spot_img
spot_img

ದಿ.12 ರಿಂದ ಜಿಲ್ಲಾ ಮಟ್ಟದ ಖೋ ಖೋ ಕ್ರೀಡಾಕೂಟ

Must Read

ಸಿಂದಗಿ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಖೋ ಖೋ ಕ್ರೀಡಾಕೂಟವು ಅಕ್ಟೋಬರ 12 ರಂದು ಚಿಕ್ಕಸಿಂದಗಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ವತಿಯಿಂದ ಕೆ ಎಸ್ ಮಠ ಶಾಲಾ ಆವರಣದಲ್ಲಿ ಜರುಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎಂ ಹರನಾಳ ಹೇಳಿದರು.

ಕ್ರೀಡಾವರಣವನ್ನು ವೀಕ್ಷಿಸಿ ಮಾತನಾಡಿ, ಜಿಲ್ಲೆಯ 7 ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ ಬಾಲಕಿಯರ ಒಟ್ಟು 28 ತಂಡಗಳು ಭಾಗವಹಿಸಲಿದ್ದು ಅದರಲ್ಲಿ 168 ಬಾಲಕರು, 168 ಬಾಲಕಿಯರು ಒಟ್ಟು 336 ಕ್ರೀಡಾಪಟುಗಳು ಭಾಗವಹಿಸುವರು. ಜಿಲ್ಲೆಯ ವಿವಿಧ ತಾಲೂಕಿನ 112 ತರಬೇತುದಾರ ದೈಹಿಕ ಶಿಕ್ಷಕರು 87 ಜನ ನಿರ್ಣಾಯಕರು ಅಲ್ಲದೇ ಸಿಂದಗಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಲ್ಲ ದೈಹಿಕ ಶಿಕ್ಷಕರು ಪಾಲ್ಗೊಳ್ಳುವರು.

ಭಾಗವಹಿಸುವ ಸ್ಪರ್ಧಾಳುಗಳಿಗೆ ಸುಸಜ್ಜಿತವಾಗಿ, 4  ಅಂಕಣಗಳನ್ನು ನಿರ್ಮಿಸಿದ್ದು ಅಂಕಣ 01 – ನೀರಜ್ ಚೋಪ್ರಾ, ಅಂಕಣ 02- ಅಭಿನವ್ ಬಿಂದ್ರಾ ಅಂಕಣ 03- ರಾಜೇಶ್ವರಿ ಗಾಯಕವಾಡ, ಅಂಕಣ 04- ಮಮತಾ ಪೂಜಾರಿ ಹೀಗೆ 4 ಜನ ರಾಷ್ಟ್ರ ಮಟ್ಟದ ಆಟಗಾರರ ಹೆಸರನ್ನು ಇಡಲಾಗಿದೆ. ಎಲ್ಲ ಅಂಕಣಗಳಿಗೆ ಪ್ರೇಕ್ಷಕರು ಪ್ರವೇಶಿಸದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳಿಗೆ, ನಿರ್ಣಾಯಕರಿಗೆ ಮತ್ತು ಆ ತಂಡದ ತರಬೇತುದಾರರಿಗೆ ಪ್ರತಿ ಪಂದ್ಯದ ನಂತರ ತಲಾ ಒಂದರಂತೆ ಬಾಳೆಹಣ್ಣು ಮತ್ತು ಸೇಬು ಹಣ್ಣನ್ನು ವಿತರಿಸಲಾಗುವುದು. ಅಲ್ಲಿ ಸೇರಲಿರುವ ಆಟಗಾರರು ಸೇರಿದಂತೆ ಪ್ರೇಕ್ಷಕರಿಗೂ ಸಹ ಅಂದರೆ ಸುಮಾರು 1500 ಜನರಿಗೆ ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ.

ಬೆಳಿಗ್ಗೆ 9:30 ಕ್ಕೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು ಕ್ರೀಡಾಜ್ಯೋತಿಯು ಚಿಕ್ಕಸಿಂದಗಿಯ ವೀರೇಶ್ವರ ಮಠದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಮಧ್ಯದಲ್ಲಿ ಸ್ಥಳೀಯ ರಾಷ್ಟ್ರ ಮಟ್ಟದ ಖೋ ಖೋ ಆಟಗಾರ ಹಣಮಂತ ರೂಗಿ ಹೊತ್ತು ತರುವನು. ಈ ಕಾರ್ಯಕ್ರಮದಲ್ಲಿ ಶಾಸಕ ರಮೇಶ ಭೂಸನೂರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಪೂಜ್ಯರು ಸೇರಿದಂತೆ ವಿವಿಧ ಎಲ್ಲ ಇಲಾಖಾ ಅಧಿಕಾರಿ ವರ್ಗ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!