ಸವದತ್ತಿ :ತಾಲೂಕಿನ ಹೂಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಬೆಳಗಾವಿಯ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎಸ್‌ಬಿಐ ಫೌಂಡೇಶನ್ ಇವರ ಸಹಯೋಗದಲ್ಲಿ ವೈಯಕ್ತಿಕ ಶಿಕ್ಷಣ ತರಬೇತಿ ಕಾರ್ಯಕ್ರಮ ಮತ್ತು ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಜಿ.ಬಿ ತಳವಾರ್ ವಹಿಸಿಕೊಂಡಿದ್ದರು. ಅರುಣ್ ಕುಮಾರ್ ಎಂ.ಜಿ ಶಾಖಾ ಮುಖ್ಯಸ್ಥರು ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಂಗಳೂರಿನ ಯೋಜನಾ ವ್ಯವಸ್ಥಾಪಕರಾದ ಡಾ.ಜಯಂತ ಕುಮಾರ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ ಬಿ ಕಡಕೋಳ, ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.
ಡಾ.ಜಯಂತ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಾರ್ಯಕ್ರಮದ ಗುರಿ ಉದ್ದೇಶ ಹಾಗೂ ಸಮನ್ವಯ ಶಿಕ್ಷಣ ಎಂದರೇನು, ವೈಯಕ್ತಿಕ ಶಿಕ್ಷಣ ಎಂದರೇನು? ಅದರ ಮಹತ್ವ, ಶಿಕ್ಷಕರ ಮತ್ತು ಅಂಗವಿಕಲ ಮಕ್ಕಳ ತಂದೆ ತಾಯಿ ಪಾತ್ರವೇನು ಎಂದು ಸವಿಸ್ತಾರವಾಗಿ ತಿಳಿಸುತ್ತಾ ಸಂಸ್ಥೆಯು ನಡೆದ ಬಂದ ಹಾದಿಯನ್ನು ತಿಳಿಸಿದರು.
ಮಕ್ಕಳಿಗೆ ಪೌಷ್ಟಿಕ ಆಹಾರದ ಪ್ರಾಮುಖ್ಯತೆ ವಿಕಲಚೇತನರು ಮತ್ತು ಸಾಮಾನ್ಯ ಮಕ್ಕಳು ಸೇರಿ ಕಲಿಯಬೇಕು ಆಟ ಪಾಠ ಶಾಲೆಯಲ್ಲಿ ಒಟ್ಟಿಗೆ ಕಲಿಯಬೇಕು ಕಲಿಯಬೇಕು ನಲಿಯಬೇಕು ಹಿತನುಡಿಗಳನ್ನು ನುಡಿದರು.
ವೈ ಬಿ ಕಡಕೋಳ ಮಾತನಾಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಶಿಸುತ್ತಾ ಸಂಸ್ಥೆಯ ಕೆಲಸ ಕಾರ್ಯಕ್ರಮಗಳ ಬಗ್ಗೆ ಹೇಳಿದರು. ಬೆಳಗಾವಿಯ ಸಮರ್ಥನಂ ಅಂಗವಿಕಲರ ಸಂಸ್ಥೆ ಯೋಜನಾ ಸಂಯೋಜಕರಾದ ಶಿವಕುಮಾರ ಹಲ್ಯಾಳಿ ವರು ವೈಯಕ್ತಿಕ ಶಿಕ್ಷಣ ಕಲಿಕಾ ಸಾಮಗ್ರಿಗಳ ಬಳಕೆ, ಮಹತ್ವ ಮತ್ತು ಬಳಕೆಯ ವಿಧಾನಗಳು ತಿಳಿಸುತ್ತಾ ಮಕ್ಕಳಲ್ಲಿ ಶಿಸ್ತು ಬದ್ಧತೆ ಮತ್ತು ಮಕ್ಕಳ ನಡುವಳಿಕೆ ಮಗುವಿನ ಬೆಳವಣಿಗೆಗೆ ಕಾರಣವಾಗುವ ಅಂಶಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೆಳಗಾವಿಯ ಲ್ಲಿ ಜರುಗಿದ ವಿಕಲಚೇತನ ಮಕ್ಕಳ ಕ್ರೀಡಾಕೂಟದಲ್ಲಿ ಹೂಲಿ ಶಾಲೆಯ ವಿದ್ಯಾರ್ಥಿ ನಿ ನಾಗವೇಣಿ ಮುಳ್ಳೂ ರ ಇವಳು ಗುಂಡು ಎಸೆತ ಸ್ಪರ್ಧೆಯಲ್ಲಿ ಜಿಲ್ಲಾ ಹಂತದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಆದ ಪ್ರಯುಕ್ತ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸವದತ್ತಿ ವಲಯದ ಗ್ರಾಮೀಣ ಭಾಗದ ಶಾಲೆ ಅಭಿವೃದ್ಧಿ ಮಂಡಳಿ ಹಾಗೂ ಪೋಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗ ಹಾಗೂ ವಿಶೇಷ ಚೇತನ ಮಕ್ಕಳು ಶಿಕ್ಷಕರಾದ ಎಸ್ ಕೆ ಪಾಟೀಲ.ಎಸ್ ಎಂ ಉಡಕೇರಿ. ಗುರು ಮಾತೆ ಆರ್ ಎಸ್ ನಡಮನಿ ಸೇರಿದಂತೆ ಎಲ್ಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.