- Advertisement -
ಕೋಲ್ಕತ್ತಾ – ಇಲ್ಲಿನ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಆ.೯ ರಂದು ನಡೆದ ವೈದ್ಯ ವಿದ್ಯಾರ್ಥಿನಿಯ ಭೀಕರ ಹತ್ಯಾಚಾರದ ತನಿಖೆಯ ಜೊತೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ವು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಘೋಷ್ ಕಾಲಾವಧಿಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರದ ಕುರಿತಂತೆಯೂ ತನಿಖೆ ಕೈಗೆತ್ತಿಕೊಂಡಿದೆ.
ದಿ. ೨೪ ರಂದು ಕೋಲ್ಕತ್ತಾ ಹೈಕೋರ್ಟ್ ಈ ಬಗ್ಗೆ ಸಿಬಿಐಗೆ ನಿರ್ದೇಶನ ನೀಡಿದ್ದು ಈ ಮೊದಲು ಇದ್ದ ಎಸ್ಐಟಿ ಯಿಂದ ಪ್ರಕರಣವನ್ನು ವಾಪಸ್ ಪಡೆದು ಸಿಬಿಐಗೆ ಹಸ್ತಾಂತರಿಸಿದೆ.
ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಉಪ ಅಧೀಕ್ಷಕ ಅಖ್ತರ ಅಲಿಯವರ ರಿಟ್ ಅರ್ಜಿಯ ಆಧಾರದ ಮೇಲೆ ಹೈಕೋರ್ಟು ನಿರ್ದೇಶನ ನೀಡಿದೆ ಅಲ್ಲದೆ ಹಣಕಾಸು ಅವ್ಯವಹಾರದ ತನಿಖೆಯನ್ನು ಮೂರು ವಾರಗಳಲ್ಲಿ ಮುಗಿಸಲು ಕೂಡ ಸಿಬಿಐಗೆ ಸೂಚಿಸಿದೆ. ಈ ಬಗ್ಗೆ ಮುಂದಿನ ವಿಚಾರಣೆಯನ್ನು ಸೆ. ೧೭ ಕ್ಕೆ ನಿಗದಿ ಮಾಡಲಾಗಿದೆ.
- Advertisement -