ಬೈಲಹೊಂಗಲ: ನಾಡಿನ ಹಿತ ಚಿಂತಕ ಕೇಂದ್ರ ಸರ್ಕಾರದಲ್ಲಿ ರಾಜ್ಯ ಖಾತೆ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ ದಿವಂಗತ ಸುರೇಶ ಅಂಗಡಿಯವರ ಜನ್ಮದಿನದ ನಿಮಿತ್ತ ಜನರ ಉತ್ತಮ ಆರೋಗ್ಯಕ್ಕಾಗಿ ಇಮ್ಯುನಿಟಿ ಶಕ್ತಿ ವರ್ಧಕ ಔಷಧಿ ಕಿಟ್ ಗಳನ್ನು ಬೆಳಗಾವಿ ಗ್ರಾಮಾಂತರ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಉಚಿತವಾಗಿ ಗ್ರಾಮಸ್ಥರಿಗೆ ವಿತರಿಸಿದರು.
ಮಂಗಳವಾರ ಸಮೀಪದ ಹೊಸೂರ ಗ್ರಾಮದಲ್ಲಿ ಇಮ್ಯುನಿಟಿ ವರ್ಧಕ ಔಷಧ ಕಿಟ್ ವಿತರಿಸಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಮೋದೀಜಿ ಸರ್ಕಾರ 2ನೆ ಅವಧಿಯ 2 ನೇ ವರ್ಷ ಯಶಸ್ವಿಯಾಗಿ ಪೂರೈಸುತ್ತಿದ್ದು ಸಂತೋಷ ಒಂದು ಕಡೆಯಾದರೆ ಮಹಾಮಾರಿ ಕರೋನಾ ಅಟ್ಟಹಾಸ ಜನರ ಜೀವನವನ್ನೆ ಮಣ್ಣು ಪಾಲು ಮಾಡುವುದರ ಜೊತೆಗೆ ನಮ್ಮ ಭಾಗದ ಧೀಮಂತ ನಾಯಕ ಸುರೇಶ ಅಂಗಡಿಯವರನ್ನು ನಮ್ಮಿಂದ ಕಸಿದುಕೊಂಡಿದೆ. ಅವರಿಲ್ಲದ ಈ ಕ್ಷೇತ್ರ ಬಡವಾಗಿದೆ ಅವರ ಜನ್ಮದಿನದ ನಿಮಿತ್ತ ಗ್ರಾಮಸ್ಥರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಇಮ್ಯುನಿಟಿ ವರ್ಧಕ ಔಷಧ ಕಿಟ್ ವಿತರಿಸಿ ಸೇವಾ ಹೀ ಸಂಘಟನೆಯಡಿ ಜನರ ಸೇವೆ ಮಾಡಲಾಗುತ್ತಿದೆ ಎಂದರು.
ಕ್ಷೇತ್ರದ ಜನತೆ ಇಂದು ಸುರೇಶ ಅಂಗಡಿಯವರು ಇಲ್ಲದೆ ಅವರ ಜನ್ಮದಿನ ಆಚರಿಸುತ್ತಿರುವದು ಎಲ್ಲರಿಗೂ ದುಃಖದ ಸಂಗತಿಯಾಗಿದ್ದು ಈ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಸಾಕಷ್ಟು ಯೋಜನೆಯನ್ನು ತಂದ ಅವರು ಎಂದೆಂದಿಗೂ ಅಜರಾಮರವಾಗಿದ್ದಾರೆ.
ಜನಪ್ರತಿನಿಧಿಗಳಾಗಿ ಅವರು ಮನೆಯಲ್ಲಿಯೆ ಕುಳಿತುಕೊಳ್ಳದೆ ಕೋವಿಡ್ ಸಂದರ್ಭದಲ್ಲಿ ತೊಂದರೆಗೆ ಒಳಗಾದ ಜನರ ಸೇವಾ ಕಾರ್ಯ ಮಾಡಲು ಅವರು ಕ್ಷೇತ್ರಾದ್ಯಂತ ಸಂಚರಿಸಿ ಜನಸೇವೆಯ ಸಂದರ್ಭದಲ್ಲಿ ಕೋವಿಡ್ ಕ್ಕೆ ತುತ್ತಾಗಿ ಅಸುನೀಗಿದರು ಅವರು ನಮ್ಮ ಮನಸ್ಸಿನಿಂದ ಮರೆತೆನೆಂದರೂ ಮರೆಯಲಾಗದ ಮಾಣಿಕ್ಯ ಎಂದರು. ಅವರು ಕಂಡ ಕನಸನ್ನು ನೂತನ ಸಂಸದರಾದ ಅವರ ಶ್ರೀಮತಿಯವರಾದ ಮಂಗಲಾ ಅಂಗಡಿ ನೆರವೆರಿಸುತ್ತಾರೆ. ಅವರು ಸಹಿತ ಇಂದು ಕ್ಷೇತ್ರಾದ್ಯಂತ ಪ್ರವಾಸ ಕೈಗೊಂಡು ಕೋವಿಡ್ ಸುರಕ್ಷಾ ಕ್ರಮಕ್ಕೆ ನಡೆಸುತ್ತಿರುವ ಸಭೆಗಳು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪ್ರಶಾಂತ ಮಾಕಿ, ಸಂಜಯ ಜುಮೇತ್ರಿ, ಬಸವರಾಜ ವಿವೇಕಿ, ನಾಗರಾಜ ಬುಡಶಟ್ಟಿ, ಸೋಮಪ್ಪ ಕೋಟಗಿ, ಮಹಾವೀರ ಕರಡಿಗುದ್ದಿ, ಮಹಾಂತೇಶ ಬೋಳೆ, ನಾಗಪ್ಪ ಹೊಸಮನಿ, ಉಳವಪ್ಪ ಬುಡಶಟ್ಟಿ, ಈರಪ್ಪ ನವಲಗಿ ಇತರರು ಇದ್ದರು.