿ ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸೋಣ ಎಂದರು.
ಸಾನ್ನಿಧ್ಯ ವಹಿಸಿದ ಇನ್ನೊರ್ವ ಪೂಜ್ಯರಾದ ಯಂಕಂಚಿಯ ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡುತ್ತ, ಸಿಂದಗಿ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವದರಿಂದ ಇವತ್ತು ನಮ್ಮ ತಾಯಂದಿರಲ್ಲಿ ಹಾಗೂ ಅಕ್ಕ ತಂಗಿಯರಲ್ಲಿ ಹೆಚ್ಚಿನ ಧರ್ಮದ ಮನೋಭಾವನೆ ಮೂಡುತ್ತದೆ ಧರ್ಮ ರಕ್ಷಣೆಗಾಗಿ ತಾಯಂದಿರು ಮುಂದೆ ಬರುವುದು ಅವಶ್ಯಕತೆ ಇದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕನ್ನೊಳ್ಳಿಯ ಪೂಜ್ಯರು ಕೂಡ ಸಾನ್ನಿಧ್ಯ ವಹಿಸಿದ್ದರು ಹಾಗೂ ಈ ಕಾರ್ಯಕ್ರಮದ ರೂವಾರಿಗಳು ಮತ್ತು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಶೇಖರಗೌಡ ಹರನಾಳ, ತಾಲೂಕ ಮಹಿಳಾ ಪ್ರಮುಖರಾದ ಶ್ರೀಮತಿ ಭೋರಮ್ಮ ಕರ್ಪುರಮಠ, ವಿಭಾಗ ಪ್ರಮುಖರಾದ ಶ್ರೀಮಂತ ದುದ್ದಗಿ ಜಿಲ್ಲಾ ಅಧ್ಯಕ್ಷರಾದ ಸಿದ್ದು ಹೂಗಾರ, ತಾಲೂಕ ಅಧ್ಯಕ್ಷರಾದ ಶರಣಗೌಡ ಬಿರಾದಾರ, ಹನುಮಗೌಡ ಹಚ್ಯಾಳ, ಶ್ರೀಮತಿ ಸುನೀತಾ ತೇಲಿ, ಅರುಣಾ ಹಿರೇಮಠ, ನೀಲಮ್ಮ, ಭೋರಮ್ಮ ಭಗಲಿ, ಮಾದೇವಿ ಹಡಪದ , ಸುಜಾತಾ ಸುರಗಿಹಳ್ಳಿ, ನಿಖಿಲ ಬಿರಾದಾರ, ಪ್ರಶಾಂತ ಭಗಲಿ, ಶಿವರಾಜ ಗುತ್ತರಗಿ, ಶ್ರೀಧರ ಭಜಂತ್ರಿ, ಮಹೇಶ ಉಪ್ಪಾರ, ಸಿದ್ದು ಯಂಕಂಚಿ, ಭಾಗಣ್ಣ ಹೂಗಾರ, ಭಾಗಿಯಾಗಿದ್ದರು. ಪ್ರಿಯಾಂಕಾ ಹಿರೇಮಠ, ಭಾಗ್ಯಾ ಭಗಲಿ ಈ ಕಾರ್ಯಕ್ರಮದ ನಿರೂಪಣೆ ಮಾಡಿದರು.