ಆರ್ಥಿಕ ಸಂಕಷ್ಟದ ಜನತೆಗೆ ಕೋವಿಡ್ ಸಹಾಯ ಬಳಗದಿಂದ ಫುಡ್ ಕಿಟ್ ವಿತರಣೆ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಬೈಲಹೊಂಗಲ – ನಗರದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಎದುರುಗಡೆ ಇರುವ ಮೇಘನಾ ಟ್ರೇಡರ್ಸ್ ಆವರಣದಲ್ಲಿ ಇಂದು ಬಡಜನತೆಗೆ ಆಹಾರದ ಕಿಟ್ ಗಳನ್ನು ಮಾಜಿ ಶಾಸಕರಾದ ಜಗದೀಶ ಮೆಟಗುಡ್ ನೇತೃತ್ವದಲ್ಲಿ ಉಪವಿಭಾಗ ಅಧಿಕಾರಿಗಳಾದ ಶಶಿಧರ ಬಗಲಿ ಡಿವೈಎಸ್ಪಿ ಶಿವಾನಂದ ಕಟಗಿ ತಹಶಿಲ್ದಾರ್ ಬಸವರಾಜ ನಾಗರಾಳ, ಉದ್ಯಮಿ ಯುವ ಮುಖಂಡ ವಿಜಯ ಮೆಟಗುಡ್ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉಪವಿಭಾಗಧಿಕಾರಿ ಶಶಿಧರ ಬಗಲಿ ಜನರ ನೋವು ನಲಿವುಗಳಿಗೆ ಪ್ರತಿಯೊಬ್ಬರು ಸ್ಪಂದಿಸುವುದು ಮಾನವ ಧರ್ಮ ಹಾಗಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರೋನಾ ಮಹಾಮಾರಿಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳನ್ನು ಗುರುತಿಸಿ ಅವಶ್ಯಕ ದಿನಬಳಕೆಯ ವಸ್ತುಗಳ ಜೊತೆ ಸಣ್ಣ ಸಣ್ಣ ವಸ್ತುಗಳನ್ನು ಈ ಆಹಾರದ ಕಿಟ್ ನಲ್ಲಿ ನೀಡುತ್ತಿರುವುದು ಶ್ಲಾಘನೀಯವಾದ ಕೆಲಸ ಕೋವಿಡ್ ಸಹಾಯ ಬಳಗದ ಸದಸ್ಯರ ಸಹಕಾರದಿಂದ 350 ಕ್ಕೂ ಅಧಿಕ ಕಿಟ್ ಗಳನ್ನು ನೀಡುತ್ತಿರುವ ಕಾರ್ಯ ಸಂತಸ ತಂದಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಜಗದೀಶ ಮೆಟಗುಡ್ ಗೆಳೆಯರ ಬಳಗದವರು ಸೇರಿ ಈ ಒಂದು ಅದ್ಭುತವಾದ ಕಾರ್ಯಕ್ಕೆ ಕೈ ಹಾಕಿರುವುದು ಸಂತಸದ ವಿಷಯ ಇಂತಹ ಮಹಾಮಾರಿಯ ಸಂದರ್ಭದಲ್ಲಿ ಜನತೆಯ ಜೊತೆ ನಿಲ್ಲುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಈ ಆಹಾರದ ಕಿಟ್ ಗಳನ್ನು ವಿತರಿಸುತ್ತಿರುವ ಕಾರ್ಯ ಸ್ಮರಣೀಯ ಇವರ ಸೇವೆ ಹೀಗೆ ಮುಂದುವರಿಯಲಿ ಎಂದು ಹೇಳಿದರು.

- Advertisement -

ಕೋವಿಡ್ ಸಹಾಯ ಬಳಗ ಹಾಗೂ ಸಪೋರ್ಟಿಂಗ್ ಹ್ಯಾಂಡ್ಸ್ ತಂಡದ ಮುಖಂಡ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುರಸಭೆ ಸದಸ್ಯ ಗುರು ಮೆಟಗುಡ್, ಬಿಜೆಪಿ ತಾಲೂಕ ಮಾಧ್ಯಮ ವಕ್ತಾರ ದಯಾನಂದ ಪರಳಶೆಟ್ಟರ, ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸಂತೋಷ ಹಡಪದ, ಹಾಗೂ ಕುಮಾರ ನಾಗನೂರು ನೇತೃತ್ವದಲ್ಲಿ ದಾನಿಗಳಿಂದ ಸಹಾಯ ಸಹಕಾರ ಪಡೆದುಕೊಂಡು ಬಡವರಿಗೆ ಆಹಾರದ ಕಿಟ್ ವಿತರಿಸುತ್ತಿರುವ ಇವರ ಸೇವೆ ಉತ್ತಮವಾದದ್ದು ಎಂದು ಡಿವೈಎಸ್ಪಿ ಶಿವಾನಂದ ಕಟಗಿ ತಶಿಲ್ದಾರ್ ಬಸವರಾಜ ನಾಗರಾಳ ಅಭಿನಂದಿಸಿದರು.

ಸೇವೆ ಮಾಡಬೇಕೆಂಬ ಮನಸ್ಸುಗಳನ್ನು ಒಂದುಗೂಡಿಸಿ ಸೇವಾಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಈ ಒಂದು ಕೆಲಸಕ್ಕೆ ತಮ್ಮ ತನು ಮನ ಧನದಿಂದ ಸಹಾಯ ಸಹಕಾರ ನೀಡಿದ  ದಾನಿಗಳಿಗೆ ಗೆಳೆಯರ ಬಳಗದ ಮುಖಂಡ ದಯಾನಂದ ಪರಾಳಶೆಟ್ಟರ ವೇದಿಕೆಯಲ್ಲಿ ಧನ್ಯವಾದಗಳನ್ನು ಸಮರ್ಪಿಸಿದರು.

ಆಹಾರದ ಕಿಟ್ ವಿತರಣೆ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುರಸಭೆ ಸದಸ್ಯ  ಗುರು ಮೆಟಗುಡ್ , ಚಿಕ್ಕ ಮಕ್ಕಳ ತಜ್ಞ ಶರಣಕುಮಾರ ಅಂಗಡಿ, ಸ್ತ್ರೀ ರೋಗ ತಜ್ಞ ಅಶೋಕ ದೊಡವಾಡ, ಪುರಸಭೆ ಸದಸ್ಯ ಸಾಗರ ಭಾವಿಮನಿ, ಗಣ್ಯರಾದ ಶ್ರೀಶೈಲ ಮೆಟಗುಡ್, ಅನಿಲ್ ಮೆಟಗುಡ್, ಬಿಜೆಪಿ ಸಹಕಾರ ಪ್ರಕೋಷ್ಟ ಜಿಲ್ಲಾ ಸಂಚಾಲಕ ಸುನಿಲ್ ಮರಕುಂಬಿ, ಯುವ ಮುಖಂಡರಾದ ಸಂತೋಷ ರಾಯರ, ಬಾಬಣ್ಣ ನಾಗನೂರ, ಮಲ್ಲಪ್ಪ ಬಡಿಗೇರ , ಆನಂದ ತುರಮರಿ, ಮಲ್ಲಿಕಾರ್ಜುನ್ ಯರಝರ್ವಿ ಮಂಜುನಾಥ ಮರಶೆಟ್ಟಿ ಹಾಗೂ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!