spot_img
spot_img

ಜಲಮಂಡಳಿ ಹಾಗೂ ಬಿ.ಬಿ.ಎಂ.ಪಿ ಅಧಿಕಾರಿಗಳಿಂದ ಟಿ.ಜಿ.ಲೇಔಟ್ ನಲ್ಲಿ ಅವವ್ಯಸ್ಥೆ: ಇದಕ್ಕೇನು ಪರಿಹಾರ?

Must Read

spot_img

ಬೆಂಗಳೂರು: ಬನಶಂಕರಿ 3 ನೇ ಹಂತದ ಟಿ.ಜಿ ಲೇಔಟ್ ನಲ್ಲಿ ಬೆಂಗಳೂರು ಜಲಮಂಡಳಿಯವರು ಕಾಮಗಾರಿ ನಡೆಸಲು ಚರಂಡಿಯ ಪೈಪ್ ಲೈನ್ ರಿಪೇರಿ ಮಾಡಲು ಅಗೆಯುವುದಕ್ಕೂ, ಸತತ ಮಳೆ ಸುರಿಯುವುದಕ್ಕೂ ಸರಿ ಹೋಯಿತು.

ತಗ್ಗು ತೆಗೆದ ಪರಿಣಾಮ ರಸ್ತೆಯ ತುಂಬಾ ಮೋರಿ ನೀರು ಉಕ್ಕಿ ಹರಿದು ಮನೆಯ ಒಳಗೆಲ್ಲ ಮೋರಿ ನೀರು ಹರಿದು ನಾಗರೀಕರು ಪರದಾಡುವಂತಾಯಿತು.

ರಾಜರಾಜೇಶ್ವರಿ ನಗರ ಮತ್ತು ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಮಧ್ಯೆ ಇರುವ ರಸ್ತೆಯು ಹೊಸಕೇರಿಹಳ್ಳಿಯ ದತ್ತಾತ್ರೇಯ ದೇವಾಲಯದ ಸಮೀಪದಲ್ಲಿ ಹಾಗೂ ಗುರುದತ್ತ ಬಡಾವಣೆಯ ರಾಜ ಕಾಲುವೆಯ ಹಿಂಬದಿಯಲ್ಲಿ ಬರುತ್ತದೆ ಆದರೆ ಇಲ್ಲಿನ ನಾಗರಿಕರ ಬದುಕು ಅಧ್ವಾನವಾಗಿದೆ ಎನ್ನುತ್ತಾರೆ ಶ್ರೀಮತಿ ಶ್ಯಾಮಲಾ.

ಅವರು ಮಾತನಾಡುತ್ತ, 2020 ರಿಂದ ಈ ಸಮಸ್ಯೆ ಅನುಭವಿಸುತ್ತಾ ಇದ್ದೇವೆ ಎಂದರೆ ಕಲ್ಪನಾ ರವರು ಪತ್ರಿಕೆ ಜೊತೆ ಮಾತನಾಡುತ್ತ ನಾಗರಿಕರ ಸಮಸ್ಯೆ ಕೇಳಲು ಸಚಿವ ಆರ್ ಅಶೋಕ್ ಹಾಗೂ ಮುನಿರತ್ನ ಅವರು ಬರುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೋರಾಗಿ ಮಳೆ ಬಂದ ಪರಿಣಾಮವಾಗಿ ರಸ್ತೆಯ ಮೇಲೆ ಚರಂಡಿ ನೀರು ಉಕ್ಕಿ ಹರಿದು ಜನ ಜೀವನ ಅಸ್ತವ್ಯಸ್ತವಾಗಿದೆ. ಜಲಮಂಡಳಿ ಅವರು ಚರಂಡಿ ಅಗೆದು ಪೈಪ್ ಜೋಡಿಸುವುದ ಬಿಟ್ಟು ಹಾಗೇ ಹೋಗಿದ್ದರಿಂದ ಹಾಗೆಯೇ ರಸ್ತೆಯ ಮೇಲೆ ಹಾಗೂ ರಸ್ತೆಯ ಬದಿಯಲ್ಲಿ ಬಿಟ್ಟ ಪರಿಣಾಮ ಕಳೆದ 10 ದಿನಗಳಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಯ ಕಿರಿ ಕಿರಿ ಬೇರೆ ಎನ್ನುತ್ತಾರೆ ಸ್ಥಳಿಯ ನಾಗರೀಕರಾದ ವಿಜಯ್ ಕುಮಾರ್.

ಒಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಯಾವಾಗ ಸಿಕ್ಕುವುದು ಎಂಬುದೇ ಯಕ್ಷ ಪ್ರಶ್ನೆ ಆಗಿದೆ ಎನ್ನುತ್ತಾರೆ ಸ್ಥಳೀಯ ನಾಗರಿಕರಾದ ಅಶೋಕ್ ರೆಡ್ಡಿ, ಯಾವುದೇ ಅಪಾಯ ಸಂಭವಿಸುವ ಮುನ್ನ ಜಲಮಂಡಳಿ ಹಾಗೂ ಬಿ.ಬಿ.ಎಂ.ಪಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರಾದ ಅಶೋಕ್ ರೆಡ್ಡಿ , ಅನಿಲ್ ಕುಮಾರ್ ,ರಾಜೇಶ್ , ವಿಜಯಕುಮಾರ್ , ಗಿರೀಶ್ ಮತ್ತು ,ನರಸಿಂಹಯ್ಯ , ಶ್ರೀಮತಿ ಶ್ಯಾಮಲಾ , ಕಲ್ಪನಾ ಇನ್ನೂ ಅನೇಕ ಸ್ಥಳೀಯರು ಅಗ್ರಹಿಸಿದ್ದಾರೆ.


ಚಿತ್ರ – ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ
Mobile Number : 9480129458

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!