spot_img
spot_img

ಪಂಚಮಸಾಲಿ ಹೋರಾಟಕ್ಕೆ ರೆಡ್ಡಿ ಸಮಾಜದಿಂದ 10 ಸಾವಿರ ರೊಟ್ಟಿ ವಿತರಣೆ

Must Read

- Advertisement -

ಮೂಡಲಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕೂಡಲಸಂಗಮದ ಶ್ರೀಗಳ ನೇತೃತ್ವದಲ್ಲಿ ಡಿ.22ರಂದು 25 ಲಕ್ಷ ಜನರನ್ನು ಸೇರಿಸಿ ಬೆಳಗಾವಿಯ ಸುವರ್ಣ ವಿಧಾನ ಸೌಧದ ಮುಂದೆ ಪ್ರತಿಭಟನೆ ಮಾಡುವ ಹಿನ್ನೆಲೆಯಲ್ಲಿ ಬುಧವಾರದಂದು ಮೂಡಲಗಿ ಪಟ್ಟಣದಲ್ಲಿ ಮೂಡಲಗಿ ತಾಲೂಕಿನ ರೆಡ್ಡಿ ಸಮಾಜ ಭಾಂದವರಿಂದ ಸುಮಾರು 10 ಸಾವಿರ ರೊಟ್ಟಿ ನೀಡುವ ಮೂಲಕ ಪಂಚಮಸಾಲಿ ಹೋರಾಟವನ್ನು ಬೆಂಬಲಿಸಿದರು.

ಮೂಡಲಗಿ, ಕುಲಗೋಡ, ಯಾದವಾಡ ಮತ್ತು ಕಳ್ಳಿಗುದಿ ಗ್ರಾಮ ರೆಡ್ಡಿ ಸಮಾಜ ಭಾಂದವರಿಂದ ಹತ್ತು ಸಾವಿರ ರೊಟ್ಟಿಗಳನ್ನು ಸ್ವೀಕರಿಸಿದ ಪಂಚಮಸಾಲಿ ಸಂಘಟನೆಯ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ದೀಪಕ  ಜುಂಜರವಾಡ ಮಾತನಾಡಿ, ಪಂಚಮಸಾಲಿ ಹೋರಾಟವನ್ನು ಬೆಂಬಲಿಸಿ ಮೂಡಲಗಿ ತಾಲೂಕಿನ ಹಾಗೂ ಅರಭಾವಿ ಕ್ಷೇತ್ರದ ರಡ್ಡಿ ಸಮಾಜ ಕಾರ್ಯವನ್ನು ಶ್ಲಾಘಿಸಿದರು.

ಈ ಸಂಧರ್ಭದಲ್ಲಿ ಮೂಡಲಗಿ ಪುರಸಭೆ ಸದಸ್ಯ ಜಯಾನಂದ ಪಾಟೀಲ, ಸುಭಾಸ ವಂಟಗೋಡಿ, ಹನಮಂತ ಹುಚರಡ್ಡಿ, ಗೌಡಪ್ಪ ಗುರಡ್ಡಿ, ಜಿ.ಟಿ.ಸೋನವಾಲ್ಕರ, ಸುನೀಲ ವಂಟಗೋಡಿ, ಲಕ್ಷ್ಮಣ ಹುಚರಡ್ಡಿ, ಬಿ.ಎಚ್.ಸೋನವಾಲ್ಕರ, ಪ್ರದೀಪ ಲಂಕೆಪ್ಪನವರ, ಈಶ್ವರ ಸತರಡ್ಡಿ, ರಮೇಶ ಹೊಸಕೋಟಿ, ವಿನೋದ ಪಾಟೀಲ, ಅಶೋಕ ಹೊಸುರ, ರಂಗಣ್ಣ ಸೋನವಾಲ್ಕರ, ವೆಂಕಟೇಶ ದಂಡಪ್ಪನವರ, ಶಂಕರ ಚಿಪ್ಪಲಕಟ್ಟಿ, ವೆಂಕಪ್ಪ ರಬಕವಿ, ಮಲ್ಲು ಗೋಡಿಗೌಡರ, ಸಂಗಮೇಶ ಕೌಜಲಗಿ, ಶಿವಬಸು ಹಂದಿಗುಂದ, ಕಲ್ಮೇಶ ಗೋಕಾಕ, ಈರಪ್ಪ ಮುನ್ಯಾಳ, ಶ್ರೀಶೈಲ್ ಬಳಿಗಾರ, ಸೋಮು ಹಿರೇಮಠ, ಹೊಳೆಪ್ಪ ನಿಂಗನೂರ, ಬಸವರಾಜ ಪಟ್ಟಣಶೆಟ್ಟಿ ಮತ್ತಿತರರು ಇದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group