spot_img
spot_img

ಅವರಾದಿಯಲ್ಲಿ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಿಸಾನ ಕಾಂಗ್ರೆಸ್‌ದಿಂದ ಪ್ರತಿಭಟನೆ

Must Read

spot_img
- Advertisement -

ಮೂಡಲಗಿ: ಪೆಟ್ರೋಲ್, ಡಿಸೈಲ್ ಬೆಲೆ ಏರಿಕೆ ಖಂಡಿಸಿ ಬೆಳಗಾವಿ ಜಿಲ್ಲಾ ಕಿಸಾನ ಕಾಂಗ್ರೆಸ ವತಿಯಿಂದ ಜಿಲ್ಲಾ ಕಿಸಾನ ಕಾಂಗ್ರೆಸ ಅಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ ಅವರ ನೇತೃತ್ವದಲ್ಲಿ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ  ಉಟಗಿ ಅವರ ಪೆಟ್ರೋಲ್ ಪಂಪ್ ದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂಧರ್ಭದಲ್ಲಿ ಕಲ್ಲಪ್ಪಗೌಡ ಲಕ್ಕಾರ ಮಾತನಾಡಿ, ಪಂಚರಾಜ್ಯಗಳ ಚುನಾವಣೆಗೋಸ್ಕರ ಬೆಲೆ ಕಡಿಮೆ ಮಾಡಿ ಮತ್ತೆ ಪೆಟ್ರೋಲ್, ಡಿಸೈಲ್ ಮತ್ತು ಅನಿಲ ಬೆಲೆಯನ್ನು ದಿನದಂದ ದಿನಕ್ಕೆ ಏರಿಕೆ ಮಾಡುತ್ತಿರುವುದು ಸರಿಯಲ್ಲ. ಬೆಲೆ ಕಡಿಮೆ ಮಾಡದಿದ್ದಲ್ಲಿ ದೇಶಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಕಾರ್ಯಧ್ಯಕ್ಷ ಭೀಮಶಿ ಕಾರದಗಿ ಮಾತನಾಡಿ, ರೈತರು, ಕಾರ್ಮಿಕರು, ಬಡವರು ಮತ್ತು ದುಡಿಯುವ ವರ್ಗವನ್ನು ಲೆಕ್ಕಿಸದೆ ಬೆಲೆಯನ್ನು ಹೆಚ್ಚಿಸಿ ಬದುಕಲಿಕ್ಕೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ ಅವರು ತಕ್ಷಣ ಬೆಲೆ ಕಡಿಮೆ ಮಾಡಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿ ಕೊಡಬೇಕೆಂದು ಆಗ್ರಹಿಸಿದರು.

- Advertisement -

ಪ್ರತಿಭಟನೆಯಲ್ಲಿ ಜಿಲ್ಲಾ ಕಿಸಾನ್ ಉಪಾಧ್ಯಕ್ಷ ಕುಮಾರ ಕಾತರಕಿ, ಕಾರ್ಯಾಧ್ಯಕ್ಷ ರಮೇಶ ಮೋಕಾಶಿ, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಗಮಣ್ಣ ಕಳಸಣ್ಣವರ, ಕೌಜಲಗಿ ಬ್ಲಾಕ್ ಯೂಥ್ ಕಾಂಗ್ರೆಸ್ ಅಧ್ಯಕ್ಷ  ಮಂಜು ಮಸಗುಪ್ಪಿ ಕೌಜಲಗಿ ಬ್ಲಾಕ್ ಕಿಸಾನ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಕರಿಗಾರ, ಕಾಂಗ್ರೆಸ್ ಮುಖಂಡರಾದ ಗುರಪ್ಪ ಸಾಹುಕಾರ ಉಟಗಿ, ಸಂಜು ಬಾಗಿ ಹಾಗೂ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತಿತರರು ಇದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group