spot_img
spot_img

ಪಟಾಕಿಗಳ ಸದ್ದು ಗದ್ದಲದ ನಡುವೆ “ಏಕ ಪರಮಾತ್ಮ”ನ ಅರಿವಿನ ಪ್ರವಚನ

Must Read

spot_img
- Advertisement -

ಹೊನ್ನಾಳಿ: ನವೆಂಬರ್ ೨ ರಿಂದ ೩೦ರವರೆಗೆ ನಡೆಯುತ್ತಿರುವ “ಶರಣರು ಕಂಡ ಶಿವ” ಪ್ರವಚನವನ್ನು ಹುಬ್ಬಳ್ಳಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ೮೫ ವರ್ಷದ ಆಜನ್ಮ ಬ್ರಹ್ಮಚಾರಿ, ರಾಜಋಷಿ ಡಾ. ಬಿ ಕೆ ಬಸವರಾಜ ಅಣ್ಣನವರು  ಹೊನ್ನಾಳಿ ಜನತೆಗೆ ಉಣ ಬಡಿಸುತ್ತಿದ್ದಾರೆ.

ಇಂದು ಕೂಡ ದೀಪಾವಳಿ ಬಲಿ ಪಾಡ್ಯಮಿ ದಿನ ಅಂದರೆ ಪ್ರವಚನದ ೧೩ನೆಯ ದಿನದ ಪ್ರವಚನ ನಡೆದಿತ್ತು. ದೀಪಾವಳಿ ಹಬ್ಬ ದೀಪಗಳ, ಬೆಳಕಿನ ಹಬ್ಬ. ಜೊತೆಗೆ ಪಟಾಕಿ ಸಿಡಿಮದ್ದುಗಳ ಗದ್ದಲ ತಪ್ಪಿದ್ದಲ್ಲ. ಇತ್ತೀಚೆಗೆ ಪಟಾಕಿ ಗೋದಾಮಿಗೆ ಬೆಂಕಿ ಬಿದ್ದು, ಅವೆಷ್ಟೋ ಪ್ರಾಣ ಕಳೆದುಕೊಂಡ, ನಷ್ಟ ಅನುಭವಿಸಿದ ದುರಂತಗಳು ಕಣ್ಣೆದುರು ಇದ್ದರೂ ಸಹ ಜನರು ಪಟಾಕಿ ಸಿಡಿಸಿ ಕ್ಷಣಿಕ ಸುಖ ಕಾಣಲು ಮುಂದಾಗಿದ್ದಾರೆ. ಆಂತಹ ಸದ್ದು ಗದ್ದಲದ ನಡುವೆ ಹೊನ್ನಾಳಿಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ವೇದಿಕೆಯೊಂದರಲ್ಲಿ ಎಂಬತ್ತೈದರ ಹರೆಯದ ಅನುಭವ ಮತ್ತು ಅನುಭಾವದ ರಾಜಋಷಿ ಬಸವರಾಜ ಅಣ್ಣ ಅವರಿಂದ ಪ್ರವಚನದ ಮಾತುಗಳು ವೇದಿಕೆಯಿಂದ ಮುಂದೆ ಕುಳಿತಿರುವ ಸಹಸ್ರಾರು ಜನರ ಕಿವಿಗಳನ್ನು ತಾಗುತ್ತಿದ್ದರೆ ಇತ್ತ ಸುತ್ತಕಡೆಯಿಂದ ಪಟಾರ್, ಡಂ ಡುಂ ಸದ್ದು ಮುಗಿಲೆತ್ತರದ ಹೊಗೆಯೊಂದಿಗೆ ಹಾರಿತ್ತು .  ಅಣ್ಣಾ ಅವರ ಪ್ರವಚನದ ಪರಮಾತ್ಮನ ಜ್ಞಾನದ ಅಮೃತ ನುಡಿಗಳು ನೆರೆದಿದ್ದ ಶ್ರೋತೃಗಳ ಆತ್ಮದ ಬುದ್ಧಿಮತ್ತೆಗೆ ಸೇರಲು ಪಟಾಕಿಗಳ ಶಬ್ದ ಕೊಂಚ ತೊಂದರೆ ಕೊಡುತ್ತಿತ್ತು.

