spot_img
spot_img

Sindagi: ಸವಿತಾ ಸಮಾಜದವರಿಗೆ ಆಹಾರ ಹಾಗೂ ಔಷಧಿ ಕಿಟ್ ವಿತರಣೆ

Must Read

spot_img
- Advertisement -

ಸಿಂದಗಿ: ಕೋವಿಡ್-19 ಹರಡುವಿಕೆ ಆತಂಕದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಸರ್ಕಾರ ಲಾಕ್ ಡೌನ್ ಹೇರಿದ್ದರಿಂದ ಹಡಪದ ಬಂಧುಗಳು ನಿತ್ಯ ಹಮ್ಮಿಕೊಳ್ಳುವ ಕ್ಷೌರಿಕ ವೃತ್ತಿ ಬಂದಾಗಿದ್ದು ಇದರಿಂದ ಜೀವನ ನಡೆಸುವುದು ದುಸ್ಥರವಾಗಿದ್ದು ನಿಮ್ಮ ಜೊತೆ ನಾವಿದ್ದೇವೆ ಎಂದು ಸಂದೇಶದೊಂದಿಗೆ ಕಾಂಗ್ರೆಸ್ ಅಭ್ಯರ್ಥೀ ಅಶೋಕ ಮನಗೂಳಿ ಅವರು ಸಿಂದಗಿ ಪಟ್ಟಣದಲ್ಲಿ ಹಡಪದ ಅಪ್ಪಣ್ಣ ಸಮುದಾಯ ಹಾಗೂ ಸವಿತಾ ಸಮಾಜದ 100 ಜನರಿಗೆ ದಿನಸಿ ಆಹಾರ ಹಾಗೂ ಕರೋನಾ ಮಾತ್ರೆಗಳ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಅಶೋಕ ಮನಗೂಳಿ ಮಾತನಾಡಿ, ಈ ಕರೋನಾ-19 ಸೋಂಕು ಹರಡಿ ಬಡ ಜನರು, ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ಧಾರೆ. ಇದರಿಂದ ಸರಕಾರ 2 ಹಂತದ ಪರಿಹಾರ ಘೋಷಣೆ ಮಾಡಿದೆ ಆದರೆ ಯಾವೊಬ್ಬರ ಖಾತೆಗಳಿಗೆ ಹಣ ಬಂದು ಜಮೆಯಾಗಿಲ್ಲ. ಕರೋನಾ ಮುಗಿದ ನಂತರ ಫಲಾನುಭವಿಗಳ ಖಾತೆಗಳಿಗೆ ಬಂದರೆ ಏನೂ ಪ್ರಯೋಜನವಾಗುವುದಿಲ್ಲ ಕಾರಣ ಜನರಿಗೆ ಸಮಸ್ಯೆಯಿದ್ದಾಗ ಸಹಾಯ ಮಾಡುವುದು ಸರಿಯಾದ ಕ್ರಮ ಆದರೆ ಬರೀ ಕಾಗದಲ್ಲಿ ಮಾತ್ರ ಘೋಷಣೆಯಾಗಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಶರಣಪ್ಪ ಸುಲ್ಪಿ, ಪುರಸಭೆ ಸದಸ್ಯ ಬಸವರಾಜ ಯರನಾಳ ಹಾಗೂ ಕಾಂಗ್ರೆಸ್ ಮುಖಂಡರಾದ ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ವಿಶ್ವನಾಥ ಕುರುಡೆ, ಸತೀಶಗೌಡ ಬಿರಾದಾರ, ಸಂಗಯ್ಯ ಮಠ, ಬಾಬುಗೌಡ ಬಿರಾದಾರ ಸಾಸಾಬಾಳ, ಉಮೇಶ ಜೋಗುರ, ಅಶೋಕ್ ಯಡ್ರಾಮಿ, ಜಿಲ್ಲಾನಿ ನಾಟಿಕಾರ, ಇಮಾಮುದ್ದಿನ್ ಚಾಂದಕವಟೆ, ರವಿ ನಾವಿ, ಶಿವು ನಿಗಡಿ, ಸೀನು ದುರ್ಗಿ, ಅಂಬು ತಿವಾರಿ, ತಿರುಪತಿ ಬಂಡಿವಡ್ಡರ ಹಾಗೂ ಹಡಪದ ಸಮಾಜದ ಅಧ್ಯಕ್ಷ ಮಹಾಂತೇಶ ಮೂಲಿಮನಿ, ಸವಿತಾ ಸಮಾಜದ ಅಧ್ಯಕ್ಷ ಮಹಾಂತೇಶ ನಾವಿ, ಮಂಜುನಾಥ ಹಡಪದ, ಸಮಾಜದ ಪದಾಧಿಕಾರಿಗಳು ಹಾಗೂ ಇತರರಿದ್ದರು.

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group