ಸೊಗಲದಲ್ಲಿ ಪ್ರಾಣಿಗಳಿಗೆ ಆಹಾರ ವಿತರಣೆ

Must Read

ಬೈಲಹೊಂಗಲ: ಓಂಕಾರ ಸಮಗ್ರ ಗ್ರಾಮೀಣ ಸೇವಾ ಸಂಘ (ರಿ) ನೇತೃತ್ವದಲ್ಲಿ ಇಂದು ಬೈಲಹೊಂಗಲ ತಾಲೂಕಿನ ಶ್ರೀಕ್ಷೇತ್ರ ಸೊಗಲ ಗ್ರಾಮದಲ್ಲಿ ಪ್ರಾಣಿಗಳಿಗೆ ಆಹಾರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರು ಸೋಮಯ್ಯ ಪಾಟೀಲ, ಹಲವು ಕಡೆಗೆ ಪ್ರವಾಸಿಗರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಪ್ರಾಣಿಗಳಿಗೆ ಆಹಾರದ ಕೊರತೆಯಾಗುತ್ತಿದೆ. ಮನುಷ್ಯರಾದರೆ ಬಾಯಿ ಬಿಟ್ಟು ತಮ್ಮ ಹಸಿವನ್ನು ತೋಡಿಕೊಳ್ಳುತ್ತಾರೆ.

ಆದರೆ ಮೂಕ ಪ್ರಾಣಿಗಳು ಪ್ರವಾಸಿಗರತ್ತ ಆಶಾಭಾವನೆಯಿಂದ ಆಹಾರಕ್ಕಾಗಿ ನೋಡುತ್ತವೆ, ಒಂದು ಕಡೆಗೆ ಪ್ರವಾಸಿಗರ ಸಂಖ್ಯೆ ಕಡಿಮೆ ಮತ್ತೊಂದೆಡೆ ಪ್ರವಾಸಿಗರ ಖಾಲಿ ಕೈಗಳು ಮೂಕ ಪ್ರಾಣಿಗಳ ಹಸಿವು ನೀಗದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಶ್ರೀಮತಿ ಶಶಿಕಲಾ ಹಿರೇಮಠ, ಬೈಲಹೊಂಗಲ ತಾಲೂಕು ಪ್ರಮುಖರು ನಿರ್ಗುಣ ರೇವಣ್ಣವರ, ಗುರುರಾಜ ಉಳ್ಳಿಗೇರಿ, ಪ್ರಸಾದ್ ಪಾಟೀಲ್, ಸೊಗಲ ಗ್ರಾಮದ ನಾಗರಾಜ್ ಹಾಗೂ ಅನೇಕ ಸದಸ್ಯರು ಪಾಲ್ಗೊಂಡಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group