spot_img
spot_img

ವೈಚಾರಿಕ ಲೇಖನ: ಒಮ್ಮೆ ತಿರುಗಿ ನೋಡ

Must Read

- Advertisement -

ಒಮ್ಮೆ ತಿರುಗಿ ನೋಡ

ತಿರುಗಿ ನೋಡಿದರೆ ತಿರುಕನು ಖುಷಿ ಪಡುವ ಈ ಕಾಲದಲ್ಲಿ, ಕಾಲೇಜಿನಲಿ ಪಡ್ಡೆ ಹುಡುಗರಿಗೆ ಚಂದನದ ಚಲುವೆ ತಿರುಗಿ ನೋಡಿದಳೆಂದರೆ ಜೀವನವೆ ಪಾವನರಾದವರಂತೆ, ಅವಳ ನೋಟದ ಊಟದಲ್ಲೇ ಹಗಲು ರಾತ್ರಿ ಕಳೆಯುತ್ತಾರೆ ,ಈ ತಿರುಗಿ ನೋಡುವಿಕೆಯಲ್ಲಿಯೇ ಇಡಿ ಜೀವನವೆ ಕಳೆಯುತ್ತಾರೆ ,ತಿರುಗಿ ನೋಡೊದರಿಂದಾನೆ ಮುಂದಿನ ಜೀವನ ಇಷ್ಟೋಂದು ಸುಖವಿದೆಯಂದಾದರೆ, ಜೀವನದಲ್ಲಿ ನಾವು ನಡೆದು ಬಂದ ದಾರಿಯನ್ನೇಕೆ ?ತಿರುಗಿ ನೋಡಿ ಬದುಕಬಾರದು.

ಜೀವನದಲ್ಲಿ ನೊಂದಿದ್ದೇವೆ,ಬೆಂದಿದ್ದೇವೆ,ಬರಿ ನೋವು ಅಪಮಾನ, ಅವಮಾನ,ನಿಂದನೆ,ವೇದನೆ,ಜೀವನದುದ್ದಕ್ಕೂ ಅನುಭವಿಸಿದ್ದೇನೆ ,ಎಂದು ಬಾಯಿಮಾತಿನಲಿ ವೇದಾಂತಿಯಂತೆ ಹೇಳಿ, ಅನುಭವಿಕ, ಅಯ್ಯೋಪಾಪ ಕಷ್ಟಜೀವಿ ಎನಿಸಿಕೊಂಡು ಕರುಣೆಗಿಟ್ಟಿಸಿಕೊಳ್ಳುವುದಕ್ಕಿಂತ .ಜೀವನದುದ್ದದ ನಮ್ಮ ನಡೆ,ನುಡಿ,ಹೊಂದಾಣಿಕೆ,ವರ್ತನೆ ಪರಿವರ್ತನೆ ಕಾಯದ ನಿಷ್ಟತೆ,ಬಧ್ಧತೆ ಇವುಗಳನೋಮ್ಮೆ ತಿರುಗಿನೋಡಿದಾಗ ನಮ್ಮ ಕಷ್ಟಗಳಿಗೆ, ನೋವುಗಳಿಗೆ ಕಾರಣ ಯಾರು? ಎಂಬುದು ಗೊತ್ತಾಗುತ್ತದೆ,ನನಗೂ ಸ್ವಾತಂತ್ರವಿದೆ ,ನಾನು ದುಡಿಯುವವನು, ಎಂದು ಪರಧಿಯ ಮೀರಿ ಪರರ ಹಾಗೆ ಬದುಕುವೇನೆಂದರೆ, ಬದುಕು ಏನಾಗಬೇಡ,ಎಷ್ಟೇ ಜಾಣರಾದರು,ಎಷ್ಟೇ ದುಡಿದರು ನಾವು ಹೋದ ಹೆಜ್ಜೆ ನಮಗೆ ಕಾಣುವುದಿಲ್ಲ ಅವು ಸಮಾಜಕ್ಕೆ ಕಾಣುತ್ತವೆ.ಯಾಕಂದರೆ ನಾವು ಸಮಾಜ ಬಿಟ್ಟು ಬದುಕುವುದಿಲ್ಲ ಸಮಾಜದ ಮಧ್ಯವೇ ಬದುಕಬೇಕಾಗಿದೆ ,ಹಿಂದೆ ನುಡಿಯುವವನ ನುಡಿ ನಮಗೆ ಕೇಳುವುದಿಲ್ಲಇವನ್ನೇಲ್ಲ ನೋಡುವವರು, ತಿದ್ದುವವರು ಸದಾ ನಿಮ್ಮ ಏಳ್ಗೆಯ ಬಯಸುವವರು, ನಿಮಗಾಗಿ ಪ್ರತಿದಿನವೂ, ದೇವರಿಗೆ ಬೇಡುವವರು ಇರುವುದರಿಂದಲೆ ನಿಮ್ಮಗಳಿಗೆ ಬಂದ ಕಷ್ಟಗಳು ,ರಾತ್ರಿ ಬಂದನೋವು ಮುಂಜಾನೆ ಇರುವುದಿಲ್ಲ, ಮುಂಜಾನೆ ಬಂದ ಕಷ್ಟ ಮಂಜಿನಂಗೆ ಕರಗಿಹೋಗುವುದು. ತಂದೆ,ತಾಯಿ,ಒಬ್ಬ ಗುರು ಯಾವ ಸ್ವಾರ್ಥವಿಲ್ಲದೆ ನಿಮ್ಮಗಳ ಏಳ್ಗೆಗೆ ಪ್ರತಿನಿಮೀಷವೂ ನಿಮ್ಮಗಳ ಯಶಸ್ಸು ಏಳ್ಗೆಯ ಬಗ್ಗೆ ಪರಿಶ್ರಮ ಪಡುತ್ತಿರುತ್ತಾರೆ,ಬೇಡಿದರು ಕೂಡಾ ವರ ನೀಡದ ಈ ಕಾಲದಲ್ಲಿ ಬೇಡದೇನೆ ನಿಮ್ಮ ಕಷ್ಟ ನೋವುಗಳಿಗೆ ಸ್ಪಂದಿಸುವ ಜೀವಗಳು ಅವು.