ಪಟಾಕಿ ಸಿದಿಮದ್ದುಗಳ ಸದ್ದು ಗದ್ದಲದ ನಡುವೆ “ಏಕ ಪರಮಾತ್ಮ”ನ ಅರಿವಿನ ಪ್ರವಚನ ನಡೆದಿತ್ತು. ಆ ಪ್ರವಚನದ ಆ ದಿನದ ಸಾರ ನನ್ನೀ ಲೇಖನಿಯಲ್ಲಿ ನಿಮಗಾಗಿ.

- Advertisement -

ನಾನು ಆತ್ಮ, ನನ್ನ ತಂದೆ ಪರಮಾತ್ಮ, ನಮ್ಮ ದೇಹದಲ್ಲಿ ಆತ್ಮ ಜ್ಯೋತಿ ಇದೆ. ನಾವು ಪರಮಾನನ್ನು ಕಾಣಬೇಕು, ಸದ್ವಿಚಾರ ಸದ್ವರ್ತನೆ, ಸದಾಚಾರದ ಮೂಲಕ ಜೀವನ ಸಾಗಿಸಬೇಕು ಎನ್ನುತ್ತಾ, ಶರಣರು ಕಂಡ ಶಿವ ಪ್ರವಚನದಲ್ಲಿ ಇಂದು ನಮಗೆ ರಾಜಋಷಿ ಅಣ್ಣ ತಿಳಿಸಿದರು. ಜಗಕೆಲ್ಲ ಒಬ್ಬನೇ ಭಗವಂತ ಇರುವದು. ಅವನೇ ಪರಮಾತ್ಮ. ಆ ಪರಮಾತ್ಮನನ್ನು ಭುವಿಯ ಮೇಲಣ ಎಲ್ಲಾ ಧರ್ಮದ ಮಹಾತ್ಮರೂ, ಪ್ರವರ್ತಕರು, ತಮ್ಮ ತಮ್ಮ ಚಿಂತನೆ, ಬೋಧನೆಗಳ ಮೂಲಕ ಹೇಳಿದ್ದಾರೆ. ಹಿಂದೂ, ಮುಸ್ಲಿಂ, ಸಿಖ್, ಇಸಾಯಿ, ಕ್ರೈಸ್ತ, ಬೌದ್ಧ, ಜೈನ ಹೀಗೆ ನಾವು ಕಟ್ಟಿಕೊಂಡಿರುವ ಧರ್ಮಗಳ ಪ್ರವರ್ತಕರೆಲ್ಲರು ಏಕೇಶ್ವರ ವಾದವನ್ನೇ ಬಿತ್ತರಿಸಿದ್ದರೆ ನಾವುಗಳು ಮಾತ್ರ ಆ ಸತ್ಯವನ್ನು ಅರಿಯದೆ, ನಮ್ಮ ನಮ್ಮೊಳಗೆ ಅರ್ಥ ಮಾಡಿಕೊಳ್ಳದೆ ಕಚ್ಚಾಟ ಕಿತ್ತಾಟ, ಪರಸ್ಪರ ದ್ವೇಷ ವೈಷಮ್ಯ ತೋರುತ್ತಿದ್ದೇವೆ ಎಂದರು.

