spot_img
spot_img

ಜಿಲ್ಲಾ ಮಟ್ಟದ ಖೋಖೋ ಚದುರಂಗ ಹಾಗೂ ಯೋಗಾಸನ ಕ್ರೀಡಾಕೂಟ ಸಮಾರಂಭ

Must Read

spot_img

ಮುನವಳ್ಳಿ – ಸಿಂದೋಗಿ ಮುನವಳ್ಳಿಯ ಡಾ.ಜಿ.ವ್ಹಿ.ನಾಯಿಕ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ೨೦೨೧-೨೨ ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಬೆಳಗಾವಿ ಜಿಲ್ಲಾ ಮಟ್ಟದ ಖೋ-ಖೋ, ಚದುರಂಗ ಹಾಗೂ ಯೋಗಾಸನ ಕ್ರೀಡಾಕೂಟ ಜರುಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಕ್ರೀಡಾ ಸಂಯೋಜಕರಾದ ಎಮ್.ಸಿ.ಧನ್ವಂತರ ಮಾತನಾಡಿ,“ ಪದವಿ ಪೂರ್ವ ಶಿಕ್ಷಣ ಇಲಾಖೆಯು ಕ್ರೀಡೆಗೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ತಿಳಿಸಿ,ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವು ತಮ್ಮ ತಮ್ಮ ಪ್ರತಿಭೆಯ ಮೂಲಕ ಜರುಗುತ್ತವೆ,ಎಲ್ಲವನ್ನೂ ಸಮನಾಗಿ ಸ್ವೀಕರಿಸುವ ಜೊತೆಗೆ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಿ”ಎಂದು ಕರೆ ನೀಡಿದರು.

ಸವದತ್ತಿ ತಾಲೂಕ ಕ್ರೀಡಾ ಸಂಯೋಜಕರಾದ ಆರ್.ಎಚ್.ಪಾಟೀಲ.ಮಾತನಾಡಿ,“ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿರಿ.ಜೊತೆಗೆ ಕ್ರೀಡಾಕೂಟದಲ್ಲಿ ಭಾಗವಹಿಸಿರಿ.ಕ್ರೀಡೆ ಕೇವಲ ಆಟಕ್ಕೆ ಸೀಮಿತವಾಗದೆ ದೈನಂದಿನ ಬದುಕಿನಲ್ಲಿ ದೈಹಿಕ ಶಾರೀರಿಕ ಸ್ವಾಸ್ಥ್ಯವನ್ನು ಕಾಪಾಡುವುದು” ಎಂದು ಕ್ರೀಡೆಯ ಮಹತ್ವವನ್ನು ತಿಳಿಸಿದರು.

ಸಂಸ್ಥೆಯ ಧರ್ಮದರ್ಶಿಗಳಾದ ಯಶವಂತ ಗೌಡರ ಮಾತನಾಡಿ,“ ನಮ್ಮದು ಕಿತ್ತೂರ ಕರ್ನಾಟಕ ನೆಲ.ಈ ನೆಲದಲ್ಲಿ ಹೋರಾಟದ ಛಲವಿದೆ.ಈ ಭಾಗದಿಂದ ಉತ್ತಮ ಆಟಗಾರರು ಬೆಳೆಯಲಿ” ಎಂದು ಆಶಿಸಿದರು.

ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿಗಳಾದ ವಾಯ್.ಎಂ.ಶಿಂಧೆ, ಮುನವಳ್ಳಿ ಪುರಸಭೆಯ ಮುಖ್ಯಾಧಿಕಾರಿಗಳಾದ ಮಹೇಂದ್ರ ತಿಮ್ಮಾಣಿ, ಸಿಂದೋಗಿ ಗ್ರಾಮ ಪಂಚಾಯತಿ ಪಿ.ಡಿ.ಓ.ರಮೇಶ ಬೆಡಸೂರ,ಸವದತ್ತಿ ತಾಲೂಕಾ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಆರ್.ಆಯ್.ಸಿದ್ಲಿಂಗನವರ,ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಭವಾನಿ ಖೊಂದುನಾಯ್ಕ ಉಪಸ್ಥಿತರಿದ್ದರು.

ಸಂಜೆ ಮಂಜುನಾಥ ಬೆಟಗೇರಿಯವರ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರುಗಳಾದ.ಡಾ.ವೈ.ಎಂ.ಯಾಕೊಳ್ಳಿ ಎಮ್.ಎಚ್.ಪಾಟೀಲ, ಕೆ.ಬಿ.ಕೋರಿ,ಎಸ್.ಎಂ.ವಾರೆಪ್ಪನವರ ಅತಿಥಿಗಳಾಗಿ ಉಪಸ್ಥಿತರಿದ್ದರು ಕಾರ್ಯಕ್ರಮ ನಿರೂಪಣೆ ಪಿ.ಎಸ್.ಪಟ್ಟಣಶೆಟ್ಟಿ. ಜಿ.ಎನ್.ಅಲಮನ್ನವರ ಸ್ವಾಗತಿಸಿದರು.ಪಿ.ಡಿ.ಪಶುಪತಿಮಠ ವಂದಿಸಿದರು.

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!