spot_img
spot_img

ಹೆಲ್ಪಿಂಗ ಹ್ಯಾಂಡ್ಸ್ ತಂಡದಿಂದ ಪತ್ರಿಕಾ ವಿತರಕರಿಗೆ ಆಹಾರ ಕಿಟ್ ವಿತರಣೆ

Must Read

- Advertisement -

ಬೈಲಹೊಂಗಲ – ತಮ್ಮ ಜೀವನದ ಹಂಗನ್ನು ತೊರೆದು ತುತ್ತು ಅನ್ನಕ್ಕಾಗಿ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಾ ಬೆಳಿಗ್ಗೆ ಬೇಗ ಎದ್ದು ನಮಗೆ ಪತ್ರಿಕೆ ವಿತರಿಸುವ ಹುಡುಗರು ಕೂಡ ನಿಜವಾದ ಕೊರೋನ ವಾರಿಯರ್ಸ್ ಎಂದು ಯೋಗ ಗುರು ಡಾ.ಸಂಗಮೇಶ ಸವದತ್ತಿಮಠ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ತಂಡದ ವತಿಯಿಂದ ಪತ್ರಿಕೆ ವಿತರಿಸುವ ಹುಡುಗರಿಗೆ ರೇಷನ್ ಕಿಟ್ ಹಾಗೂ ತರಕಾರಿ ವಿತರಿಸಿ ಮಾತನಾಡಿ, ಪತ್ರಿಕೆಯ ಸುದ್ದಿಗಾಗಿ ತಮ್ಮ ಜೀವನ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಹಾಗೂ ಹಂಚಿಕೆಯಲ್ಲಿ ತೊಡಗುವ ಬಡ ಮಕ್ಕಳ ಶ್ರಮದಾನ ಅಮೋಘವಾಗಿದೆ.

ಜನತೆಯ ಜೀವನವನ್ನೆ ಬುಡ ಮೇಲು ಮಾಡುತ್ತಿರುವ ಕರೊನಾ ಮಹಾಮಾರಿಯ ಕೊಂಡಿಯನ್ನು ಕಡಿತಗೊಳಿಸಲು ಸಾಮಾಜಿಕ ಅಂತರ, ಮಾಸ್ಕ್, ಸ್ನಾನಿಟೈಜರ್ ಬಳಕೆ ಅತ್ಯವಶ್ಯವಾಗಿದೆ. ಸೋಂಕಿನ ಲಕ್ಷಣಗಳು ಕಂಡಲ್ಲಿ ಕೂಡಲೇ ವೈದ್ಯರ ಸಂಪರ್ಕ ಪಡೆದು ಸಲಹೆ,ಸೂಚನೆ ಪಾಲಿಸಲು ಸಲಹೆ ನೀಡಿದರು.

- Advertisement -

ಹೆಲ್ಪಿಂಗ ಹ್ಯಾಂಡ್ಸ ತಂಡದ ಗೌತಮ ಇಂಚಲ, ಸೂರಜ ಮತ್ತಿಕೊಪ್ಪ, ಶಾಂತವಿರೇಶ ಹಿರೇಮಠ, ಸಂಗಮೇಶ ಹೂಲಿ, ಸತೀಶ ಅರವಳ್ಳಿ, ವಿಶಾಲ ಕರೋಶಿ, ವಿರೇಶ ಪಾಟೀಲ, ಶರಣ ಹೂಲಿ ಹಾಗೂ ಪತ್ರಕರ್ತರು, ಹೆಲ್ಪಿಂಗ ಹ್ಯಾಂಡ್ಸ ತಂಡದ ಸದಸ್ಯರು ಇದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group