ಶ್ರೀ ಶಾಂತವೀರ ಕನ್ಯಾ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ವಿತರಣೆ

Must Read

ಸಿಂದಗಿ: ಮಕ್ಕಳಿಗೆ ಪೌಷ್ಠಿಕಾಂಶಗಳು ಉತ್ತಮ ರೀತಿಯಲ್ಲಿ ಸಿಕ್ಕಾಗ ಮಾತ್ರ ಅವರಲ್ಲಿ ಉತ್ತಮ ಕಲಿಕೆಯ ವಾತಾವರಣ ನಿರ್ಮಾಣ ವಾಗುತ್ತದೆ. ಶಿಕ್ಷಕರು ಈ ಯೋಜನೆಯನ್ನು ಯೋಗ್ಯತಾ ರೀತಿಯಲ್ಲಿ ಅನುಷ್ಠಾನ ಗೊಳಿಸುವ ಮೂಲಕ ಮಕ್ಕಳ ಶ್ರೇಯಸ್ಸಿಗೆ ಸಹಕರಿಸಬೇಕು ಎಂದು ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಹೇಳಿದರುು.

ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಶ್ರೀ ಶಾಂತವೀರ ಕನ್ಯಾ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಿ ಮಾತನಾಡಿ, ಶಾಲಾ ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ, ಹಾಗೂ ಪೋಷಕಾಂಶಗಳ ನ್ಯೂನತೆಯನ್ನು ದೂರ ಮಾಡಲು 1 ರಿಂದ 8 ನೇ ತರಗತಿಯ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ನೀಡುವ ಕಾರ್ಯಕ್ರಮ ವೈಜ್ಞಾನಿಕವಾಗಿದೆ ಎಂದರು.

ಈ ಸಂಧರ್ಭದಲ್ಲಿ ಮುಖ್ಯೋಪಾಧ್ಯಾಯ ಎಸ್.ವಾಯ್.ಮೇಲಿನಮನಿ, ಶಿಕ್ಷಕರಾದ ಎನ್.ಎ.ಮಹಾಜನ, ವ್ಹಿ.ಬಿ.ಕೊಟ್ಟೆನ್ನವರ, ಆರ್.ವಾಯ್.ಪರೀಟ್, ಎಸ್.ಎಸ್.ಹತ್ತಿ, ವ್ಹಿ.ಎಸ್.ವಾಲಿಕಾರ, ಎಸ್.ಆರ್.ನಾಯಕ, ಲೋಹಿತಜಾಧವ, ಎಸ್.ವ್ಹಿ.ಮಿರ್ಜಿಕರ, ಪಮ್ಮು ಬಿರಾದಾರ, ಚೌಧರಿ, ಸುಭಾಸ ಪಾಟೀಲ, ಕೃಷ್ಣಾ ಜೋಷಿ, ವಿಮಲಾ ಬಿರಾದಾರ, ಶಂಕರಗೌಡ ಪಾಟೀಲ, ರಾಜು ಎಮ್ಮಿ ಸೇರಿದಂತೆ ಅನೇಕರು ಇದ್ದರು.

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group