spot_img
spot_img

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

Must Read

spot_img
- Advertisement -

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ ಸ್ವಾಮಿಜಿ ಇರುತ್ತಾರೆ ಎಂದು ಶೂನ್ಯಪೀಠ ಪ್ರಶಸ್ತಿ ಪುರಸ್ಕೃತ ಹಾಸಿಂಪೀರ ವಾಲೀಕಾರ ಹೇಳಿದರು.

ಪಟ್ಟಣದ  ಶ್ರೀ  ಗುರುದೇವ  ಆಶ್ರಮದ  ಪೂಜ್ಯ  ಶ್ರೀ ಶಾಂತ ಗಂಗಾಧರ  ಸ್ವಾಮೀಜಿಯವರ 74 ನೇ ಜನ್ಮ ದಿನದ ನಿಮಿತ್ತ ಉತ್ತಮ  ಸಮಾಜ  ನಿರ್ಮಾಣದಲ್ಲಿ  ಶರಣರ  ಪಾತ್ರ ಕುರಿತು  ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಾಹಿತ್ಯ ನಿಂತ ನೀರಾಗದೇ ಸದಾ ಹರಿಯುವ ನೀರಾಗಬೇಕು ಎನ್ನುವ ನಿಟ್ಟಿನಲ್ಲಿ ಶ್ರೀ ಶಾಂತಗಂಗಾಧರ  ಸ್ವಾಮೀಜಿಯವರು ಅಭಿನಂದನಾರ್ಹರಾಗಿದ್ದಾರೆ ಅದಕ್ಕೆ ಅವರ ಅಭಿನಂಧನಾ  ಗ್ರಂಥದ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಸರಳ ಸಜ್ಜನಿಕೆಯ  ಸ್ವಾಮೀಜಿ ಅಪಾರ  ಜ್ಞಾನ ಸಂಪಾದಿಸಿದ್ದಾರೆ. ವಚನ  ಸಾಹಿತ್ಯ  ಅವರ  ಉಸಿರು ಎಂದರು.

ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ  ಅಶೋಕ  ಅಲ್ಲಾಪೂರ ಮಾತನಾಡಿ, ಶರಣ ಸಾಹಿತ್ಯದಲ್ಲಿ  ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ  ಸೇವೆ  ಸಲ್ಲಿಸಿದ ಶಾಂತಗಂಗಾಧರ  ಸ್ವಾಮೀಜಿಯವರು  ಮಾದರಿಯಾಗಿದ್ದಾರೆ  ಶರಣ  ತತ್ವಗಳಲ್ಲಿ  ಪರಿಣಿತರು. ಎಲ್ಲ  ವರ್ಗದ ಜನರು  ಅವರ  ಭಕ್ತರಾಗಿದ್ದಾರೆ ಎಂದು ಹೇಳಿದರು.

- Advertisement -

ದಸಂಸ ಸಂಚಾಲಕ ವೈ. ಸಿ  ಮಯೂರ  ಮಾತನಾಡಿ, ಪಕ್ಷಾತೀತವಾಗಿ ಶಾಂತಗಂಗಾಧರ ಸ್ವಾಮೀಜಿಯವರ  ಅಮೃತ ಮಹೋತ್ಸವ  ಅರ್ಥಪೂರ್ಣವಾಗಿ  ಆಚರಿಸೋಣ. ನಾಡಿನ  ಹಿರಿಯ  ಸ್ವಾಮೀಜಿಯವರನ್ನು  ಅಹ್ವಾನಿಸೋಣ. ಆಡಂಬರ, ವೈಭವದ ಜೀವನದಿಂದ  ದೂರವಿದ್ದು  ಸಮಾಜಮುಖಿ  ಕಾಯಕದಲ್ಲಿ  ತೊಡಗಿಸಿಕೊಂಡಿದ್ದಾರೆ. ಸಮಾಜ  ಸ್ವಾಮೀಜಿಯವರ  ಜ್ಞಾನ  ಪಡೆಯುವದರಲ್ಲಿ ಸಫಲವಾಗಿಲ್ಲ  ಎಂದರು.

ಎ ಬಿ ಕೊಂಡಗೂಳಿ. ಸಾಯಬಣ್ಣ ಬಾಗೇವಾಡಿ. ಹುಸೇನಬಾಶಾ ಕೆಂಗನಾಳ.ಅಣ್ಣಾರಾಯ  ಪೂಜಾರಿ. ಡಾ–ರಾಜುಕುಮಾರ ನರಗೊದಿ.  ನಿತ್ಯಾನಂದ ಶರಣರು. ಸುಭಾಶ  ಸ್ವಾಮೀಜಿ. ಶ್ಯಾಮಲಾ ಮಂದೇವಾಲೆ .ನಾಗರಾಜ ಹೊಸಳ್ಳಿ. ಕಸ್ತರಿಬಾಯಿ  ಕೊಟರಗಸ್ತಿ ಉಪಸ್ಥಿತರಿದ್ದರು.

ವರದಿ: ಪಂಡಿತ್ ಯಂಪೂರೆ, ಸಿಂದಗಿ

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group