ದೇವನೊಬ್ಬ ನಾಮ ಹಲವು ಎಂಬಂತೆ ಹಿಂದೂ ಧರ್ಮದಲ್ಲಿ ದ್ವಾದಶ ಲಿಂಗಗಳ ದರ್ಶನ ಮಾಡುವ ಮೂಲಕ ಜನ ಜಗದೊಡೆಯ ಪರಮಾತ್ಮನನ್ನು ಸ್ಮರಿಸುತ್ತಾರೆ. ಇಸ್ಲಾಂ ಧರ್ಮ ಸ್ಥಾಪಕ ಮಹಮದ್ ಪೈಗಂಬರ್ ಅವರ ಖುರಾನ್ ಗ್ರಂಥದಲ್ಲಿಯೂ ಕೂಡ ಜಗದೊಡೆಯ ಪರಮಾತ್ಮ ಒಬ್ಬನೇ ( ಅಲ್ಲಾ) ಎಂದು ಸಾರಿದ್ದಾರೆ. ದಿನಕ್ಕೆ ಐದು ಬಾರಿ ಪ್ರಾರ್ಥನೆ, ಉಪವಾಸಗಳು ಪರಮಾತ್ಮನ ಕಾಣಲು ಮಾರ್ಗಗಳೇ ಆಗಿವೆ. ಯಹೂದಿಗಳ ಮೂಲ ಪುರುಷ ಮೊರಾಸ್ ಹಾಗೂ ನಂತರದಲ್ಲಿ ಬಂದ ಕ್ರಿಸ್ತ ಕೂಡ ಏಕೇಶ್ವರ ವಾದವನ್ನೇ ಮಂಡಿಸಿದರು. ಬಸವಾದಿ ಶರಣರ ವಚನ ಗಳಲ್ಲೂ ಕೂಡ ದಯವೇ ಧರ್ಮದ ಮೂಲವಯ್ಯ ಎಂದಿದ್ದಾರೆ. ಕ್ರಿಸ್ತನ ಏಳಿಗೆ ಮತ್ತು ಪ್ರಚಾರವನ್ನು ಸಹಿಸದವರು ಅವನಿಗೆ ಮೊಳೆ ಹೊಡೆಯುವಾಗ ಕೂಡ ಅವನನ್ನು ಹಿಂಸಿಸುವ ಜನರ ಮೇಲೆ ದಯೆ, ಕನಿಕರ ವ್ಯಕ್ತಪಡಿಸುತ್ತಾನೆ. “ಎಲೋಹಿ ಎಲೋಹೀ ಲಮಾ ಸಬಕ್ತಾನಿ”  ( ದೇವರೇ, ದೇವರೇ ಇವರನ್ನು ಕಾಪಾಡು). ಇವರು ತಾವೇನು ಮಾಡುತ್ತಿದ್ದಾರೆ ಎಂಬುದೂ ಕೂಡ ಗೊತ್ತಿಲ್ಲ ರಕ್ಷಿಸು ಎಂದು ಪರಮಾತ್ಮನನ್ನು ಬಿಡುತ್ತಾರೆ. ಇನ್ನು ಸಿಖ್ ಧರ್ಮದಲ್ಲೂ ಕೂಡ ಗುರುನಾನಕ್ ಅವರು ತಮ್ಮ ಗುರು ಗ್ರಂಥಸಾಹಿಬ್ ನಲ್ಲಿ ಏಕೇಶ್ವರ ವಾದವನ್ನೇ ಮಂಡಿಸಿದ್ದಾರೆ. ಜಗತ್ತಿಗೆ ಆಧ್ಯಾತ್ಮದ ಬೆಳಕು ಕೊಡುವ ನಮ್ಮ ಭಾರತ ಜಗದ್ಗುರು ಆಗುವಲ್ಲಿ ಸಾಗುತ್ತಿದೆ. ನಮ್ಮ ಕವಿ ರವೀಂದ್ರನಾಥ ಠಾಗೋರ್ ಅವರು ಬರೆದ ನಮ್ಮ  ರಾಷ್ಟ್ರಗೀತೆಯಲ್ಲಿ ಕೂಡ “ಜನ ಗಣ ಮನ ಅಧಿನಾಯಕ ಜಯ ಹೇ” ಎಂಬ ಸಾಲುಗಳು ಕೂಡ ಜಗದೊಡೆಯ ಪರಮಾತ್ಮ ಒಬ್ಬನೇ, ಅವನ ಮಕ್ಕಳು ನಾವೆಲ್ಲ ಎಂಬುದನ್ನು ಸಾರುತ್ತದೆ. ಜೈನ, ಬೌದ್ಧ ಧರ್ಮಗಳಲ್ಲೂ ಕೂಡ ಪರಮಾತ್ಮ ಒಬ್ಬನೇ, ದೇವನೊಬ್ಬ ನಾಮ ಹಲವು ನಮ್ಮ ನಮ್ಮ ಭಾವದಂತೆ ಎಂಬುದು ಸಾಬೀತಾಗಿದೆ. ಹೀಗೆ ಜಗತ್ತಿನ ಎಲ್ಲಾ ಧರ್ಮಗಳೂ ಪರಮಾತ್ಮ ಒಬ್ಬನೇ, ಜೀವಾತ್ಮರಾದ ನಾವು ಸಾರ್ಥಕ ಜೀವನ ಮಾಡಿ ಪರಮಾತ್ಮನನ್ನು ಕಾಣಲು ಪ್ರಯತ್ನಿಸಬೇಕು. “ಆ ದೇವ ಈ ದೇವ ಮಾದೇವನೆನಬೇಡ, ಆ ದೇವರ ದೇವ ಭುವನದ ಪ್ರಾಣಿಗಳಿಗಾದವನೆ ಮಾದೇವ ಸರ್ವಜ್ಞ” ಎಂಬಂತೆ ಸಕಲರಿಗೂ ಲೇಸನೇ ಬಯಸುವ ಪರಮಾತ್ಮ ನಮ್ಮೆಲ್ಲರ ತಂದೆ ಎಂಬ ಸತ್ಯವನ್ನರಿತು ಬಾಳು ಸವೆಸಬೇಕಾಗಿದೆ. 

