spot_img
spot_img

ಬಕ್ರೀದ್ ಹಬ್ಬದ ಪ್ರಯುಕ್ತ ಅಲೆಮಾರಿ ಜನಾಂಗಕ್ಕೆ ದಿನಸಿ ಕಿಟ್ ವಿತರಣೆ

Must Read

ಮೂಡಲಗಿ: ಬಕ್ರೀದ್ ಹಬ್ಬವು ತ್ಯಾಗ ಬಲಿದಾನಗಳ ಸಂಕೇತವಾಗಿದ್ದು ಬಡ ನಿರ್ಗತಿಕರು ಹಸಿವಿನಿಂದ ಬಳಲಬಾರದೆಂದು ದಿನ ಬಳಕೆಯ ದಿನಸಿ ಕಿಟ್ ನೀಡಿ ನೆರವಾಗುತ್ತಿದ್ದೇನೆ ಎಂದು ಸಮಾಜ ಸೇವಕ ಇಜಾಜ ಕೊಟ್ಟಲಗಿ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿ ತಂಗಿದ್ದ 13 ಕುಟುಂಬದ 40 ಸದಸ್ಯರಿರುವ ಸಂಚಾರಿ ಅಲೆಮಾರಿ ಜನಾಂಗಕ್ಕೆ ಬಕ್ರೀದ್ ಹಬ್ಬದ ಪ್ರಯುಕ್ತ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿ, ಹೊಟ್ಟೆ ಪಾಡಿಗಾಗಿ ಈ ಅಲೆಮಾರಿಗಳು ಇಲ್ಲಿ ತಂಗಿರುವ ವಿಷಯ ತಿಳಿದು ನನ್ನ ಸ್ನೇಹಿತ ಬಳಗದೊಂದಿಗೆ ಮುಂದೆ ಬಂದು ಅಲ್ಪ ಪ್ರಮಾಣದ ಸೇವೆ ಸಲ್ಲಿಸಿರುವುದಾಗಿ ಹೇಳಿ,ಸರ್ಕಾರ ಇಂತಹ ನಿರ್ಗತಿಕ ಅಲೆಮಾರಿಗಳಿಗೆ ಸಹಾಯ ಸೌಲಭ್ಯ ನೀಡಿ ಇವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅವರಿಗೆ ಶಾಶ್ವತವಾದ ಸೂರು ಕಲ್ಪಿಸಿ ನೆರವಾಗುವ ಅವಶ್ಯವಿದೆ ಎಂದು ಅಬಿಪ್ರಾಯಪಟ್ಟರು.

ಈ ವೇಳೆಯಲ್ಲಿ ಇಜಾಜ ಕೊಟ್ಟಲಗಿ ಸ್ನೇಹಿತ ಬಳಗದ ಸುಭ್ಹಾನ ಅರಳಿಮಟ್ಟಿ, ಅಬ್ದುಲ್ ಪೈಲವಾನ, ರಫೀಕ ಪೈಲವಾನ, ಶಿಕಂದರ ಬಾಗವಾನ, ಪಡದಪ್ಪ ಕೋತಿನ, ಮುಸ್ತಫ್ ಕಲಾರಕೊಪ್ಪ, ಮಹೆಬೂಬ ಬಾಗವಾನ, ಭರತೇಶ ಪಾಟೀಲ, ಪ್ರವೀಣ ನಾಯ್ಕ ಇನ್ನಿತರರು ಇದ್ದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!