ಬೆನಕಟ್ಟಿ:ಯರಗಟ್ಟಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆನಕಟ್ಟಿ ಯಲ್ಲಿ ಸಮರ್ಥನಂ ಸಂಸ್ಥೆ ಬೆಳಗಾವಿ ಇವರು ಕೊಡಮಾಡಿದ ವಿಕಲಚೇತನ ಮಕ್ಕಳ ಕಲಿಕೋಪಕರಣಗಳ ವಿತರಣಾ ಸಮಾರಂಭ ಇಂದು ಜರುಗಿತು.
ಸಮಾರಂಭ ದ ಅಧ್ಯಕ್ಷತೆ ಯನ್ನು ತಲ್ಲೂರು ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಗುರು ದೇವಿ ಮಲಕನ್ನವರ ವಹಿಸಿದ್ದರು.
ಯರಗಟ್ಟಿ ಹಾಗೂ ಮುರಗೋಡ ವಲಯದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ ಬಿ ಕಡಕೋಳ.ಲ, ಮುನವಳ್ಳಿ ವಲಯದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಡಿ ಎಲ್ ಭಜಂತ್ರಿ, ಸಮರ್ಥನಂ ಸಂಸ್ಥೆ ಬೆಳಗಾವಿ ಯ ಸವದತ್ತಿ ತಾಲೂಕು ಸಮನ್ವಯ ಶಿಕ್ಷಣ ಶಿಕ್ಷಕ ಹನುಮಂತ ಅಣ್ಣಿಗೇರಿ, ಶಾಲೆಯ ಹಿರಿಯ ಶಿಕ್ಷಕರಾದ ಎಮ್ ಎಸ್. ಹಾದಿಮನಿ, ಯರಗಟ್ಟಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾದ ಮಹಾಂತೇಶ ಗಿಲಾಕಿ, ಮದ್ಲೂರು ಗ್ರಾಮ ಪಂಚಾಯಿತಿ ವ್ಹಿ. ಆರ್ ಡಬ್ಲು ಎಚ್. ಎ. ಮುಲ್ಲಾ, ಎಸ್.ಕೆ.ಚೌಕಿಮಠ, ವಿಕಲಚೇತನ ಮಕ್ಕಳ ಪಾಲಕರು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮದ್ಲೂರು ಗ್ರಾಮ ಪಂಚಾಯಿತಿ ವ್ಹಿ. ಆರ್ ಡಬ್ಲು ಎಚ್. ಎ. ಮುಲ್ಲಾ.ಸಮರ್ಥನಂ ಸಂಸ್ಥೆಯ ಸಮನ್ವಯ ಶಿಕ್ಷಣ ಶಿಕ್ಷಕ ಹನುಮಂತ ಅಣ್ಣೀಗೇರಿ. ಯರಗಟ್ಟಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾದ ಮಹಾಂತೇಶ ಗಿಲಾಕಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣ, ಅವರು ಸ್ವತಂತ್ರವಾಗಿ ಬದುಕುವ ಸಾಮರ್ಥ್ಯಗಳನ್ನು ಬೆಳೆಸುವಲ್ಲಿ ಪುನರ್ವಸತಿಯು ಅತ್ಯಗತ್ಯವಾಗಿದೆ ಅವರಿಗೆ ಕಲಿಕೋಪಕರಣಗಳ ವಿತರಣೆ ಮಾಡುತ್ತಿರುವ ಸಮರ್ಥನಂ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ತಲ್ಲೂರು ಸಮೂಹ ಸಂಪನ್ಮೂಲ ವ್ಯಕ್ತಿ ಗುರು ದೇವಿ ಮಲಕನ್ನವರ ತಿಳಿಸಿದರು.
ಸಮರ್ಥನಂ ಸಂಸ್ಥೆ ವಿಕಲಚೇತನ ಮಕ್ಕಳ ಸಲುವಾಗಿ ಕೈಗೊಳ್ಳುತ್ತಿರುವ ವಿವಿಧ ಕಾರ್ಯಗಳನ್ನು ಕುರಿತು ವೈ ಬಿ ಕಡಕೋಳ ತಿಳಿಸುತ್ತಾ ಮಕ್ಕಳ ಶಿಕ್ಷಣಕ್ಕಾಗಿ ವಿತರಿಸುವ ಕಿಟ್ ಒಳಗೊಂಡ ಸಾಮಗ್ರಿಗಳನ್ನು ಈ ಸಂದರ್ಭದಲ್ಲಿ ಪರಿಚಯಿಸುವ ಜೊತೆಗೆ ಮಕ್ಕಳಿಗೆ ವಿತರಣಾ ಸಮಾರಂಭ ಜರುಗಿಸಿದರು.
ಶಾಲೆಯ ಶಿಕ್ಷಕರಾದ ಎ. ಬಿ. ಲಕ್ಕನ್ನವರ, ಎಂ. ಎಸ್. ಕುಂಬಾರ, ಶ್ರೀ ಮತಿ ಎ ಎಫ್ ಬೈಲಪ್ಪನವರ, ಜೆ ಎಚ್ ಬಾಂಡಲಕರ, ಎಂ. ಬಿ. ರಂಗನ್ನವರ, ಕೆ.ಎಸ್ ಮಾದರ ಸೇರಿದಂತೆ ಪಾಲಕರು ಉಪಸ್ಥಿತರಿದ್ದರು. ಎ. ಬಿ. ಲಕ್ಕನ್ನವರ ಸ್ವಾಗತಿಸುವ ಜೊತೆಗೆ ಕಾರ್ಯಕ್ರಮ ನಿರೂಪಿಸಿದರು. ಎಂ. ಎಸ್. ಕುಂಬಾರ ವಂದಿಸಿದರು