ಹೀಗೆ ಎಲ್ಲಾ ಜೀವಾತ್ಮರಿಗೆ ಪರಮಾತ್ಮನೆಂಬ ದೇವರು ಇದ್ದಾನೆ. ಎಲ್ಲರಿಗೂ ಒಬ್ಬನೇ ಒಡೆಯ, ದೇವರು ಎಂಬ ಸತ್ಯವನ್ನು ಅರಿತು, ಯೋಗಿಗಳಾಗಿ, ಪವಿತ್ರರಾಗಿ ಶಿವ ಧ್ಯಾನ ಮಾಡುತ್ತಾ, ಸಕಲರಿಗೂ ಲೇಸನೇ ಬಯಸಿದ ಬಸವಾದಿ ಶರಣರು  ಬದುಕಿದಂತೆ ನಾವು ಕೂಡ ಶಿವ ಧ್ಯಾನ ಮಾಡಿ, ಪರಮಾತ್ಮನನ್ನು ಕಾಣಲು ಪ್ರಯತ್ನಿಸಬೇಕು.

- Advertisement -

ಪ್ರವಚನದ ಪೂರ್ವದಲ್ಲಿ ನಿತ್ಯ ಒಂದು ಗಂಟೆ ವಿವಿಧ ಸಾಧಕರು, ಮಕ್ಕಳು, ಅಧಿಕಾರಿ ನೌಕರ ವರ್ಗದವರಿಂದ ಪ್ರೇಕ್ಷಕರಿಗೆ ಮನರಂಜನೆ, ಸಾಹಿತ್ಯ, ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳು ಕೂಡ ನಡೆಯುತ್ತಿದ್ದು, ಒಂದೊಂದು ದಿನ ಒಂದೊಂದು ಇಲಾಖೆಯ ಸಾಧಕರಿಗೆ ಗೌರವ ಸನ್ಮಾನ ಮಾಡಲಾಗುತ್ತದೆ. ಶಿಕ್ಷಕ ಸಾಹಿತಿ, ಸಂಘಟಕ ಸಂತೋಷ್ ಬಿದರಗಡ್ಡೆ ಅವರಿಗೆ ಒಂದು ದಿನ  ಗೌರವ ಸನ್ಮಾನ ಮಾಡಲಾಯಿತು.

ತಾಲೂಕಿನ ಬಿದರಗಡ್ಡೆ ಗ್ರಾಮದ ಚನ್ನಬಸವಣ್ಣ, ರಾಜಣ್ಣ, ಬಸಣ್ಣ, ಮಮತಕ್ಕ, ನಾಗರಾಜಣ್ಣ ಮುಂತಾದವರು,  ಓಂ ಶಾಂತಿ ಕೇಂದ್ರದ ಎಲ್ಲಾ ಅಕ್ಕಂದಿರು, ಅಣ್ಣಂದಿರು ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಜನರು, ಜನ ಪ್ರತಿನಿಧಿಗಳು ಈ ಪ್ರವಚನ ಕಾರ್ಯಕ್ರಮ ಯಶಸ್ಸಿಗೆ ಕಾಯ ವಾಚಾ ಮನಸಾ ಸೇವೆ ಮಾಡುತ್ತಿದ್ದಾರೆ.

ತಾಲೂಕಿನ ಜನತೆ ಪ್ರತಿದಿನ ಸಂಜೆ 6.30ಕ್ಕೆ  ಪ್ರಾರಂಭವಾಗುವ ಪ್ರವಚನಕ್ಕೆ ಬಂದು “ಶರಣರು ಕಂಡ ಶಿವ” ಪ್ರವಚನವನ್ನು ಸಾರ್ಥಕ್ಯಗೊಳಿಸಬೇಕೆಂದು ಹೊನ್ನಾಳಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ, ಸುಜ್ಞಾನಿ ಜ್ಯೋತಿ ಅಕ್ಕ ಅವರು ಮನವಿ ಮಾಡಿದರು.


ವರದಿ: ಸಂತೋಷ್ ಬಿದರಗಡ್ಡೆ

ಶಿಕ್ಷಕ ಸಾಹಿತಿ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group