ನಾಗನೂರ ನೇಕಾರರಿಗೆ ದಿನಸಿ ಕಿಟ್ ವಿತರಣೆ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಮೂಡಲಗಿ – ತಾಲೂಕಿನ ನಾಗನೂರ ಪಟ್ಟಣದಲ್ಲಿ ದಿನಾಂಕ 1 ರಂದು
ಕೋರೋನಾ ಸಂದರ್ಭದಲ್ಲಿ ರಾಜ್ಯದಾದ್ಯಂತ ಬಡ ನೇಕಾರರ ಬದುಕು ಅತ್ಯಂತ ದುಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಕೊಡುಗೈ ದಾನಿಗಳು, ಕೇಂದ್ರ ಕುರುಹಿನಶೆಟ್ಟಿ ಸಮಾಜದ ಉಪಾಧ್ಯಕ್ಷರು ಹಾಗೂ ಕೆಕೆಜಿಎಸ್ ಸಂಧ್ಯಾ ಸೋಮಶೇಖರ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಸೋಮಶೇಖರ ಮತ್ತು ಶ್ರೀಮತಿ ಸಂಧ್ಯಾ ಸೋಮಶೇಖರ ಅವರು ತಮ್ಮ 36ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಾದ್ಯಂತ ಬಡ ನೇಕಾರ ಕುರುಹಿನಶೆಟ್ಟಿ ಕುಟುಂಬಗಳಿಗೆ ಸಾವಿರಾರು ಉಚಿತ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಇಂದು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರಿನಲ್ಲಿ ಕುರುಹಿನ ಶೆಟ್ಟಿ ಸಮಾಜದ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.

- Advertisement -

ಈ ಸಂದರ್ಭದಲ್ಲಿ ಕಿನ್ನಾಳ ಗ್ರಾಮದ ಸಮಾಜ ಬಾಂಧವರು ಮಾತನಾಡಿ, ಸಮಾಜಕ್ಕಾಗಿ ಸದಾ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಹಸ್ತ ಚಾಚುವ ಶ್ರೀಮತಿ ಸಂಧ್ಯಾ ಹಾಗೂ ಸೋಮಶೇಖರ ಅವರ ಮನಸ್ಸು ನಿಜಕ್ಕೂ ಅನುಕರಣೀಯ. ಕೊರೋನಾ ಮಹಾಮಾರಿಯ ಈ ಸಮಯದಲ್ಲಿ ಬಾಂಧವ್ಯದ ಬೆಸುಗೆಗಳೆ ಬಿರುಕು ಬಿಟ್ಟು ಕೇವಲ ಸ್ವಾರ್ಥಕ್ಕಾಗಿ ಬಡಿದಾಡುವ ಈ ಸಂದರ್ಭದಲ್ಲಿ ಮಾನವೀಯತೆಯೇ ಮೂಲ ಧರ್ಮ ಎಂದು ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗಲು ಸಹಾಯ ಮಾಡುವ ಅವರ ಸೇವಾ ಮನೋಭಾವ ಇಂದು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಕುರುಹಿನಶೆಟ್ಟಿ ಸಮಾಜದ ಸಮಾಜದ ಹಿರಿಯರಾದ ಶ್ರೀಶೈಲ ಬಿಸನಕೊಪ್ಪ, ಗಿರಮಲ್ಲಪ್ಪ ಮರಿಜಾಡರ, ಕಂಕಣವಾಡಿಯ ವಕೀಲರಾದ‌ ಶಿವಶಂಕರ ಬೋಳಜಾಡರ, ಮೂಡಲಗಿಯ‌ ಮಹಾಲಿಂಗ ಒಂಟಗೂಡಿ, ಶಿವ ಪುತ್ರ ಬಾಗೇವಾಡಿ, ಕಲ್ಲಪ್ಪ ಬಾಗೇವಾಡಿ, ಶಿವಕುಮಾರ ಗುದಗಪ್ಪನವರ ಉಪಸ್ಥಿತರಿದ್ದರು.

ಕಿಟ್ ಪಡೆದ ಎಲ್ಲರೂ ದಾನಿಗಳಾದ ಸಂಧ್ಯಾ ಸೋಮಶೇಖರ ಅವರ ಈ ನಿಸ್ವಾರ್ಥ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಕುಲದೈವ ಶ್ರೀ ನೀಲಕಂಠೇಶ್ವರನು ಆಯುರಾರೋಗ್ಯ ಕೊಟ್ಟುಕಾಪಾಡಲಿ ಎಂದು ಹಾರೈಸಿದರು.

ವರದಿ: ಡಿ ಬಿ ಗುದಗಪ್ಪನವರ, ನಾಗನೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!