- Advertisement -
ಮೂಡಲಗಿ – ಕೊರೋನಾ ಮಹಾಮಾರಿಯಿಂದ ತೀವ್ರ ಸಂಕಷ್ಟದಲ್ಲಿರುವ ನೇಕಾರ ಕುರುಹಿನಶೆಟ್ಟಿ ಸಮಾಜದ ಕುಟುಂಬಗಳಿಗೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದ ಕೆಕೆಜಿಎಸ್ ಶ್ರೀ ಸಂಧ್ಯಾ ಸೋಮಶೇಖರ್ ಸೇವಾ ಸಂಸ್ಥೆಯ ವತಿಯಿಂದ ಮೂಡಲಗಿ ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಆಹಾರ ಪದಾರ್ಥಗಳನ್ನು ಹಂಚಿಕೆ ಮಾಡಲಾಯಿತು.
ಮೂಡಲಗಿ ನೀಲಕಂಠ ಮಠದ ಪರಮಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ನೇಕಾರರಿಗೆ ಆಹಾರ ಕಿಟ್ ಹಂಚಿದರು.