ನಮ್ಮ ಜೀವನದ ಹಾದಿಗೆ ಹೂವಾಗುವ ಪರಿ ತೋರೆಯದೆ ನಮ್ಮ ಜೀವನದ ಹಿಂದಿನ ನೋವುಗಳನ್ನೋಮ್ಮೆ ತಿರುಗಿ ನೋಡಿ ಮುಂದುವರೆದರೆ ಜೀವನ ಸುಖದ ಸುಪ್ಪತ್ತಿಗೆಯಾಗುತ್ತದೆ. ಇಂದಿನ ನಮ್ಮಗಳ ಸ್ಥಿತಿಗೆ ಕಾರಣರಾದವರನ್ನು ಮತಿಗೇಡಿಗಳನ್ನಾಗಿ ಮಾಡದೆ,ಆಗದವರ ಹಿತಕ್ಕೆ ಅರಳು ಮರುಳಾಗದೆ ಒಮ್ಮೇ ವಿವೇಕತನದಿ ವಿಚಾರಿಸಿ ನಡೆಯುವ ನುಡಿ,ನಡೆ,ಸರಿಇದೇಯಾ, ಅವರು ಯಾರು ಯಾಕೆ? ನನಗೆ ಖಾರವಾಗಿ ಹೇಳುತ್ತಾರೆ,ಖಾರದಲ್ಲಿಯೂ ಸಾರವಿದೆಯಾ ,ಎಂದು ತಿಳಿಯಬೇಕಾದರೆ ಒಮ್ಮೆ ತಿರುಗಿ ನೋಡಿ.

- Advertisement -

ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಶಿಕ್ಷಕರು ಕೊಪ್ಪಳ .

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group